ಹೈದರಾಬಾದ್: 94ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ (ಆಸ್ಕರ್ 2022) ಮಾರ್ಚ್ 27 ರಂದು ಲಾಸ್ ಏಂಜಲೀಸ್ (ಯುಎಸ್ಎ) ನಲ್ಲಿರುವ ಇಲ್ಲಿನ ಡಾಲ್ಬಿ ಥಿಯೇಟರ್ (ಓವೇಶನ್ ಹಾಲಿವುಡ್) ನಲ್ಲಿ ಅದ್ಧೂರಿಯಾಗಿ ನಡೆಯಿತು. ಅದ್ಧೂರಿ ಸಮರಂಭದಲ್ಲಿ ಈ ಬಾರಿ ಆಸ್ಕರ್ ಪ್ರಶಸ್ತಿ ಪಡೆದ ಎಲ್ಲಾ ವಿಜೇತರ ಹೆಸರನ್ನು ಬಹಿರಂಗ ಮಾಡಲಾಗಿದೆ.
ಇದನ್ನೂ ಓದಿ: ಆಸ್ಕರ್ 2022 : ಕಿವುಡ ಕುಟುಂಬ ಕಥೆಯಾಧಾರಿತ 'ಕೋಡಾ' ಅತ್ಯುತ್ತಮ ಸಿನಿಮಾ
ಎಮಿಲಿಯಾ ಜೋನ್ಸ್ ಅಭಿನಯದ CODA ಸಿನಿಮಾ ಮೂರು ಆಸ್ಕರ್ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡರೆ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ‘ಡ್ಯೂನ್’ ಆರು ಆಸ್ಕರ್ ಪ್ರಶಸ್ತಿಗಳನ್ನ ಪಡೆದುಕೊಂಡಿತು. ‘ದಿ ಪವರ್ ಆಫ್ ಡಾಗ್’ ಸಿನಿಮಾ 1 ಪ್ರಶಸ್ತಿಯನ್ನು ಮಾತ್ರ ಗೆದ್ದುಕೊಂಡಿತು. ಇದಕ್ಕೂ ಮುನ್ನ ಅತಿ ಹೆಚ್ಚು ಪ್ರಶಸ್ತಿಯನ್ನು ಗೆಲ್ಲುವ ಹಂತಕ್ಕೆ ಹೋಗಿದ್ದ ದಿ ಪವರ್ ಆಫ್ ದಿ ಡಾಗ್ ಈ ವರ್ಷ ಅತಿ ಹೆಚ್ಚು ಅಂದರೆ 12 ನಾಮನಿರ್ದೇಶನಗಳನ್ನು ಪಡೆದುಕೊಂಡಿತ್ತು. ಡ್ಯೂನ್ ಚಲನಚಿತ್ರವು 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ನಿನ್ನೆ ನಡೆದ ಕಾರ್ಯಕ್ರಮವನ್ನು ಪ್ರಪಂಚದಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ನೇರಪ್ರಸಾರ ಮಾಡಲಾಯಿತು.
ಇದನ್ನೂ ಓದಿ: ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ನಿರೂಪಕನ ಕಪಾಳಕ್ಕೆ ಹೊಡೆದದ್ದೇಕೆ?
ಭಾರತದಲ್ಲಿ ಈ ಕಾರ್ಯಕ್ರಮವು ಮಾರ್ಚ್ 28 ರಂದು ಬೆಳಗ್ಗೆ 5 ರಿಂದ ಪ್ರಸಾರವಾಯಿತು. ಕೋವಿಡ್ -19 ರ ಕಾರಣದಿಂದಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಸೋಂಕು ಕಡಿಮೆಯಾಗಿದ್ದು ಎಲ್ಲವವನ್ನು ಮರೆತು ಇಂದು ಈ ಮನರಂಜನಾ ಪ್ರಶಸ್ತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಬಾರಿಯ ಕಾರ್ಯಕ್ರಮವನ್ನು ರೆಜಿನಾ ಹಾಲ್, ಆಮಿ ಶುಮರ್ ಮತ್ತು ವಂಡಾ ಸ್ಕೈಸ್ ನಡೆಸಿಕೊಟ್ಟರು. ಭಾರತೀಯ ಚಿತ್ರರಂಗದ 'ರೈಟಿಂಗ್ ವಿತ್ ಫೈರ್' ಸಾಕ್ಷ್ಯಚಿತ್ರವನ್ನು ಆಸ್ಕರ್ ರೇಸ್‌ನಲ್ಲಿ ಸೇರಿಸಲಾಗಿದೆ. ಈವರೆಗೆ ಯಾವ ಚಿತ್ರವು ಎಷ್ಟು ಮತ್ತು ಯಾವ ಕ್ಷೇತ್ರದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಅನ್ನೋದನ್ನು ಇಲ್ಲಿ ತಿಳಿದಯೋಣ..
- ಅತ್ಯುತ್ತಮ ಚಿತ್ರ: 'ಕೋಡಾ' ಚಿತ್ರಕ್ಕೆ ಅತ್ಯುತ್ತಮ ಚಿತ್ರ ಎಂಬ ಬಿರುದು ಸಿಕ್ಕಿದೆ.
