ಮಂಡ್ಯ ಭಾಷೆ ಮಾತನಾಡುತ್ತಾ ಸ್ಯಾಂಡಲ್ವುಡ್ನಲ್ಲಿ ಹೀರೋ ಆಗಿ ಮಿಂಚುತ್ತಿರುವ ನೀನಾಸಂ ಸತೀಶ್ ಈಗ ನಟನೆಯ ಜೊತೆಗೆ 'ಸತೀಶ್ ಪಿಕ್ಚರ್ ಹೌಸ್'ನಿಂದ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಸತೀಶ್ ಈಗ 'ಆಡಿಯೋ ಹೌಸ್' ಎಂಬ ಆಡಿಯೋ ಕಂಪನಿಯನ್ನು ಆರಂಭಿಸಿದ್ದಾರೆ.
![kaaji](https://etvbharatimages.akamaized.net/etvbharat/prod-images/sathisnaudiocomapanyreleaseshortmovie_10052019132312_1005f_1557474792_863.jpg)
ಮೇ 12 ರಂದು ಅಮ್ಮಂದಿರ ದಿನಕ್ಕಾಗಿ ತಮ್ಮ ಸಂಸ್ಥೆಯಿಂದ ಸತೀಶ್ ವಿಶೇಷ ಉಡುಗೊರೆ ನೀಡುತ್ತಿದ್ದಾರೆ. ನಟಿ ಐಶಾನಿ ಶೆಟ್ಟಿ ನಿರ್ದೇಶನದ 'ಕಾಜಿ' ಕಿರುಚಿತ್ರವನ್ನು ಸತೀಶ್ ಬಿಡುಗಡೆ ಮಾಡುತ್ತಿದ್ದಾರೆ. ಇದು ಸತೀಶ್ ಆಡಿಯೋ ಕಂಪನಿಯಿಂದ ರಿಲೀಸ್ ಆಗುತ್ತಿರುವ ಮೊದಲ ಕಿರುಚಿತ್ರವಾಗಿದೆ. ಈ ಕಿರುಚಿತ್ರ ಇದೇ ಭಾನುವಾರದಂದು ತಾಯಂದಿರ ದಿನಕ್ಕೆ ರಿಲೀಸ್ ಆಗುತ್ತಿದೆ. ಇನ್ನು ಈ ಸಿನಿಮಾ ಅಮ್ಮಂದಿರ ದಿನಾಚರಣೆ ದಿನವೇ ರಿಲೀಸ್ ಆಗುತ್ತಿರುವುದು ಏಕೆ ಎನ್ನುವುದು ಕಿರುಚಿತ್ರ ನೋಡಿದ ಮೇಲೆಯೇ ಗೊತ್ತಾಗಲಿದೆಯಂತೆ.
- " class="align-text-top noRightClick twitterSection" data="">
ಸತೀಶ್ ಈ ಹಿಂದೆ 2014ರಲ್ಲಿ ಸತೀಶ್ ಮೀಡಿಯಾ ಹೌಸ್ ಹೆಸರಲ್ಲೊಂದು ನಿರ್ಮಾಣ ಸಂಸ್ಥೆ ಶುರು ಮಾಡಿ 'ಕಾಜಿ' ಕಿರುಚಿತ್ರವನ್ನು ನಿರ್ಮಿಸಿದ್ದರು. ಈ ಕಿರುಚಿತ್ರವನ್ನು ಐಶಾನಿ ಶೆಟ್ಟಿ ಅವರೇ ನಿರ್ದೇಶಿಸಿದ್ದಾರೆ. ಈ ಕಿರುಚಿತ್ರ ಹಲವು ರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಿಗೂ ಸ್ಪರ್ಧಿಸಿತ್ತು. ಈಗಾಗಲೇ ಸಾಕಷ್ಟು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿ ಅವಾರ್ಡ್ ಕೂಡಾ ಪಡೆದಿದೆ.