ಇದುವರೆಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ', 'ಸತ್ಯ', 'ಗಟ್ಟಿಮೇಳ' ಇಷ್ಟು ದಿನ ಟಾಪ್ 3 ಸ್ಥಾನದಲ್ಲಿದ್ದವು. ಆದರೆ, ಈ ಬಾರಿ 'ಪಾರು' ಸೀರಿಯಲ್ ಈ ಮೂರು ಧಾರಾವಾಹಿಗಳನ್ನು ಬೀಟ್ ಮಾಡಿ ನಂ. 1 ಸ್ಥಾನ ಗಿಟ್ಟಿಸಿಕೊಂಡಿದೆ.
ಕಳೆದ ಕೆಲ ವರ್ಷಗಳಿಂದ ನಂ. 1 ಸ್ಥಾನದಲ್ಲಿದ್ದ ಪಾರು ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಟಿಆರ್‌ಪಿ ರೇಟಿಂಗ್ನಲ್ಲಿ ಟಾಪ್ 5ನೇ ಸ್ಥಾನಕ್ಕೆ ಇಳಿದಿತ್ತು. ಆದರೆ, ಈ ವಾರ ಈ ಧಾರಾವಾಹಿ ಸದ್ಯ ಟಾಪ್ ಸ್ಥಾನದಲ್ಲಿದ್ದ ಧಾರಾವಾಹಿಗಳನ್ನು ಹಿಂದಿಕ್ಕಿ ನಂ. 1 ಸ್ಥಾನ ಪಡೆದುಕೊಂಡಿದೆ. ಇತ್ತೀಚಿನ ಸಂಚಿಕೆಗಳಲ್ಲಿ ಧಾರಾವಾಹಿಯ ನಾಯಕ ಆದಿ ತಾನು ಪ್ರೀತಿಸುತ್ತಿರುವ ಆ ಕಣ್ಣಿನ ಹುಡುಗಿ ಯಾರೆಂದು ತಿಳಿಯಲು ಒಂದು ಶೋ ಆಯೋಜಿಸಿರುತ್ತಾನೆ. ಕೊನೆಯಲ್ಲಿ ನಾಯಕನಿಗೆ ತಾನು ಪ್ರೀತಿಸುತ್ತಿರುವ ಹುಡುಗಿ ಬೇರೆ ಯಾರೂ ಅಲ್ಲ, ನಾಯಕಿ ಪಾರ್ವತಿ ಎಂಬುದು ಗೊತ್ತಾಗುತ್ತದೆ. ಈ ಸಂಚಿಕೆಗಳು ಅದ್ಧೂರಿಯಾಗಿ ಮೂಡಿ ಬಂದಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಾರು ಧಾರಾವಾಹಿಯನ್ನು ದಿಲೀಪ್ ರಾಜ್ ನಿರ್ಮಿಸುತ್ತಿದ್ದು, ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ವಿನಯ ಪ್ರಸಾದ್, ಮೋಕ್ಷಿತ್ ಪೈ, ಸಿದ್ದು ಮೂಲಿಮನಿ, ಶರತ್ ಭಾರದ್ವಾಜ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಸತ್ಯ, ಗಟ್ಟಿಮೇಳ ಟಾಪ್ 2 ಸ್ಥಾನದಲ್ಲಿ, ಜೊತೆ ಜೊತೆಯಲಿ ಮೂರನೇ ಸ್ಥಾನದಲ್ಲಿದೆ. ಇನ್ನು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಂಗಳ ಗೌರಿ ಮದುವೆ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮುದ್ದುಲಕ್ಷ್ಮೀ, ಉದಯ ಟವಿಯಲ್ಲಿ ನೇತ್ರಾವತಿ ಕ್ರಮವಾಗಿ ಮೊದಲನೇ ಸ್ಥಾನದಲ್ಲಿವೆ.
'ಪಾರು' ಧಾರಾವಾಹಿ ಈ ಹಿಂದೆ ಟಾಪ್ 5 ಧಾರಾವಾಹಿಗಳಲ್ಲಿ ಒಂದಾಗಿ ಇರುತ್ತಿತ್ತು. ಆದರೆ, ಈ ಬಾರಿ ಮೊದಲ ಸ್ಥಾನಕ್ಕೆ ಏರಿದೆ. ಆರಂಭದಲ್ಲಿ ಈ ಸೀರಿಯಲ್ ನಂಬರ್ 1 ಸ್ಥಾನದಲ್ಲಿದ್ದರೂ ಕೂಡ ಕಳೆದ ಎರಡು ವರ್ಷಗಳಿಂದ ಟಾಪ್ 5 ಸ್ಥಾನದೊಳಗೆ ಮಾತ್ರ ಇರುತ್ತಿತ್ತು. ಈ ವಾರದಲ್ಲಿ ಆದಿತ್ಯ ಪ್ರೀತಿ ಮಾಡುವ ಕಣ್ಣಿನ ಹುಡುಗಿ ಯಾರು ಅಂತ ಆದಿಗೆ ತಿಳಿಯುವ ಸಮಯ. ಹೀಗಾಗಿ, ಈ ಸೀರಿಯಲ್ ತುಂಬಾ ರೋಚಕವಾಗಿತ್ತು. ವರ್ಷಗಳು ಉರುಳುತ್ತಿದ್ದರೂ ಕೂಡ ಆದಿಗೆ ತಾನು ಪ್ರೀತಿ ಮಾಡುತ್ತಿರುವ ಕಣ್ಣಿನ ಹುಡುಗಿ ಪಾರ್ವತಿ ಅನ್ನೋದು ಗೊತ್ತಿರಲಿಲ್ಲ. ಒಟ್ಟಿನಲ್ಲಿ ಈಗ ಕಥೆಗೆ ಟ್ವಿಸ್ಟ್ ಸಿಕ್ಕಿದಂತಾಗಿದೆ.