ETV Bharat / sitara

ಗುಂಡನನ್ನು ಹಾಡಿ ಹೊಗಳಿದ ಸ್ಯಾಂಡಲ್​​ವುಡ್​ ಸೆಲಬ್ರಿಟಿಗಳು - ನಾನು ಮತ್ತು ಗುಂಡ ಸಿನಿಮಾ ನೋಡಿದ ಅದಿತಿ ಪ್ರಭುದೇವ

'ನಾನು ಮತ್ತು ಗುಂಡ' ಚಿತ್ರತಂಡ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಗುಂಡನನ್ನು ನೋಡಲು ನಿಖಿಲ್ ಕುಮಾರಸ್ವಾಮಿ, ಅದಿತಿ ಪ್ರಭುದೇವ, ಸತೀಶ್ ನೀನಾಸಂ, ನಿರ್ದೇಶಕರಾದ ಭರ್ಜರಿ ಚೇತನ್ ಎ.ಪಿ. ಅರ್ಜುನ್​​​​​, ಜೋಗಿ ಪ್ರೇಮ್ ಸೇರಿದಂತೆ ಬಹಳಷ್ಟು ಸ್ಯಾಂಡಲ್​​ವುಡ್​​​​​ ಸ್ಟಾರ್​​​​​​​​​​​ಗಳು ಆಗಮಿಸಿದ್ದರು.

Nanu mattu gunda
'ನಾನು ಮತ್ತು ಗುಂಡ'
author img

By

Published : Jan 29, 2020, 9:52 AM IST

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್​​​​. ಪೇಟೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ನಾನು ಮತ್ತು ಗುಂಡ' ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗುಂಡನ ವಾತ್ಸಲ್ಯ ನೋಡಿದ ಸ್ಯಾಂಡಲ್​​ವುಡ್​​ ಸೆಲಬ್ರಿಟಿಗಳು ಅವನನ್ನು ಹಾಡಿ ಹೊಗಳಿದ್ದಾರೆ.

ಸ್ಯಾಂಡಲ್​​ವುಡ್ ಸೆಲಬ್ರಿಟಿಗಳಿಗಾಗಿ ನಾನು ಮತ್ತು ಗುಂಡ ವಿಶೇಷ ಪ್ರದರ್ಶನ

'ನಾನು ಮತ್ತು ಗುಂಡ' ಚಿತ್ರತಂಡ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಗುಂಡನನ್ನು ನೋಡಲು ನಿಖಿಲ್ ಕುಮಾರಸ್ವಾಮಿ, ಅದಿತಿ ಪ್ರಭುದೇವ, ಸತೀಶ್ ನೀನಾಸಂ, ನಿರ್ದೇಶಕರಾದ ಭರ್ಜರಿ ಚೇತನ್ ಎ.ಪಿ. ಅರ್ಜುನ್​​​​​, ಜೋಗಿ ಪ್ರೇಮ್ ಸೇರಿದಂತೆ ಬಹಳಷ್ಟು ಸ್ಯಾಂಡಲ್​​ವುಡ್​​​​​ ಸ್ಟಾರ್​​​​​​​​​​​ಗಳು ಆಗಮಿಸಿದ್ದರು. ಚಿತ್ರ ನೋಡಿದ ಅದಿತಿ ಪ್ರಭುದೇವ ಬಹಳ ಭಾವುಕತೆಯಿಂದ ಗುಂಡನ ಬಗ್ಗೆ ಮಾತನಾಡಿದರು. ಬಹುಶ: ಈ ಭೂಮಿ ಮೇಲೆ ತಾಯಿ ಪ್ರೀತಿ ಬಿಟ್ಟರೆ ಮತ್ತೆ ನಮಗೆ ಅಂತಹ ನಿಸ್ವಾರ್ಥ ಪ್ರೀತಿ ಕಾಣುವುದು ಪ್ರಾಣಿಗಳಲ್ಲಿ. ಅಂತಹ ಪ್ರೀತಿಯನ್ನು 'ನಾನು ಮತ್ತು ಗುಂಡ' ಚಿತ್ರದಲ್ಲಿ ತೋರಿಸಲಾಗಿದೆ. ದಯವಿಟ್ಟು ಎಲ್ಲರೂ ಬಂದು ಥೀಯೇಟರ್​​ನಲ್ಲಿ ನೋಡಿ ಚಿತ್ರವನ್ನು ಹರಸಿ ಎಂದು ಮನವಿ ಮಾಡಿದರು.

