ಬೆಂಗಳೂರು: ಕೊರೊನಾ ಎಫೆಕ್ಟ್ ಹಿನ್ನಲೆ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ಸಮಾರಂಭವನ್ನು ಸಿಂಪಲ್ ಆಗಿ ನೆರವೇರಿಸಲು ತೀರ್ಮಾನಿಸಲಾಗಿದೆ.
ಫೆಬ್ರವರಿ 10 ರಂದು ನಗರದ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಿಖಿಲ್-ರೇವತಿ ಎಂಗೇಜ್ಮೆಂಟ್ ಅದ್ಧೂರಿಯಾಗಿ ನಡೆದಿತ್ತು. ಮದುವೆಯನ್ನೂ ಅದಕ್ಕಿಂತ ಗ್ರ್ಯಾಂಡ್ ಮಾಡುವ ಪ್ಲಾನ್ನಲ್ಲಿ ದೊಡ್ಮನೆಯವರಿದ್ರು. ಆದ್ರೆ, ಕೊರೊನಾ ಭೀತಿ ಅವೆಲ್ಲವನ್ನು ಪಕ್ಕಕ್ಕಿಡುವಂತ ಮಾಡಿದೆ.
ಹೀಗಾಗಿ ಈ ಸಮಯದಲ್ಲಿ ಆಡಂಭರದ ವಿವಾಹ ಬೇಡ ಎಂದು ನಿಖಿಲ್ ಹಾಗೂ ರೇವತಿ ಮನೆಯವರು ತೀರ್ಮಾನಿಸಿದ್ದಾರೆ. ಹೀಗಾಗಿ ಮಂಡ್ಯ ಬಳಿಯ ಜನಪದ ಲೋಕದಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಗೆ ಈಗ ಬ್ರೇಕ್ ಹಾಕಲಾಗಿದೆ.
ಏಪ್ರಿಲ್ 17 ರಂದು ವಧು ರೇವತಿ ಮನೆಯಲ್ಲಿ ವಿವಾಹ ನಡೆಯಲಿದೆ. ರೇವತಿ ಮನೆಯಿಂದ 20 ಜನ ಹಾಗೂ ನಿಖಿಲ್ ಕುಮಾರಸ್ವಾಮಿ ಮನೆಯಿಂದ 20 ಜನ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ಜನ ಸೇರುವುದು ಬೇಡ ಎಂದು ತಿಳಿಸಲಾಗಿದೆ.
ಮಂಜುನಾಥ್ ಹಾಗೂ ಶ್ರೀದೇವಿ ಅವರ ಪುತ್ರಿ, ಶಾಸಕ ಹಾಗೂ ಮಾಜಿ ಸಚಿವ ಕೃಷ್ಣಪ್ಪ ಅವರ ಹತ್ತಿರದ ಸಂಬಂಧಿ ರೇವತಿ ಜ್ಯುವೆಲ್ಲರಿ ಡಿಸೈನ್ಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡಿದ್ದಾರೆ.