ಇಂದು ಅಂಬೇಡ್ಕರ್ ಜಯಂತಿ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಇಂದು ದೇಶದ ಜನತೆ ಭಕ್ತಿ ಭಾವದಿಂದ ನಮಿಸುತ್ತಿದ್ದಾರೆ. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಬಹಳ ಸರಳವಾಗಿ ಆಚರಿಸಲಾಗುತ್ತಿದೆ.
ನೀನಾಸಂ ಸತೀಶ್ ಹಾಗೂ ಸ್ನೇಹಿತರು ಸೇರಿ ಡಾ. ಅಂಬೇಡ್ಕರ್ ಜಯಂತಿಯನ್ನು ವಿಶೇಷವಾಗಿ ಆಚರಿಸಲಿದ್ದಾರೆ. ಇಂದು ಸಂಜೆ 7 ಗಂಟೆಗೆ ನೀನಾಸಂ ಸತೀಶ್ ಚಿತ್ರರಂಗದ ತಮ್ಮ ಇನ್ನಿತರ ಸ್ನೇಹಿತರೊಂದಿಗೆ ಜೊತೆ ಗೂಡಿ ಸಂವಿಧಾನ ಶಿಲ್ಪಿಯ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ. ಅದೂ ಕೂಡಾ ಇನ್ಸ್ಟಾಗ್ರಾಂ ಚರ್ಚೆ ಮೂಲಕ. 7 ಗಂಟೆಗೆ ಮೊದಲು ನೀನಾಸಂ ಸತೀಶ್, ಮೊದಲು ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಚರ್ಚೆ ಆರಂಭಿಸಲಿದ್ದಾರೆ. ಅಂಬೇಡ್ಕರ್ ಅವರಿಗೆ ಮೊದಲು ನಮನ ಸಲ್ಲಿಸಿ ನಂತರ ಅವರ ಬಗ್ಗೆ ಸ್ನೇಹಿತರೆಲ್ಲಾ ಜೊತೆಗೂಡಲಿದ್ದಾರೆ. ಅಂಬೇಡ್ಕರ್ ಅವರ ಸಿದ್ದಾಂತ, ಅವರ ಅತ್ಯುತ್ತಮ ಗುಣಗಳು, ಹಾಡು, ಕವಿತೆ ಮೂಲಕ ಜನ್ಮದಿನವನ್ನು ಆಚರಣೆ ಮಾಡಲಾಗುವುದು. ನೀನಾಸಂ ಸತೀಶ್ ಜೊತೆಗೆ ಅಚ್ಯುತ್ ಕುಮಾರ್, ಬಿ.ಎಂ. ಗಿರಿರಾಜ್, ಬಾಲಾಜಿ ಮನೋಹರ್, ಚಿಂತನ್, ಕಿರಣ್ ನಾಯಕ್, ಗೋಪಾಲಕೃಷ್ಣ ದೇಶಪಾಂಡೆ, ರಘು ಶಿವಮೊಗ್ಗ ಹಾಗೂ ಇನ್ನಿತರು ಇರಲಿದ್ಧಾರೆ.