ETV Bharat / sitara

ಅಧುನಿಕ ರಂಗಿನೊಂದಿಗೆ ಮತ್ತೆ ರಂಜಿಸಲು ಸಿದ್ದವಾಯ್ತು ನವರಂಗ್​ ಚಿತ್ರಮಂದಿರ

ಡಾ. ರಾಜಕುಮಾರ್ ಅಭಿನಯದ ವೀರ ಕೇಸರಿ ಚಿತ್ರದ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಾ ಬಂದಿದ್ದ ನವರಂಗ್ ಚಿತ್ರಮಂದಿರ ಈಗ ಮತ್ತೆ ಹೈಟೆಕ್ ತಂತ್ರಜ್ಞಾನದೊಂದಿಗೆ ಕನ್ನಡ ಸಿನಿ ರಸಿಕರನ್ನು ರಂಜಿಸಲು ರೆಡಿಯಾಗಿದ್ದು ಇದೆ ಸಪ್ಟೆಂಬರ್ 12 ರಿಂದ ಪ್ರದರ್ಶನ ಮಾಡಲು ಸಿದ್ದತೆ ನಡೆಸಲಾಗಿದೆ.

author img

By

Published : Sep 1, 2019, 5:18 PM IST

ನವರಂಗ್​ ಚಿತ್ರಮಂದಿರ

ಸಿಲಿಕಾನ್ ಸಿಟಿಯಲ್ಲಿ ಚಿತ್ರಮಂದಿರಗಳು ಒಂದೊಂದಾಗಿ ಕಾಣೆಯಾಗುತ್ತಿವೆ. ಮಲ್ಟಿಪ್ಲೆಕ್ಸ್ ಅಬ್ಬರಕ್ಕೆ ತತ್ತರಿಸಿ ಹೋಗಿರುವ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳು ಈಗಾಗಲೇ ಇತಿಹಾಸದ ಪುಟ ಸೇರಿವೆ. ಆದರೆ ಕೆಲವು ಚಿತ್ರಮಂದಿರಗಳು ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಹೈಟೆಕ್ ಟಚ್ ಪಡೆದುಕೊಂಡಿವೆ.

ಸದ್ಯ ಎಂ.ಜಿ ರೋಡ್​ನ ಶಂಕರನಾಗ್ ಚಿತ್ರಮಂದಿರ ಹೈಟೆಕ್ ತಂತ್ರಜ್ಞಾನದೊಂದಿಗೆ ಪುನರ್ ನವೀಕರಣಗೊಂಡಿದೆ. ಇದೆ ಸಾಲಿಗೆ ಕನ್ನಡದ ಅತಿ ಹೆಚ್ಚು ಚಿತ್ರಗಳನ್ನ ಪ್ರದರ್ಶನ ಮಾಡುವ ರಾಜಾಜಿನಗರದ ನವರಂಗ ಚಿತ್ರಮಂದಿರ ಕೂಡಾ ಸೇರಿದ್ದು ಹೈಟೆಕ್ ಟಚ್​ನೊಂದಿಗೆ ಮರುಜೀವ ಪಡೆಯುತ್ತಿದೆ.

ಅಧುನಿಕ್ ರಂಗಿನೊಂದಿಗೆ ಮತ್ತೇ ರಂಜಿಸಲು ಸಿದ್ದವಾಯ್ತು ನವರಂಗ್​ ಚಿತ್ರಮಂದಿರ

ಸದ್ಯಕ್ಕೆ ನವರಂಗ್ ಚಿತ್ರಮಂದಿರದ ರೇನೋವೇಶನ್ ಕೆಲಸ ಚಾಲ್ತಿಯಲ್ಲಿದ್ದು. 4ಕೆ ಸ್ಕ್ರೀನ್, ಉತ್ತಮ ಸೌಂಡ್ ಸಿಸ್ಟಮ್​ಗಳೊಂದಿಗೆ ಥೀಯೆಟರ್​ಗೆ ಅಧುನಿಕ ಸ್ಪರ್ಶ ನೀಡಲಾಗಿದೆ. ಇದೆ ಸಪ್ಟೆಂಬರ್ 12 ರಿಂದ ಚಿತ್ರ ಪ್ರದರ್ಶನ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಮಾಲೀಕರಾದ ಕೆಸಿಎನ್ ಮೋಹನ್ ತಿಳಿಸಿದ್ದಾರೆ.

1963ರಲ್ಲಿ ಎಸ್. ನಿಜಲಿಂಗಪ್ಪ ನವರಂಗ್ ಚಿತ್ರಮಂದಿರವನ್ನು ಉದ್ಘಾಟಿಸಿದರು. ಡಾ. ರಾಜಕುಮಾರ್ ಅಭಿನಯದ ವೀರ ಕೇಸರಿ ಚಿತ್ರದ ಮೂಲಕ ಸಿನಿ ಪ್ರಿಯರನ್ನು ರಂಜಿಸುತ್ತಾ ಬಂದಿದ್ದ ನವರಂಗ್ ಈಗ ಮತ್ತೆ ಹೈಟೆಕ್ ತಂತ್ರಜ್ಞಾನದೊಂದಿಗೆ ಕನ್ನಡ ಸಿನಿ ರಸಿಕರನ್ನು ರಂಜಿಸಲು ಮತ್ತೆ ರೆಡಿಯಾಗ್ತಿದೆ. ವಿಶೇಷವೆಂದರೆ ನವರಂಗ್ ಚಿತ್ರಮಂದಿರದಲ್ಲಿ ಹೆಚ್ಚಾಗಿ ಕನ್ನಡಚಿತ್ರಗಳು ಪ್ರದರ್ಶನವಾಗುತ್ತವೆ. ಜೋಗಿ, ಮುಂಗಾರು ಮಳೆ, ನವರಂಗ್ ಚಿತ್ರಮಂದಿರದಲ್ಲಿ ಭರ್ಜರಿ 25 ವಾರಗಳ ಪ್ರದರ್ಶನ ಕಂಡಿದ್ದವು.

