ಶ್ರುತಿ ಹಾಸನ್ಗೆ ಯಾರಿಗೂ ಗೊತ್ತಿಲ್ಲದಂತೆ ಮದುವೆಯಾಗಿದೆ. ಆದ್ದರಿಂದಲೇ ಅವರ ದೇಹದ ತೂಕ ಹೆಚ್ಚಾಗಿದೆ. ಅರೆ..!ಇದು ನಿಜಾನ ಕೆಲವು ದಿನಗಳ ಹಿಂದಷ್ಟೇ ತಮ್ಮ ಬ್ರೇಕ್ಅಪ್ ಬಗ್ಗೆ ಹೇಳಿಕೊಂಡಿದ್ದ ಶ್ರುತಿ ಯಾವಾಗ ಮದುವೆಯಾದ್ರು. ಯಾರನ್ನ ಮದುವೆಯಾದ್ರು ಎಂದು ಚಿಂತಿಸಬೇಡಿ.
ಶ್ರುತಿ ಖಂಡಿತ ಯಾರನ್ನೂ ಮದುವೆಯಾಗಿಲ್ಲ, ಆದರೆ ಆಕೆಯ ಫೋಟೋ ನೋಡಿ ನೆಟ್ಟಿಜನ್ಗಳು ಕಮೆಂಟ್ ಮಾಡಿದ್ದರ ಬಗ್ಗೆ ಶ್ರುತಿ ಇತ್ತೀಚೆಗೆ ಆಂಗ್ಲ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಕಾಟಮರಾಯುಡು‘ ಸಿನಿಮಾ ನಂತರ ಶ್ರುತಿ ಸ್ವಲ್ಪ ದಿನಗಳ ಮಟ್ಟಿಗೆ ಸಿನಿಮಾಗಳಿಂದ ದೂರವಿದ್ದರು. ಆದರೆ ಮ್ಯೂಸಿಕ್ ಆಲ್ಬಂ, ಬೇರೆ ಶೋಗಳಲ್ಲಿ ಶ್ರುತಿ ಬ್ಯುಸಿ ಇದ್ದರು. ಈ ಸಮಯದಲ್ಲಿ ಅವರ ತೂಕ ಕೂಡಾ ಹೆಚ್ಚಾಗಿತ್ತು. ಅವರ ಪೋಟೋಗಳನ್ನು ನೋಡಿ ಅನೇಕರು ಆಕೆಗೆ ಮದುವೆಯಾಗಿದೆ. ಆದ್ದರಿಂದಲೇ ದಪ್ಪ ಆಗಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದರಂತೆ.
ಆದರೆ ಜನರ ಈ ಕಮೆಂಟ್ ನೋಡಿ ಶ್ರುತಿಗೆ ಬಹಳ ಬೇಸರವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನನ್ನ ಬಗ್ಗೆ ಕಾಳಜಿ ವಹಿಸಲು ನನಗೆ ಸಮಯವೇ ಇಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ ಎಂದು ಬಹಳ ಜನರಿಗೆ ಗೊತ್ತಿಲ್ಲ. ಇದುವರೆಗೂ ನಾನು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದೇನೆ. ಇಂತಹ ಕಮೆಂಟ್ಗಳಿಂದ ನಾನು ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಶ್ರುತಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಬಹಳ ದಿನಗಳ ನಂತರ ಶ್ರುತಿ ಹರಿಹರನ್ ವಿಜಯ್ ಸೇತುಪತಿ ಜೊತೆ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಪ್ರಭುದೇವ, ತಮನ್ನಾ ನಟಿಸಿರುವ ಸಿನಿಮಾವೊಂದರಲ್ಲಿ ಶೃತಿ ಒಂದು ಹಾಡು ಕೂಡಾ ಹಾಡಿದ್ದಾರೆ.