ಇನ್ನು ಸಿನಿಮಾ ನೋಡಿದ ನಿಖಿಲ್ ಕುಮಾರಸ್ವಾಮಿ, ಶಿವು ಕೆ.ಆರ್​​. ಪೇಟೆ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದರು. ಚಿತ್ರದಲ್ಲಿ ಶ್ವಾನ ಮತ್ತು ಮಾನವನ ನಡುವಿನ ಬಾಂಧವ್ಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಕಿರುತೆರೆಯಲ್ಲಿ ಬರುತ್ತದೆ, ಅಮೇಜಾನ್ ಪ್ರೈಮ್​ನಲ್ಲಿ ಬರುತ್ತದೆ ಎಂದು ಕಾಯುವುದನ್ನು ಬಿಟ್ಟು ದಯವಿಟ್ಟು ಥಿಯೇಟರ್​​ಗೆ ಬಂದು ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. ರಘು ಹಾಸನ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ನಾನು ಮತ್ತು ಗುಂಡ' ಚಿತ್ರದಲ್ಲಿ ಶಿವರಾಜ್​​ ಕೆ.ಆರ್.ಪೇಟೆ ಆಟೋ ಡ್ರೈವರ್ ಶಂಕ್ರನ ಪಾತ್ರದಲ್ಲಿ ಅಭಿನಯಿಸಿದ್ದರೆ ಶಂಕ್ರನ ಪತ್ನಿಯಾಗಿ ಸಂಯುಕ್ತ ಹೊರನಾಡು ನಟಿಸಿದ್ದಾರೆ. ಗುಂಡನ ಪಾತ್ರದಲ್ಲಿ 'ಸಿಂಬ' ಎಂಬ ಶ್ವಾನ ಬಹಳ ಅದ್ಭುತವಾಗಿ ನಟಿಸಿದೆ. ಒಟ್ಟಿನಲ್ಲಿ ಚಿತ್ರ ನೋಡಿದ ಪ್ರತಿಯೊಬ್ಬರೂ ಗುಂಡ ಹಾಗೂ ಶಂಕ್ರನ ಬಗ್ಗೆ ಮಾತನಾಡಿದ್ದಾರೆ.

Intro:ಹಾಸ್ಯನಟ ಶಿವರಾಜ್ ಕೆಆರ್ ಪೇಟೆ ಅಭಿನಯದ ನಾನು ಮತ್ತು ಗುಂಡ ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಜನ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ನೋಡಿದ ಸಿನಿರಸಿಕರು ಗುಂಡನ ವಾತ್ಸಲ್ಯಕ್ಕೆ ಕಣ್ಣೀರು ಹಾಕುತ್ತಿದ್ದಾರೆ. ಈಗ ಈ ಗುಂಡನ ಪ್ರೀತಿ ವಾತ್ಸಲ್ಯವನ್ನು
ನೋಡಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಕೂಡ ಗುಂಡನನ್ನು ಹಾಡಿ ಹೊಗಳಿದ್ದಾರೆ.

Body:ಹೌದು ಸ್ಯಾಂಡಲ್ವುಡ್ ಸೆಲೆಬ್ರಿಟಿ ಗಳಿಗಾಗಿ ನಾನು ಮತ್ತು ಗುಂಡ ಚಿತ್ರತಂಡ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಇನ್ನು ಗುಂಡನನ್ನು ನೋಡಲು ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ರಂಗನಾಯಕಿ ಅಧಿತಿ ಪ್ರಭುದೇವ್, ಸತೀಶ್ ನೀನಾಸಂ, ನಿರ್ದೇಶಕರಾದ ಭರ್ಜರಿ ಚೇತನ್ ಎಪಿ ಅರ್ಜುನ್ ಜೋಗಿ ಪ್ರೇಮ್ ಸೇರಿದಂತೆ ಬಹುತೇಕ ಸ್ಯಾಂಡಲ್ವುಡ್ ಸ್ಟಾರ್ ಗಳು ನಾನು ಮತ್ತು ಗುಂಡ ಚಿತ್ರದ ಸೆಲೆಬ್ರಿಟಿ ಶೋ ಕಣ್ತುಂಬಿಕೊಂಡರು.