- ಅತ್ಯುತ್ತಮ ನಿರ್ದೇಶಕ: ದಿ ಪವರ್ ಆಫ್ ದಿ ಡಾಗ್ ಎಂಬ ಚಿತ್ರದ ನಿರ್ದೇಶಕರಾದ ಜೇನ್ ಕ್ಯಾಂಪಿಯನ್ ಅವರಿಗೆ ಧಕ್ಕಿದೆ.
- ಅತ್ಯುತ್ತಮ ನಟಿ: ದಿ ಐಸ್ ಆಫ್ ಟ್ಯಾಮಿ ಫಾಯೆ ಚಿತ್ರದ ಜೆಸ್ಸಿಕಾ ಚಸ್ಟೈನ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
- ಅತ್ಯುತ್ತಮ ನಟ: 'ಕಿಂಗ್ ರಿಚರ್ಡ್' ಪಾತ್ರದ ಅಭಿನಯಕ್ಕಾಗಿ ವಿಲ್ ಸ್ಮಿತ್ ಈ ಬಾರಿಯ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
- ಅತ್ಯುತ್ತಮ ಪೋಷಕ ನಟಿ: ವೆಸ್ಟ್ ಸೈಡ್ ಸ್ಟೋರಿ ಚಿತ್ರದ ಅರಿಯಾನಾ ಡಿಬೋಸ್ ಅವರಿಗೆ ಲಭಿಸಿದೆ.
- ಅತ್ಯುತ್ತಮ ಪೋಷಕ ನಟ: ಟ್ರಾಯ್ ಕೋಟ್ಸೂರ್ (CODA) ಅವರಿಗೆ ದೊರೆತಿದೆ.
- ಅತ್ಯುತ್ತಮ ಒರಿಜಿನಲ್ ಸ್ಕ್ರೀನ್ ಪ್ಲೇ: ಬೆಲ್ ಫಾಸ್ಟ್ ಚಿತ್ರಕ್ಕೆ ಸಕ್ಕಿದೆ.
- ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ ಪ್ಲೇ: CODA ಚಿತ್ರಕ್ಕೆ ಲಭಿಸಿದೆ.
- ಅತ್ಯುತ್ತಮ ಇಂಟರ್‌ನ್ಯಾಷನಲ್ ಫೀಚರ್ ಸಿನಿಮಾ: ಡ್ರೈವ್ ಮೈ ಕಾರ್ (ಜಪಾನ್)ಗೆ ಸಿಕ್ಕಿದೆ.
- ಅತ್ಯುತ್ತಮ ಆನಿಮೇಟೆಡ್ ಫೀಚರ್ ಸಿನಿಮಾ: ಎನ್‌ಕ್ಯಾಂಟೋ
- ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್: ಸಮ್ಮರ್ ಆಫ್ ಸೋಲ್
- ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್: ದಿ ಕ್ವೀನ್ ಆಫ್ ಬಾಸ್ಕೆಟ್ ಬಾಲ್
- ಅತ್ಯುತ್ತಮ ಆನಿಮೇಟೆಡ್ ಶಾರ್ಟ್: ದಿ ವಿಂಡ್‌ಶೀಲ್ಡ್ ವೈಪರ್
- ಅತ್ಯುತ್ತಮ ಲೈವ್ ಆ್ಯಕ್ಷನ್ ಶಾರ್ಟ್: ದಿ ಲಾಂಗ್ ಗುಡ್ ಬೈ
- ಅತ್ಯುತ್ತಮ ಒರಿಜಿನಲ್ ಸ್ಕೋರ್: ಡ್ಯೂನ್ ಚಿತ್ರಕ್ಕೆ ಒಲಿದಿದೆ.
- ಅತ್ಯುತ್ತಮ ಒರಿಜಿನಲ್ ಸಾಂಗ್: ನೋ ಟೈಮ್ ಟು ಡೈ
- ಅತ್ಯುತ್ತಮ ಛಾಯಾಗ್ರಹಣ: ಡ್ಯೂನ್ ಚಿತ್ರಕ್ಕೆ ಧಕ್ಕಿದೆ.
- ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್: ಕ್ರುಯೆಲ್ಲಾಗೆ ಲಭಿಸಿದೆ.
- ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಡ್ಯೂನ್
- ಅತ್ಯುತ್ತಮ ಮೇಕಪ್ ಮತ್ತು ಹೇರ್: ದಿ ಐಸ್ ಆಫ್ ಟ್ಯಾಮಿ ಫಾಯೆ)
- ಅತ್ಯುತ್ತಮ ಸೌಂಡ್: ಡ್ಯೂನ್ ಚಿತ್ರ ಪಡೆದುಕೊಂಡಿದೆ.
- ಅತ್ಯುತ್ತಮ ಸಂಕಲನ: ಡ್ಯೂನ್ ಚಿತ್ರಕ್ಕೆ ಸಿಕ್ಕಿದೆ.
- ಅತ್ಯುತ್ತಮ ವಿಶುವಲ್ ಎಫೆಕ್ಟ್ಸ್: ಡ್ಯೂನ್ ಚಿತ್ರಕ್ಕೆ ಲಭಿಸಿದೆ.