ETV Bharat / sitara

ಬಾಲಯ್ಯ ಹೊಸ ಲುಕ್​​ ನೋಡಿ ನೆಟ್ಟಿಗರು​​​​​ ಶಾಕ್​​​... ಯಾವ ಚಿತ್ರಕ್ಕಾಗಿ ಈ ಬದಲಾವಣೆ?

ಕೆ.ಎಸ್. ರವಿಕುಮಾರ್ ನಿರ್ದೇಶನದ ಹೊಸ ಚಿತ್ರದ ಬಾಲಕೃಷ್ಣ ಫಸ್ಟ್​​ ಲುಕ್ ರಿವೀಲ್ ಆಗಿದೆ. ಬಾಲಕೃಷ್ಣ ಅವರ ಈ ಲುಕ್​​​​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಫೋಟೋದಲ್ಲಿ ಬಾಲಕೃಷ್ಣ ಬಹಳ ಯಂಗ್ ಆಗಿ ಕಾಣುತ್ತಿದ್ದು, ಇವರು ನಿಜಕ್ಕೂ ಬಾಲಕೃಷ್ಣ ಅವರೇನಾ ಎಂದು ಆಶ್ಚರ್ಯ ಪಡುವಂತಿದೆ.

author img

By

Published : Aug 21, 2019, 1:16 PM IST

ನಂದಮೂರಿ ಬಾಲಕೃಷ್ಣ

ಸಿನಿಮಾ ಕಥೆ ಮಾಸ್ ಇರಲಿ, ಕ್ಲಾಸ್ ಇರಲಿ, ಐತಿಹಾಸಿಕ, ಜಾನಪದ ಏನೇ ಇರಲಿ. ಆ ಪಾತ್ರದಲ್ಲಿ ಮುಳುಗುತ್ತಾರೆ ನಟ ನಂದಮೂರಿ ಬಾಲಕೃಷ್ಣ. ಬಹುತೇಕ ಸಿನಿಮಾಗಳಲ್ಲಿ ಹೊಸ ಹೊಸ ಲುಕ್​​ನಲ್ಲಿ ಬಾಲಕೃಷ್ಣ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಾರೆ. ಇದೀಗ ಅವರ ಮತ್ತೊಂದು ಲುಕ್​ ನೆಟ್ಟಿಗರಿಗೆ ಶಾಕ್ ನೀಡಿದೆ.

  • " class="align-text-top noRightClick twitterSection" data="">

ಲೈಟ್ ಆಗಿ ಗಡ್ಡ ಬಿಟ್ಟು, ನೀಲಿ ಸೂಟ್, ಸನ್ ​​ಗ್ಲಾಸ್ ಹಾಕ್ಕೊಂಡು ಬಾಲಕೃಷ್ಣ ನಡೆದು ಬರುತ್ತಿರುವ ಈ ಫೋಟೋ ವೈರಲ್ ಆಗಿದೆ. ಅಲ್ಲದೆ ಇದು ನಿಜಕ್ಕೂ ಬಾಲಯ್ಯ ಅವರೇನಾ ಅನ್ನುವ ಮಟ್ಟಿಗೆ ಈ ಫೋಟೋದಲ್ಲಿ ಬಹಳ ಯಂಗ್ ಹಾಗೂ ಸ್ಟೈಲ್​​ ಆಗಿ ಕಾಣುತ್ತಿದ್ದಾರೆ. ಅಂದಹಾಗೆ ಹೊಸ ಸಿನಿಮಾಗಾಗಿ ಬಾಲಕೃಷ್ಣ ಈ ರೀತಿ ಬದಲಾಗಿದ್ದಾರೆ. ಕೆ.ಎಸ್​​.ರವಿಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾ ಶೂಟಿಂಗ್ ಸದ್ಯಕ್ಕೆ ಥಾಯ್ಲೆಂಡ್​​​ನಲ್ಲಿ ನಡೆಯುತ್ತಿದೆ. ಇದು ಬಾಲಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ 105ನೇ ಸಿನಿಮಾ. ಸೋನಾಲ್ ಚೌಹಾಣ್​​ ಹಾಗೂ ವೇದಿಕ ಇಬ್ಬರೂ ಬಾಲಕೃಷ್ಣ ಜೊತೆ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ನಿನ್ನೆ ಬಾಲಕೃಷ್ಣ ಅವರ ಫಸ್ಟ್​​​​ ಲುಕ್ ರಿವೀಲ್ ಮಾಡಿದೆ. ಪ್ರಕಾಶ್ ​​​​ರಾಜ್​​, ಭೂಮಿಕ, ಜಯಸುಧಾ, ಸಯೋಜಿ ಸಿಂಧೆ, ನಾಗಿನೀಡು, ಸಪ್ತಗಿರಿ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ.

Intro:Body:

balayya new look

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.