ಹೈದರಾಬಾದ್ : ಬಾಲಿವುಡ್ ನಟಿ ನೇಹಾ ಧೂಪಿಯಾ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟ-ಪತಿ ಅಂಗದ್ ಬೇಡಿ ಮತ್ತು ಮಗಳು ಮೆಹರ್ ಅವರೊಂದಿಗಿನ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.
ಈ ಫೋಟೋಗೆ ಕ್ಯಾಪ್ಶನ್ ಬರೆಯಲು ನಮಗೆ ಎರಡು ದಿನ ಬೇಕಾಗಿತ್ತು. ನಾನು ಯೋಚಿಸಬಹುದಾದ ಬೆಸ್ಟ್ ಟೈಮ್ ಇದು. ದೇವರಿಗೆ ಧನ್ಯವಾದಗಳು,' ಎಂದು ನೇಹಾ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
2018ರ ಮೇ ತಿಂಗಳಲ್ಲಿ ಅಂಗದ್ ಬೇಡಿ ಹಾಗೂ ನೇಹಾ ಧೂಪಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದೇ ವರ್ಷ ಈ ಬೋಲ್ಡ್ ನಟಿ ನವೆಂಬರ್ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.
40 ವರ್ಷದ ಈ ನಟಿ ಸದ್ಯ ಎರಡನೇ ಪ್ರೆಗ್ನೆನ್ಸಿ ವಿಚಾರ ಹೇಳಿಕೊಳ್ಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.