ETV Bharat / sitara

ಮೆಲ್ಬೋರ್ನ್ ಚಿತ್ರೋತ್ಸವಕ್ಕೆ ಆಯ್ಕೆಯಾದ 'ಒಂದಲ್ಲಾ ಎರಡಲ್ಲಾ'

ಕಳೆದ ವರ್ಷ ಆಗಸ್ಟ್​​​ನಲ್ಲಿ ಬಿಡುಗಡೆಯಾದ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಥಿಯೇಟರ್​​ನಲ್ಲಿ ಹೆಚ್ಚು ದಿನ ಇರದಿದ್ದರೂ ತಡವಾಗಿ ಮೆಚ್ಚುಗೆ ಗಳಿಸಿದೆ. ಅಲ್ಲದೆ ಮೆಲ್ಬೊರ್ನ್​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಲಿದೆ.

'ಒಂದಲ್ಲಾ ಎರಡಲ್ಲಾ'
author img

By

Published : Jul 19, 2019, 7:46 AM IST

ಉತ್ತಮ ಭಾವನಾತ್ಮಕ ಚಿತ್ರ ಹಾಗೂ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಅಚ್ಚುಕಟ್ಟಾಗಿ ಸಾರುವ ಕನ್ನಡ ಸಿನಿಮಾ ‘ರಾಮ ರಾಮ ರೇ’ ನಿರ್ದೇಶಿಸಿದ ಸತ್ಯ ಪ್ರಕಾಶ್ ಅವರ ಎರಡನೇ ಸಿನಿಮಾ ‘ಒಂದಲ್ಲಾ ಎರಡಲ್ಲಾ’ ಸಿನಿಮಾಕ್ಕೆ ತಡವಾಗಿಯಾದರೂ ಮೆಚ್ಚುಗೆ ದೊರೆಯುತ್ತಿದೆ.

‘ಒಂದಲ್ಲಾ ಎರಡಲ್ಲಾ’ ಸಿನಿಮಾಗೆ ಮಾಧ್ಯಮಗಳಲ್ಲಿ ಒಳ್ಳೆಯ ಪ್ರಶಂಸೆ ದೊರೆತರೂ ಚಿತ್ರಮಂದಿರದಲ್ಲಿ ಮಾತ್ರ ಹೆಚ್ಚು ದಿನಗಳು ಉಳಿಸಿಕೊಳ್ಳಲು ಸಾಧ್ಯವಾಗದೆ ಇದ್ದದ್ದಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಬೇಸರ ಇದೆ. ಆದರೆ ಈಗ ದೊರೆಯುತ್ತಿರುವ ಮೆಚ್ಚುಗೆಯಿಂದ ಕೊಂಚ ಸಮಾಧಾನ ಆಗಿದೆ. ಆಗಸ್ಟ್ 8 ರಿಂದ 15 ವರೆಗೆ ಮೆಲ್ಬೋರ್ನ್​ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಒಂದಲ್ಲಾ ಎರಡಲ್ಲಾ’ ಸಿನಿಮಾ ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಭಾರತೀಯ ಸಿನಿಮಾಗಳ ಪ್ರದರ್ಶನ ವಿಭಾಗದಲ್ಲಿ ಈ ಸಿನಿಮಾ ಕೂಡಾ ಪ್ರದರ್ಶವಾಗಲಿದೆ.

ಮಾಸ್ಟರ್ ರೋಹಿತ್ ಪಾಂಡವಪುರ ಮತ್ತು ಹಸುವೊಂದರ ಸುತ್ತ ಸುತ್ತುವ ಕಥೆ ಇದು. ಪುಟ್ಟ ಬಾಲಕ ಸಮೀರ ಕಳೆದು ಹೋದ ಹಸುವನ್ನು ಹುಡುಕಿಕೊಂಡು ಹೋಗುವ ಅಂಶವನ್ನು ಚಿತ್ರದ ನಿರೂಪಣೆಯಲ್ಲಿ ನಿರ್ದೇಶಕ ಡಿ. ಸತ್ಯಪ್ರಕಾಶ್ ಅಳವಡಿಸಿದ್ದರು. ಉಮಾಪತಿ ಈ ಹಿಂದೆ ‘ಹೆಬ್ಬುಲಿ’ ಸಿನಿಮಾ ನಿರ್ಮಿಸಿದ್ದರು. ಸದ್ಯಕ್ಕೆ ಅವರ ನಿರ್ಮಾಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಶೂಟಿಂಗ್ ನಡೆಯುತ್ತಿದೆ. ನಂತರ ಶ್ರೀಮುರಳಿ ಅಭಿನಯದಲ್ಲಿ ‘ಮದಗಜ’ ಆರಂಭವಾಗಲಿದೆ.