Intro:ಬೆಂಗಳೂರಿನಲ್ಲಿ ಪ್ರಮುಖ ಚಿತ್ರಮಂದಿರಗಳು ಒಂದೊಂದಾಗಿ ಕಾಣೆಯಾಗುತ್ತಿವೆ. ಮಲ್ಟಿಪ್ಲೆಕ್ಸ್ ಅಬ್ಬರಕ್ಕೆ ತತ್ತರಿಸಿ ಹೋಗಿರುವ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರಗಳು ಈಗಾಗಲೇ ಇತಿಹಾಸದ ಪುಟ ಸೇರಿವೆ. ಆದರೆ ಕೆಲವು ಚಿತ್ರಮಂದಿರಗಳು ಇನ್ನು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದು ಹೈಟೆಕ್ ತಂತ್ರಜ್ಞಾನದೊಂದಿಗೆ ಪುನರ್ ನವೀಕರಣ ಗೊಂಡಿವೆ.

Body:ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಎಂಜಿ ರಸ್ತೆಯ ಶಂಕರನಾಗ್ ಚಿತ್ರಮಂದಿರ ಹೈಟೆಕ್ ತಂತ್ರಜ್ಞಾನದೊಂದಿಗೆ ಪುನರ್ ನವೀಕರಣಗೊಂಡಿದೆ. ಈಗ ಇವುಗಳ ಸಾಲಿಗೆ ರಾಜಾಜಿನಗರದ ಡಾಕ್ಟರ್ ರಾಜಕುಮಾರ್ ರಸ್ತೆಯಲ್ಲಿರುವ ಅತಿ ಹೆಚ್ಚು ಕನ್ನಡಚಿತ್ರಗಳು ಪ್ರದರ್ಶನವಾಗುವ ನವರಂಗ ಚಿತ್ರಮಂದಿರ ಕೂಡ ಹೈಟೆಕ್ ತಂತ್ರಜ್ಞಾನದೊಂದಿಗೆ ಮರುಜೀವ ಪಡೆಯುತ್ತಿದೆ.ಚ

Conclusion:ಸದ್ಯಕ್ಕೆ ನವರಂಗ್ ಚಿತ್ರಮಂದಿರದಲ್ಲಿ ರೇನೋವೇಶನ್ ಕೆಲಸ ನಡೆಯುತ್ತಿದ್ದು. ಮಲ್ಟಿಪ್ಲೆಕ್ಸ್ ಮಾದರಿಯಲ್ಲಿ ಹೈಟೆಕ್ ತಂತ್ರಜ್ಞಾನ ಹಳೆಯ ಉಳಿಸಿಕೊಂಡು 4ಕೆ ಸ್ಕ್ರೀನ್ ಉತ್ತಮ ಸೌಂಡ್ ಸಿಸ್ಟಮ್ ಗಳೊಂದಿಗೆ ಮತ್ತೆ ಮುಂದಿನ ವಾರದಿಂದ ನವರಂಗ್ ಚಿತ್ರಮಂದಿರ ತನ್ನ ಕಾರ್ಯವನ್ನು ಆರಂಭಿಸಲಿದೆ ಎಂದು ಮಾಲೀಕರಾದ ಕೆಸಿಎನ್ ಮೋಹನ್ ಈಟಿವಿ ಭಾರತ ತಿಳಿಸಿದರು. ಈಗಾಗಲೇ ಚಿತ್ರಮಂದಿರದ ಆಧುನಿಕರಣ ಕೆಲಸ ಬಹುತೇಕ ಮುಗಿದಿದ್ದು ಮುಂದಿನವಾರ ಸೆಪ್ಟೆಂಬರ್ 12 ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲು ಮಾಲಿಕರಾದ ಕೆಸಿಎನ್ ಮೋಹನ್ ಮಾಡಿಕೊಂಡಿದ್ದಾರೆ. 1963 ರಲ್ಲಿ ಎಸ್ ನಿಜಲಿಂಗಪ್ಪ ನವರಂಗ್ ಚಿತ್ರಮಂದಿರವನು ಉದ್ಘಾಟಿಸಿದರು. ಡಾಕ್ಟರ್ ರಾಜಕುಮಾರ್ ಅಭಿನಯದ ವೀರ ಕೆಸರಿ ಚಿತ್ರದ ಮೂಲಕ ಸಿನಿ ಪ್ರಿಯರನ್ನು ಮರ ರಂಜಿಸುತ್ತಾ ಬಂದಿದ್ದ ನವರಂಗ್ ಚಿತ್ರಮಂದಿರ ಈಗ ಮತ್ತೆ ಹೈಟೆಕ್ ತಂತ್ರಜ್ಞಾನದೊಂದಿಗೆ ಕನ್ನಡ ಸಿನಿ ರಸಿಕರನ್ನು ರಂಜಿಸಲು ರೆಡಿಯಾಗ್ತಿದೆ ವಿಶೇಷವೆಂದರೆ ನವರಂಗ್ ಚಿತ್ರಮಂದಿರದಲ್ಲಿ ಹೆಚ್ಚಾಗಿ ಕನ್ನಡಚಿತ್ರಗಳು ಪ್ರದರ್ಶನವಾಗುತ್ತವೆ. ಜೋಗಿ ಮುಂಗಾರುಮಳೆ ನವರಂಗ್ ಚಿತ್ರಮಂದಿರದಲ್ಲಿ ಭರ್ಜರಿ 25 ವಾರಗಳ ಪ್ರದರ್ಶನವಗಿವೆ.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.