ETV Bharat / sitara

ಪಾತ್ರಕ್ಕಾಗಿ ಸಣ್ಣ ಆಗಲು ಧ್ರುವ ಸರ್ಜಾ ಏನು ಮಾಡಿದ್ರು....ನಂದ ಕಿಶೋರ್ ಹೇಳ್ತಾರೆ ಕೇಳಿ..!

author img

By

Published : Jan 21, 2021, 12:45 PM IST

ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾ ಫೆಬ್ರವರಿ 19 ರಂದು ಬಿಡುಗಡೆಯಾಗುತ್ತಿದೆ. ನಿನ್ನೆ ಚಿತ್ರತಂಡ ಸಿನಿಮಾ ಬಿಡುಗಡೆ ಪ್ರೆಸ್​​ಮೀಟ್ ಏರ್ಪಡಿಸಿತ್ತು. ಈ ಸಮಯದಲ್ಲಿ ನಂದ ಕಿಶೋರ್ ಹಾಗೂ ಧ್ರುವ ಸರ್ಜಾ ಪಾತ್ರಕ್ಕಾಗಿ ಸಣ್ಣ ಆಗಲು ಏನೆಲ್ಲಾ ಸರ್ಕಸ್ ಮಾಡಬೇಕಾಯ್ತು ಎಂದು ವಿವರಿಸಿದ್ದಾರೆ.

Pogaru movie
'ಪೊಗರು'

ಕಳೆದ 10 ತಿಂಗಳಿಂದ ಚಿತ್ರಮಂದಿರಗಳಲ್ಲಿ ಯಾವ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಆದರೆ ಈಗ ಒಂದೊಂದಾಗಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಫೆಬ್ರವರಿಯಿಂದ ಏಪ್ರಿಲ್​​ವರೆಗೂ ಸ್ಟಾರ್ ಸಿನಿಮಾಗಳ ರಿಲೀಸ್ ಜಾತ್ರೆ ನಡೆಯಲಿದೆ.ಈ ಸಾಲಿನಲ್ಲಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಪೊಗರು' ರೆಡಿಯಾಗಿದೆ.

'ಪೊಗರು' ರಿಲೀಸ್ ಪ್ರೆಸ್​​​ಮೀಟ್​​​​

ಇದನ್ನೂ ಓದಿ: ಜಾವೇದ್ ಅಖ್ತರ್ ಮಾನನಷ್ಟ ಮೊಕದ್ದಮೆ ಪ್ರಕರಣ: ಕಂಗನಾಗೆ ಸಮನ್ಸ್ ನೀಡಿದ ಮುಂಬೈ ಪೊಲೀಸರು

ಈ ಚಿತ್ರದ ಪಾತ್ರಕ್ಕಾಗಿ ಧ್ರುವ ಸರ್ಜಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. 10ನೇ ತರಗತಿ ಸ್ಕೂಲ್ ಹುಡುಗನ ಪಾತ್ರಕ್ಕಾಗಿ, ಧ್ರುವ ಸರ್ಜಾ ಸಣ್ಣ ಆದ‌ ರೀತಿ ಮಾತ್ರ ಬಹಳ ಇಂಟ್ರಸ್ಟ್ರಿಂಗ್.ಈ ಸ್ಕೂಲ್ ಹುಡುಗನ ಪಾತ್ರಕ್ಕಾಗಿ ಧ್ರುವ ಸರ್ಜಾ ಬರೋಬ್ಬರಿ 30 ಕೆ.ಜಿ ಸಣ್ಣ ಆಗಿದ್ರಂತೆ. ಅದಕ್ಕೆ ಈ ವಿಡಿಯೋದಲ್ಲಿರುವ ಫೋಟೋನೆ ಸಾಕ್ಷಿ. ಈ‌ಫೋಟೋ ನೋಡಿದ್ರೆ ಧ್ರುವ ಸರ್ಜಾ ಡೆಡಿಕೇಶನ್ ಗೊತ್ತಾಗುತ್ತೆ. ಸತತ ಮೂರು ತಿಂಗಳು ಧ್ರುವ ಸರ್ಜಾ ಊಟನೇ ಮಾಡಿರಲಿಲ್ವಂತೆ. ನಿರ್ದೇಶಕ ನಂದ ಕಿಶೋರ್ ಹೇಳುವ ಹಾಗೇ ಪ್ರತಿ ದಿನ 4-7 ಬೇಯಿಸಿದ ಹುರುಳಿ ಕಾಯಿ, ಎಳನೀರು, ಮಜ್ಜಿಗೆ , ಹಣ್ಣಿನ ಜ್ಯೂಸ್ ಬಿಟ್ಟರೆ ಧ್ರುವ ಸರ್ಜಾ, ಊಟವನ್ನು ತ್ಯಜಿಸಿದರಂತೆ. ಈ ಫೋಟೋವನ್ನು ಚಿತ್ರತಂಡ ಇದುವರೆಗೂ ಎಲ್ಲೂ ರಿವೀಲ್ ಮಾಡಿರಲಿಲ್ಲ. ಸ್ಕೂಲ್ ಹುಡುಗನ ಪಾತ್ರದ ನಂತರ ಮತ್ತೆ ದಪ್ಪ ಆಗಲು ಧ್ರುವ 3 ತಿಂಗಳು ಸಮಯ ಕೇಳಿದ್ದರಂತೆ. ಆಗ ಬರೋಬ್ಬರಿ 100 ಕೆ.ಜಿ ದಪ್ಪ ಆಗಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ಸ್ ಜೊತೆ ಧ್ರುವ ಸರ್ಜಾ ಫೈಟ್ ಮಾಡಿದ್ದಾರೆ. ಪಾತ್ರಕ್ಕಾಗಿ ಧ್ರುವ ಸರ್ಜಾ ಶ್ರದ್ಧೆಯನ್ನು ನೋಡಿದ್ರೆ ಈ 'ಪೊಗರು' ಹುಡುಗನಿಗೆ ಸಿನಿಮಾ ಮೇಲಿನ ವ್ಯಾಮೋಹ ಎಷ್ಟಿದೆ ಎನ್ನುವುದು ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.