ಮೆಲ್ಬೊರ್ನ್ ಚಿತ್ರೋತ್ಸವಕ್ಕೆ ಒಂದಲ್ಲ ಎರಡಲ್ಲ

ಅತ್ಯುತ್ತಮವಾದ ಭಾವನಾತ್ಮಕ ಚಿತ್ರ ಹಿಂದೂ ಹಾಗೂ ಮುಸ್ಲಿಂ ಐಕ್ಯತೆಯನ್ನು ಸಹ ಅಚ್ಚುಕಟ್ಟಾಗಿ ಸಾರುವ ಕನ್ನಡ ಸಿನಿಮಾ ರಾಮ ರಾಮ ರೇ ನಿರ್ದೇಶನ ಮಾಡಿದ ಸತ್ಯ ಪ್ರಕಾಷ್ ಅವರಿಂದ ಎರಡನೇ ಸಿನಿಮಾ ಒಂದಲ್ಲ ಎರಡಲ್ಲ ಕನ್ನಡ ಸಿನಿಮಾಕ್ಕೆ ತಡವಾಗಿಯಾದರೂ ಮೆಚ್ಚುಗೆ ದೊರಕುತ್ತಿದೆ.

ಒಂದಲ್ಲ ಎರಡಲ್ಲ ಮಾಧ್ಯಮದಲ್ಲಿ ಒಳ್ಳೆಯ ಪ್ರಶಂಸೆ ಪಡೆದು ಚಿತ್ರಮಂದಿರದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದೆ ಇದ್ದದ್ದಕ್ಕೆ ನಿರ್ಮಾಪಕೆ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಬೇಜಾರೇನೋ ಇದೆ. ಆದರೆ ಇಂತಹ ಮೆಚ್ಚುಗೆ ಇಂದ ಕೊಂಚ ಸಮಾಧಾನ ಸಹ ಆಗಿದೆ.ನಿರ್ಮಾಪಕ ಉಮಾಪತಿ ಈ ಹಿಂದೆ ಹೆಬ್ಬುಲಿ ನಿರ್ಮಾಣ ಮಾಡಿದ್ದರು. ಸಧ್ಯಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿದ್ದತೆ ಆಗುತ್ತಿದೆ. ಆನಂತರ ಮದಗಜ ಶ್ರೀಮುರಳಿ ಅಭಿನಯದಲ್ಲಿ ಸಹ ಆರಂಭ ಆಗಲಿದೆ.

ಆಗಸ್ಟ್ 8 ರಿಂದ 15 ರ ವರೆಗೆ ಮೆಲ್ಬೊರ್ನ್ ಅಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಲ್ಲ ಎರಡಲ್ಲ ಸಿನಿಮಾ ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಭಾರತೀಯ ಸಿನಿಮಾಗಳ ಪ್ರದರ್ಶನ ವಿಭಾಗದಲ್ಲಿ ಈ ಸಿನಿಮಾ ಸಹ ಪ್ರದರ್ಶನ ಆಗುವುದು.

ಮಾಸ್ಟೆರ್ ರೋಹಿತ್ ಪಾಂಡವಪುರ ಮತ್ತು ಹಸುವೊಂದರ ಸುತ್ತ ಈ ಚಿತ್ರ ತಯಾರಾಗಿತ್ತು. ಪುಟ್ಟ ಬಾಲಕ ಸಮೀರ ಕಳೆದು ಹೋದ ಹಸುವನ್ನು ಹುಡುಕಿಕೊಂಡು ಹೋಗುವುದು ಚಿತ್ರದ ನಿರೂಪಣೆಯಲ್ಲಿ ಹೊಸತನವನ್ನು ನಿರ್ದೇಶಕ ಡಿ ಸತ್ಯಪ್ರಕಾಶ್ ಅಳವಡಿಸಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.