ETV Bharat / sitara

ಸೆಲಬ್ರಿಟಿ ಸಂಸದೆಯರು ಕೆಂಡಾಮಂಡಲ; ಮಾಧ್ಯಮಗಳ ಮೇಲೆ ನುಸ್ರತ್​ ಹರಿಹಾಯ್ದಿದ್ದೇಕೆ? - ನುಸ್ರತ್ ಜಹಾನ್

ಗ್ಲಾಮರ್ ತುಂಬಿದ ಈ ಚೆಲುವೆಯರು ಚುನಾವಣೆಗೆ ಸ್ಪರ್ಧಿಸಿದ್ದಾಗಿನಿಂದಲೂ ಸುದ್ದಿಯಲ್ಲಿದ್ದರು.ಅದರಲ್ಲೂ ಗೆಲುವು ಪಡೆದ ಬಳಿಕವಂತೂ ಇಡೀ ದೇಶಕ್ಕೆ ಪರಿಚಯವಾದರು. ಇದರಿಂದ ಇವರ ಖ್ಯಾತಿ ಹೆಚ್ಚಿತು. ಇವರು ಸಾರ್ವಜನಿಕ ಸ್ಥಳಗಳಲ್ಲಿ ಕಂಡ್ರೆ ಸಾಕು ಜನಜಂಗುಳಿ ಮುತ್ತಿಕೊಳ್ಳುತ್ತೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jun 26, 2019, 10:49 AM IST

ನವದೆಹಲಿ: ತೃಣಮೂಲ ಕಾಂಗ್ರೆಸ್​ನ ನೂತನ ಸಂಸದೆ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರವರ್ತಿ ತಾಳ್ಮೆ ಕಳೆದುಕೊಂಡು,ಮಾಧ್ಯಮಗಳ ಮೇಲೆ ಹರಿಹಾಯ್ದ ಘಟನೆ ಮಂಗಳವಾರ ನಡೆದಿದೆ.

ಪಶ್ಚಿಮ ಬಂಗಾಳದ ಬಸಿರ್​​ಹತ್​ ಹಾಗೂ ಜಾಧವ್​​ಪುರ್​ ಕ್ಷೇತ್ರಗಳಿಂದ ಚೊಚ್ಚಲ ಬಾರಿ ಸಂಸತ್ ಪ್ರವೇಶಿಸಿರುವ ನುಸ್ರತ್ ಜಹಾನ್ ಹಾಗೂ ಮಿಮಿ ಚಕ್ರಬರ್ತಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಸಂಸತ್​ ಭವನದಿಂದ ಹೊರ ಬಂದ ಈ ಚೆಲುವೆಯರ ರಿಯಾಕ್ಷನ್ ಹಾಗೂ ಪೋಟೊ ತೆಗೆದುಕೊಳ್ಳಲು ಮಾಧ್ಯಮದವರು ಮುಗಿಬಿದ್ದರು. ಈ ವೇಳೆ ಕೋಪಗೊಂಡ ನುಸ್ರತ್​, ನೀವು ಈ ರೀತಿ ನಮ್ಮನ್ನು ತಳ್ಳುವಂತಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಕೋಪದಿಂದಲೇ ನುಡಿದಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಗಾರ್ಡ್​​ಗಳು ಸೇಫ್​ ಆಗಿ ನೂತನ ಸಂಸದೆಯರನ್ನು ಕಾರಿನ ಬಳಿಗೆ ಕರೆದೊಯ್ಯಯ್ದರು. ಈ ವೇಳೆ ಕಾರಿನಲ್ಲಿ ಕುಳಿತು ಮಾಧ್ಯಮಗಳಿಗೆ ರಿಯಾಕ್ಟ್​ ಮಾಡಿರುವ ನುಸ್ರರ್, ಸ್ವಲ್ಪ ಅಂತರ ಕಾಯ್ದುಕೊಂಡು, ಸರತಿ ಸಾಲಿನಲ್ಲಿ ನಿಂತು ಪೋಟೊ ತೆಗೆದುಕೊಳ್ಳಿ ಸಲಹೆ ನೀಡಿದ್ದಾರೆ.

ಚಿತ್ರನಟಿಯರೂ ಆಗಿರುವ ಈ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರವರ್ತಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನುಸ್ರತ್​ ಪ್ರಮಾಣ ವಚನ ಸ್ವೀಕಾರಕ್ಕೆ ಹಾಜರಾಗಿರಲಿಲ್ಲ. ಇವರ ಮದುವೆಗೆ ಹೋಗಿದ್ದ ಮಿಮಿ ಚಕ್ರವರ್ತಿ ಕೂಡ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಪ್ರಮಾಣ ತೆಗೆದುಕೊಂಡ್ರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.