ETV Bharat / sitara

ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ನಿಶ್ವಿಕಾ - ಮೇಘಾ

author img

By

Published : Sep 27, 2021, 12:07 PM IST

ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ಹೊಸ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಿಶ್ವಿಕಾ ನಾಯ್ಡು ಮತ್ತು 'ಜೊತೆ ಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ.

nishvika-naidu-and-megha-shetty-selected-as-krishnas-heroines
ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ನಿಶ್ವಿಕಾ ಮತ್ತು ಮೇಘಾ

ಶಿವತೇಜಸ್ ನಿರ್ದೇಶನದ ಹೊಸ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗಾಗಲೇ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ಆಗಿದೆ. ಇಂದು ಚಿತ್ರದ ಶೀರ್ಷಿಕೆ ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ಈ ಮಧ್ಯೆ ಚಿತ್ರಕ್ಕೆ ನಾಯಕಿಯರ ಆಯ್ಕೆ ಆಗಿದೆ.

ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಿಶ್ವಿಕಾ ನಾಯ್ಡು ಮತ್ತು 'ಜೊತೆಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಪೈಕಿ ನಿಶ್ವಿಕಾ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದು, ಮೇಘಾಗೆ ಇದು 'ತ್ರಿಬಲ್ ರೈಡಿಂಗ್' ನಂತರ ಎರಡನೆಯ ಚಿತ್ರ.

'ನಾನಿ' ಖ್ಯಾತಿಯ ಸುಮಂತ್ ಕ್ರಾಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಅವರ ಎರಡನೆಯ ಚಿತ್ರ. ಇದಕ್ಕೂ ಮುನ್ನ, ಪ್ರಜ್ವಲ್ ಅಭಿನಯದ ಹೊಸ ಚಿತ್ರದ ನಿರ್ಮಾಣಕ್ಕೂ ಅವರು ಕೈಹಾಕಿದ್ದು, ಆ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಕೃಷ್ಣ ಅಭಿನಯದ ಈ ಚಿತ್ರ ಸೆಟ್ಟೇರಿದರೆ ಆಶ್ಚರ್ಯವಿಲ್ಲ.

ಈ ಚಿತ್ರದ ಶೀರ್ಷಿಕೆಯನ್ನು ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಇಂದು ಸಂಜೆ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ರಂಗಾಯಣ ರಘು, ಅರುಣಾ ಬಾಲರಾಜ್, ಗಿರಿ, ತಬಲಾ ನಾಣಿ ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಪವರ್​ ಸ್ಟಾರ್​ 'ಜೇಮ್ಸ್' ಚಿತ್ರದ ಸ್ಯಾಟ್​​ಲೈಟ್ ಹಕ್ಕು 15 ಕೋಟಿಗೆ ಮಾರಾಟ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.