Conclusion:ಅಲ್ಲದೆ ಚಿತ್ರ ನೋಡಿದ ರಂಗನಾಯಕಿ ಅದಿತಿ ಪ್ರಭುದೇವ ತುಂಬಾ ಭಾವುಕತೆಯಿಂದ ಗುಂಡನ ಬಗ್ಗೆ ಮಾತನಾಡಿದರು. ಬಹುಶಹ ಈ ಭೂಮಿ ಮೇಲೆ ತಾಯಿ ಪ್ರೀತಿ ಬಿಟ್ಟರೆ ಮತ್ತೆ ನಮಗೆ ಅಂತಹ ನಿಸ್ವಾರ್ಥ ಪ್ರೀತಿ ಕಾಣುವುದು ಪ್ರಾಣಿಗಳಲ್ಲಿ ಅದು ನಾನು ಮತ್ತು ಗುಂಡ ಚಿತ್ರದಲ್ಲಿ ತೋರಿಸಿದ್ದಾರೆ. ದಯವಿಟ್ಟು ಚಿತ್ರ ನೋಡಿದವರು ಬಂದು ಸಿನಿಮಾ ನೋಡಿ ಚಿತ್ರವನ್ನು ಹರಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. ಇದಲ್ಲದೆ ನಾನು ಮತ್ತು ಗುಂಡ ಚಿತ್ರವನ್ನು ನೋಡಿದ ಚಂದನವನದ ಅಭಿಮನ್ಯು ನಿಖಿಲ್ ಕುಮಾರ್ ಶಿವು ಕೆ ಆರ್ ಪೇಟೆ ಅವರ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದರು. ಚಿತ್ರದಲ್ಲಿ ಶ್ವಾನ ಮತ್ತು ಮಾನವನ ನಡುವಿನ ಒಂದು ಬಾಂಧವ್ಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ದಯವಿಟ್ಟು ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡಿ ಅಮೆಜಾನ್ ಟಿವಿಯಲ್ಲಿ ಬರುತ್ತೆ ಎಂದು ಕಾಯದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳಲ್ಲಿ ಮನವಿ ಮಾಡಿದರು. ರಘು ಹಾಸನ್ ನಿರ್ದೇಶನದಲ್ಲಿ ಮೂಡಿ ಬಂದಿರುವ "ನಾನು ಮತ್ತು ಗುಂಡ "ಚಿತ್ರದಲ್ಲಿ ಆಟೊ ಡ್ರೈವರ್ ಶಂಕ್ರನ ಪಾತ್ರದಲ್ಲಿ ಶಿವರಾಜ್ ಕೆಆರ್ ಪೇಟೆ ಅಭಿನಯಿಸಿದ್ರೆ
.ಶಂಕ್ರನ ಹೆಂಡತಿಯಾಗಿ ಸಂಯುಕ್ತ ಹೊರನಾಡು ಕಾಣಿಸಿದ್ದಾರೆ
.ಅಲ್ಲದೆ ಗುಂಡನ ಪಾತ್ರದಲ್ಲಿ ಸಿಂಬ ಎಂಬ ಶ್ವಾನ ಅದ್ಭುತವಾಗಿ ನಡೆಸಿದ್ದು ಚಿತ್ರನೋಡಿದ ಪ್ರತಿಯೊಬ್ಬರು ಗುಂಡ ಹಾಗೂ ಶಂಕ್ರನ ಬಗ್ಗೆ ಮಾತನಾಡ್ತಿದ್ದಾರೆ.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.