ETV Bharat / sitara

ಬಿಡುಗಡೆಗೆ ಮುನ್ನವೇ ತಮಿಳು, ತೆಲುಗು ರೀಮೇಕ್ ಹಕ್ಕು ಮಾರಾಟ ಮಾಡಿದ 'ನವರತ್ನ' - ಪಿಆರ್ ಸ್ಟುಡಿಯೋ ಬ್ಯಾನರ್

ಹೊಸಬರೇ ತಯಾರಿಸಿರುವ 'ನವರತ್ನ' ಸಿನಿಮಾ ಬಿಡುಗಡೆಗೂ ಮುನ್ನವೇ ತೆಲುಗು, ತಮಿಳು ಭಾಷೆಗೆ ರೀಮೇಕ್ ಹಕ್ಕನ್ನು ಮಾರಾಟ ಮಾಡಿದೆ. ಪ್ರತಾಪ್​ ರಾಜ್ ಈ ಸಿನಿಮಾವನ್ನು ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನವರತ್ನ
author img

By

Published : Oct 4, 2019, 7:07 PM IST

ಚಿತ್ರರಂಗ ಎನ್ನುವುದು ಒಂದು ಮಾಯಾ ಬಜಾರ್ ಇದ್ದಂತೆ. ಯಾರ ಅದೃಷ್ಟ ಚೆನ್ನಾಗಿ ಇರುವುದೋ ಅಂಥವರು ಈ ಸಿನಿಮಾ ರಂಗದಲ್ಲಿ ಸ್ಟಾರ್ಗಳಾಗುತ್ತಾರೆ. ಈಗ ಇಲ್ಲೊಂದು ಚಿತ್ರತಂಡ ಇಂತದ್ದೇ ಕನಸು ಹೊತ್ತು 'ನವರತ್ನ' ಎಂಬ ಟೈಟಲ್​​​​ನೊಂದಿಗೆ ಸ್ಯಾಂಡಲ್​​​​​​​​ವುಡ್​​​​​​​​​ಗೆ ಕಾಲಿಟ್ಟಿದೆ.

'ನವರತ್ನ' ಚಿತ್ರದ ಸುದ್ದಿಗೋಷ್ಠಿ

ಯುವ ನಟ ಪ್ರತಾಪ್ ರಾಜ್ ಹಾಗೂ ಯುವನಟಿ ಮೋಕ್ಷ ಕುಶಾಲ್ ಜೊತೆಗೆ ಹಾಸ್ಯನಟ ಅಮಿತ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರತಂಡ ಸದ್ಯಕ್ಕೆ ಟ್ರೇಲರ್​​ ಬಿಡುಗಡೆ ಮಾಡಿ ಹುಮ್ಮಸ್ಸಿನಿಂದ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರತಾಪ್ ರಾಜ್ ಈ ಚಿತ್ರದಲ್ಲಿ ಆ್ಯಕ್ಟಿಂಗ್ ಜೊತೆಗೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. 'ನವರತ್ನ' ಎಂಬ ಕ್ಯಾಚಿ ಟೈಟಲ್ ಹೊಂದಿರುವ ಈ ಚಿತ್ರ ಆ್ಯಕ್ಷನ್ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಆಧರಿಸಿದೆ. ಮೋಕ್ಷ ಕುಶಾಲ್ ಈ ಚಿತ್ರದಲ್ಲಿ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ರ್‍ಯಾಂಕ್ ರಾಜು ಸಿನಿಮಾದಲ್ಲಿ ಹಾಸ್ಯದ ಕಚಗುಳಿ ಇಟ್ಟಿರುವ ಅಮಿತ್ ಈ ಚಿತ್ರದಲ್ಲಿ ಲಿಂಗ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಡುಪಿ,ಇಂಡೋನೇಷ್ಯಾ, ಲಡಾಕ್​​​​​​​ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಸಿನಿಮಾ ರಿಲೀಸ್​​​​​​​​​​​​​​ಗೂ ಮುಂಚೆ ತೆಲುಗು, ತಮಿಳು ಭಾಷೆಯಲ್ಲಿ ರೀಮೇಕ್ ಆಗಲು ಮಾತುಕತೆ ನಡೆಯುತ್ತಿದೆ ಎಂದು ನಿರ್ದೇಶಕ, ನಟ ಪ್ರತಾಪ್ ರಾಜ್ ಹೇಳಿದ್ದಾರೆ.

