ಕಿರುತೆರೆಯಿಂದ ಬಂದ ಸಾಕಷ್ಟು ನಟ/ನಟಿಯರಿಗೆ ಬೆಳ್ಳಿಪರದೆಯಲ್ಲಿ ಕೂಡಾ ನಟಿಸುವ ಅವಕಾಶ ದೊರೆತಿದೆ. ಅದರಲ್ಲಿ ಕೆಲವರು ಜನಮನ್ನಣೆ ಗಳಿಸಿದರೆ ಮತ್ತೆ ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮತ್ತೆ ಕಿರುತೆರೆಯತ್ತ ಮುಖ ಮಾಡುತ್ತಿದ್ದಾರೆ.
- " class="align-text-top noRightClick twitterSection" data="">
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಕಿರುತೆರೆಯಿಂದ ತಮ್ಮ ಕರಿಯರ್ ಆರಂಭಿಸಿ ಇದೀಗ ಬೆಳ್ಳಿಪರದೆ ಮೇಲೆ ಸಾಕಷ್ಟು ಮಿಂಚುತ್ತಿದ್ದಾರೆ. ಅವರಿಗೆ ಉತ್ತಮ ಅವಕಾಶಗಳು ಹುಡುಕಿ ಬರುತ್ತಿವೆ. ಇದುವರೆಗೂ ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಶಿವರಾಜ್ ಇದೀಗ 'ನಾನು ಮತ್ತು ಗುಂಡ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹೆಸರೇ ಹೇಳುವಂತೆ ಸಿನಿಮಾದಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಶಿವರಾಜ್ ಹಾಗೂ ಗುಂಡನ ಪಾತ್ರದಲ್ಲಿ ನಟಿಸಿರುವ ಶ್ವಾನ.
ಈ ಸಿನಿಮಾ ಶ್ವಾನ ಹಾಗೂ ಶಿವರಾಜ್ ನಡುವಿನ ಭಾವನಾತ್ಮಕ ಕಥೆಯ ಚಿತ್ರವಾಗಿದ್ದು ಶಿವರಾಜ್ ಪಾತ್ರಕ್ಕಿಂತ ಗುಂಡನ ಪಾತ್ರವೇ ಬಹಳ ಪ್ರಮುಖವಾಗಿದೆಯಂತೆ. ಗುಂಡನ ಪಾತ್ರದಲ್ಲಿ 'ಸಿಂಬ' ಹೆಸರಿನ ಶ್ವಾನ ತುಂಬಾ ಭಾವನಾತ್ಮಕವಾಗಿ ಅಭಿನಯಿಸಿದೆ. ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುಂಡನ ಪಾತ್ರಕ್ಕೆ ಸಿಂಬ ಶ್ವಾನವೇ ಡಬ್ಬಿಂಗ್ ಮಾಡಿದೆ ಎಂದು ಚಿತ್ರತಂಡ ಹೇಳಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಮಂದಿ ಟೀಸರ್ ನೋಡಿ ಮೆಚ್ಚಿದ್ದಾರೆ.
ಚಿತ್ರದಲ್ಲಿ ಶಿವರಾಜ್ ಆಟೋ ಡ್ರೈವರ್ ಪಾತ್ರದಲ್ಲಿ ಅಭಿನಯಿಸಿದ್ದರೆ, ಹೆಂಡತಿ ಪಾತ್ರದಲ್ಲಿ ಸಂಯುಕ್ತ ಹೊರನಾಡು ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದು ರಘುಹಾಸನ್ ಬಂಡವಾಳ ಹೂಡಿದ್ದಾರೆ. ಇದು ಶ್ರೀನಿವಾಸ್ ನಿರ್ದೇಶನದ ಮೊದಲ ಚಿತ್ರವಾಗಿದ್ದು ಹಾಸನದಲ್ಲಿ ನಡೆದ ನೈಜ ಘಟನೆಯೊಂದರಿಂದ ಸ್ಫೂರ್ತಿ ಪಡೆದು ಚಿತ್ರಕಥೆ ತಯಾರಿಸಲಾಗಿದೆಯಂತೆ. ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರವೇ ತೆರೆ ಕಾಣಲಿದೆ.