ಕನ್ನಡದ ಜನಪ್ರಿಯ ಧಾರಾವಾಹಿ ನಾಗಿಣಿ 2 ತಂಡ ಯಶಸ್ವಿ ನೂರು ಸಂಚಿಕೆ ಪೂರೈಸಿದ ಸಂತಸದಲ್ಲಿದೆ. ನಾಗಿಣಿ 2 ಧಾರಾವಾಹಿಯಲ್ಲಿ ನಾಗಿಣಿ ಶಿವಾನಿಯಾಗಿ ಅಭಿನಯಿಸುತ್ತಿರುವ ನಮ್ರತಾಗೌಡ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಶತದಿನ ಪೂರೈಸಿದ "ನಾಗಿಣಿ 2" ಧಾರಾವಾಹಿ ಧಾರಾವಾಹಿಯಲ್ಲಿ ರೂಪ ಬದಲಾಯಿಸುವ ನಾಗಿಣಿಯ ಪಾತ್ರವನ್ನು ನಿರ್ವಹಿಸುವ ನಮ್ರತಾ ಗೌಡ "ಈ ಮೈಲಿಗಲ್ಲನ್ನು ದಾಟಿರುವುದು ನಿಜವಾಗಿಯೂ ನಮಗೆಲ್ಲರಿಗೂ ವಿಶೇಷವಾದ ಸಂಗತಿ. ಕೊರೊನಾ ಹಿನ್ನೆಲೆ ಲಾಕ್ ಡೌನ್ ನಿಂದಾಗಿ ಧಾರಾವಾಹಿ ತಂಡ ಚಿತ್ರೀಕರಣ ನಿಲ್ಲಿಸಿತ್ತು. ಮಾತ್ರವಲ್ಲ ಹೊಸ ಸಂಚಿಕೆಗಳು ಬ್ಯಾಂಕಿಂಗ್ ಇಲ್ಲದ ಕಾರಣ ಧಾರಾವಾಹಿ ಪ್ರಸಾರ ಕೂಡ ಸ್ಥಗಿತಗೊಂಡಿತ್ತು. ಆ ಸಮಯದಲ್ಲಿ ನಿಜಕ್ಕೂ ಕೊಂಚ ಭಯವಾಗಿತ್ತು. ಪ್ರೇಕ್ಷಕರ ಸಂಪರ್ಕ ಸಾಧಿಸುವುದು ಎಷ್ಟು ಕಷ್ಟ ಎಂಬ ಬಗ್ಗೆ ನಾವು ಚಿಂತಿತರಾಗಿದ್ದೆವು. ಆದರೆ ಇದೀಗ ಎಲ್ಲಾ ಚಿಂತೆಗಳು ಮಾಯವಾಗಿದ್ದು, ನಾವು ಹೊಂದಿದ್ದ ಎಲ್ಲಾ ನಿರಾಸೆಗಳು ಕೊನೆಗೊಂಡಿದೆ. ಇದೀಗ ನಾವು ಯಶಸ್ವಿ 100 ಸಂಚಿಕೆಗಳನ್ನು ಪೂರೈಸಿದ್ದೇವೆ. ಇದಕ್ಕಾಗಿ ನಮ್ಮ ತಾಂತ್ರಿಕ ವರ್ಗ, ಕಲಾವಿದರು ಬಹಳ ಪರಿಶ್ರಮ ಪಟ್ಟಿದ್ದಾರೆ. ಈ ಸಂಭ್ರಮವನ್ನು ಸೆಟ್ನಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದ್ದೇವೆ " ಎಂದು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಶತದಿನ ಪೂರೈಸಿದ ನಾಗಿಣಿ 2 ಧಾರಾವಾಹಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ನಮ್ರತಾ ಗೌಡ “ಆಕಾಶ ದೀಪ” ಧಾರಾವಾಹಿಯಲ್ಲಿ ಮನೆಕೆಲಸದ ಹುಡುಗಿಯಾಗಿ ನಟಿಸಿದ್ದರು. ನಂತರ ಪುಟ್ಟ ಗೌರಿ ಮದುವೆ ಧಾರಾವಾಹಿಯ ಹಿಮಾ ಆಗಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿದ್ದರು. ಈಗ ನಾಗಿಣಿಯ ಶಿವಾನಿಯಾಗಿ ಮತ್ತೆ ಧಾರಾವಾಹಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.