navaratna
'ನವರತ್ನ' ಚಿತ್ರತಂಡ

'ನವರತ್ನ' ಸಿನಿಮಾಗೆ ರೀಜೋ ಪಿ ಜಾನ್ ಹಾಗೂ ಲಕ್ಷ್ಮಿರಾಜ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಉಡುಪಿಯ ಕಾಡಿನಲ್ಲಿ ಶೂಟಿಂಗ್ ಮಾಡುವುದು ಚಿತ್ರತಂಡಕ್ಕೆ ಚಾಲೆಂಜಿಂಗ್ ಆಗಿತ್ತಂತೆ. 'ಇಸ್ಮಾರ್ಟ್ ಶಂಕರ್' 'ಗೀತಗೋವಿಂದಂ' ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿರುವ ರಿಯಲ್ ಸತೀಶ್ ಈ ಚಿತ್ರಕ್ಕೆ ಫೈಟ್​​​​​​​​​​​​​​​​​​​​​​​​​ ಕಂಪೋಸ್ ಮಾಡಿದ್ದಾರೆ. ಪಿಆರ್ ಸ್ಟುಡಿಯೋ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣ ಆಗಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಒಟ್ಟಾರೆ 'ನವರತ್ನ' ಸಿನಿಮಾ ರಿಲೀಸ್​​​​ಗೂ ಮುಂಚೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರೀಮೇಕ್ ಆಗುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

Intro:ಚಿತ್ರರಂಗ ಅನ್ನೋದು ಒಂದು ಮಾಯಾ ಬಜಾರ್ ಇದ್ದಾಗೇ..ಯಾರ ಅದೃಷ್ಟ ಚೆನ್ನಾಗಿ ಇರುತ್ತೊ ಅಂಥವರು ಈ ಸಿನಿಮಾ ರಂಗದಲ್ಲಿ ಸ್ಟಾರ್ ಗಳಾಗುತ್ತಾರೆ..ಈಗ ಇಲ್ಲೊಂದು ಚಿತ್ರತಂಡ ಇಂತಹದ್ದೇ ಕನಸು ಹೊತ್ತು ಸ್ಯಾಂಡಲ್ ವುಡ್ ಗೆ ಎಂಟ್ರಿ‌ಕೊಟ್ಟಿದೆ..ನವರತ್ನ ಅಂತಾ ಟೈಟಲ್ ನೊಂದಿಗೆ, ಯುವ ನಟ ಪ್ರತಾಪ್ ರಾಜ್ ಹಾಗೂ ಯುವನಟಿ ಮೋಕ್ಷ ಕುಶಾಲ್ ಜೊತೆಗೆ ಹಾಸ್ಯನಟ ಅಮಿತ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಸದ್ಯ ಟ್ರೈಲರ್ ಬಿಡುಗಡೆ ಮಾಡಿ ಹುಮ್ಮಸ್ಸಿನಲ್ಲಿದೆ. ಹಿಂದೆ ಹುಚ್ಚು ಹುಡುಗುರು ವ್ಯೂಹ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಪ್ರತಾಪ್ ರಾಜ್ ನವರತ್ನ ಸಿನಿಮಾದಲ್ಲಿ ಆಕ್ಟಿಂಗ್ ಜೊತೆಗೆ ಆಕ್ಷನ್‌ ಕಟ್ ಹೇಳಿದ್ದಾರೆ.. ನವರತ್ನ ಅಂತ ಕ್ಯಾಚಿ ಟೈಟಲ್ ಹೊಂದಿರುವ ಈ ಚಿತ್ರ ಆಕ್ಷನ್ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಆಧರಿಸಿದೆ ಮೋಕ್ಷ ಕುಶಾಲ್ ಈ ಚಿತ್ರದಲ್ಲಿ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಫಸ್ಟ್ ರಾಂಕ್ ರಾಜು ಈಗಲೂ ಸಿನಿಮಾಗಳಲ್ಲಿ ಹಾಸ್ಯದ ಕಚಗುಳಿ ಇಟ್ಟಿರುವ ಅಮಿತ್ ಈ ಚಿತ್ರದಲ್ಲಿ ಲಿಂಗ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ..

Body:ಉಡುಪಿ ಇಂಡೋನೇಷಿಯಾ ಲಡಾಕ್ ಗಳಲ್ಲಿ ಚಿತ್ರೀಕರಣವಾಗಿರುವ ನವರತ್ನ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಚಿತ್ರತಂಡ ತುಂಬಾನೇ ಎಕ್ಸೈಟ್ ಆಗಿದೆ ಸದ್ಯ ಈ ಸಿನಿಮಾ ರಿಲೀಸ್ ಗೂ ಮುಂಚೆ ತೆಲುಗು ತಮಿಳು ಭಾಷೆಯಲ್ಲಿ ರೀಮೇಕ್ ಆಗಲು ಮಾತುಕತೆ ನಡೆಯುತ್ತಿದೆ ಅಂತ ನಿರ್ದೇಶಕ ಕಮ್ ನಟ ಪ್ರತಾಪ್ ರಾಜ್ ಹೇಳಿದ್ದಾರೆ..ಈ ಚಿತ್ರ ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಮೇಕ್ ಆಗಲು ಈ ಚಿತ್ರದ ಕಥೆಯ ಮೇಲಿರುವ ನಂಬಿಕೆ‌‌ ಹೀಗಾಗಿ ತೆಲುಗು ಹಾಗೂ ತಮಿಳಿನ ಕೆಲ ನಿರ್ಮಾಪಕರು ಈ ಸಿನಿಮಾವನ್ನು ನಿರ್ಮಾಣ ಮಾಡಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ..

Conclusion:ನವರತ್ನ ಸಿನಿಮಾಕ್ಕೆ ರೀಜೋ ಪಿ ಜಾನ್ ಹಾಗು ಲಕ್ಷ್ಮೀ ರಾಜ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಉಡುಪಿಯ ಕಾಡಿನಲ್ಲಿ ಶೂಟಿಂಗ್ ಮಾಡೋದು ಚಾಲೆಂಜಿಂಗ್ ಆಗಿತ್ತಂತೆ ಸ್ಮಾರ್ಟ್ ಶಂಕರ್ ಗೀತಗೋವಿಂದಂ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿರುವ ರಿಯಲ್ ಸತೀಶ್ ಈ ಚಿತ್ರಕ್ಕೆ ಸ್ಟೆಂಟ್ ಕಣ್ಣ ಕಂಪೋಸ್ ಮಾಡಿದ್ದಾರೆ. ಪಿ ಆರ್ ಸ್ಟುಡಿಯೋ ಬ್ಯಾನರ್ ಈ ಚಿತ್ರ ನಿರ್ಮಾಣ ಆಗಿದ್ದು, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯ/ಎ ಸರ್ಟಿಫಿಕೇಟ್ ಸಿಕ್ಕಿದೆ..ಒಟ್ಟಾರೆ ನವರತ್ನ ಸಿನಿಮಾ ರಿಲೀಸ್ ಗೂ ಮುಂಚೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರೀಮೇಕ್ ಆಗ್ತಾ ಇರೋದಕ್ಕೆ ಚಿತ್ರತಂಡಕ್ಕೆ ಖುಷಿ ತಂದಿದೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.