ETV Bharat / sitara

ಬುಸುಗುಡಲು ನಿಮ್ಮ ಮನೆಗೆ ಬರ್ತಿದ್ದಾಳೆ 'ನಾಗಿಣಿ-2' - ರಾಮ್​ ಜಿ ನಿರ್ದೇಶನದ ನಾಗಿಣಿ 2

ದೀಪಿಕಾ ದಾಸ್​​ ನಟನೆಯ ನಾಗಿಣಿ ಧಾರಾವಾಹಿ ಇನ್ನೇನು ಮುಗಿರುವ ಹಂತಕ್ಕೆ ತಲುಪಿದ್ದು, ಡಿಸೆಂಬರ್​​ನಲ್ಲಿ ನಾಗಿಣಿ-2 ಆರಂಭವಾಗಲಿದೆ ಎಂಬ ಸುದ್ದಿ ವೀಕ್ಷಕರಿಗೆ ಸಂತಸ ನೀಡಿದೆ.

nagini 2 serial coming soon
'ನಾಗಿಣಿ' ಹೋದರೇನಂತೆ, ನಿಮ್ಮ ಮನೆಗೆ ಬರ್ತಿದ್ದಾಳೆ  'ನಾಗಿಣಿ-2'
author img

By

Published : Nov 28, 2019, 5:14 PM IST

ಇತ್ತೀಚೆಗೆ 'ನಾಗಿಣಿ' ಧಾರಾವಾಹಿ ಯಶಸ್ವಿಯಾಗಿ 1000 ಸಂಚಿಕೆ ಪೂರೈಸಿದ್ದು ಸದ್ಯದಲ್ಲೇ ಮುಕ್ತಾಯಗೊಳ್ಳಲಿದೆ. ಇದರ ಜೊತೆಗೆ ಡಿಸೆಂಬರ್​​ನಲ್ಲಿ ನಾಗಿಣಿ-2 ಆರಂಭವಾಗಲಿದೆ ಎಂಬ ಸುದ್ದಿ ವೀಕ್ಷಕರಿಗೆ ಸಂತಸ ನೀಡಿದೆ.

ನಾಗಿಣಿ ಧಾರಾವಾಹಿಯನ್ನು ಹಯವದನ ನಿರ್ದೇಶಿಸಿದ್ದು, ನಾಗಿಣಿ-2 ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ರಾಮ್ ಜೀ ವಹಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆ ಧಾರಾವಾಹಿ ನಿರ್ದೇಶಿಸಿ ಮನೆ ಮಾತಾಗಿರುವ ರಾಮ್ ಜೀ, ಇದೇ ಮೊದಲ ಬಾರಿಗೆ ಜೀ ಕನ್ನಡದ ಧಾರಾವಾಹಿಗೆ ಆಕ್ಷನ್​ ಕಟ್​ ಹೇಳುತ್ತಿದ್ದಾರೆ.

"ಫ್ಯಾಂಟಸಿ ಧಾರಾವಾಹಿ ನಾಗಿಣಿಯನ್ನು ಜನ ಸ್ವೀಕರಿಸಿದ್ದರು. ಜೊತೆಗೆ ನಾಗಿಣಿ ಧಾರಾವಾಹಿ ಮುಗಿಯುತ್ತಿದೆ ಎಂದು ತಿಳಿದಾಗ ನಾಗಿಣಿ ಭಾಗ-2 ಮಾಡುವಂತೆಯೂ ಬೇಡಿಕೆಗಳು ಅವರಿಗಿತ್ತು. ಅದೇ ಕಾರಣಕ್ಕೆ ಅದ್ಭುತವಾದ ಕಥೆ ಹೆಣೆದಿದ್ದು, ಸುಂದರವಾದ ಕಥೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ" ಎಂದು ರಾಮ್​​​​ ಜೀ ಹೇಳಿದ್ದಾರೆ. ಇನ್ನು ನಾಗಿಣಿ 2 ಧಾರಾವಾಹಿಯಲ್ಲಿ ಪುಟ್ಟಗೌರಿ ಸೀರಿಯಲ್​ನಲ್ಲಿದ್ದ ಹಿಮಾ ನಾಗಿಣಿಯಾಗಿ ಬುಸುಗುಟ್ಟಲಿದ್ದಾಳೆ.

hima
ಹಿಮಾ

ತನ್ನ ಹತ್ಯೆ ಮಾಡಿದ ಪ್ರೇಮಿಯ ವಿರುದ್ಧ ಸಮರ ಸಾರಲು ನಾಗಿಣಿ ಭೂ ಲೋಕಕ್ಕೆ ಬಂದು ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂದಬುದೇ ಈ ಧಾರಾವಾಹಿಯ ಕಥೆ. ಧಾರಾವಾಹಿಗೋಸ್ಕರ ಭವ್ಯವಾದ ಸೆಟ್ ಹಾಕಲೆಂದೇ ಮುಂಬೈಯಿಂದ ಸ್ಪೆಷಲಿಸ್ಟ್​​ಗಳನ್ನು ಕರೆಸಿಕೊಂಡಿದ್ದಾರಂತೆ. ಇನ್ನು ಎಲ್ಲಾ ಅಂದುಕೊಂಡಂತೆ ಆದರೆ ಡಿಸೆಂಬರ್ ಎರಡನೇ ವಾರದಿಂದ ನಾಗಿಣಿ-2 ಮತ್ತೆ ಬುಸುಗುಡಲು ಬರಲಿದ್ದಾಳೆ.

Intro:Body: ನಾಗಿಣಿ 2 ಧಾರಾವಾಹಿಯ ಪ್ರೋಮೋ ಈಗಾಗಲೇ ವಾಹಿನಿಯಲ್ಲಿ ಹರಿದಾಡುತ್ತಿದ್ದು ವೀಕ್ಷಕರು ಅದಕ್ಕೆ ಫಿದಾ ಆಗಿ ಬಿಟ್ಟಿದ್ದಾರೆ. ಈಗಾಗಲೇ ಪ್ರಸಾರವಾಗುತ್ತಿರುವ ನಾಗಿಣಿ ಧಾರಾವಾಹಿ ಯಶಸ್ವಿಯಾಗಿ 1000 ಸಂಚಿಕೆಯನ್ನು ಪೂರೈಸಿದ್ದು ಸದ್ಯದಲ್ಲೇ ಮುಕ್ತಾಯಗೊಳ್ಳಲಿದೆ. ಇದರ ಜೊತೆಗೆ ಡಿಸೆಂಬರ್ ನಲ್ಲಿ ನಾಗಿಣಿ 2 ಆರಂಭವಾಗಲಿದೆ ಎಂಬ ಸುದ್ದಿ ವೀಕ್ಷಕರಿಗೆ ಸಂತಸವನ್ನು ನೀಡಿದೆ.

ನಾಗಿಣಿ ಧಾರಾವಾಹಿಯನ್ನು ಹಯವದನ ಅವರು ನಿರ್ದೇಶಿಸಿದ್ದಯ ನಾಗಿಣಿ 2 ರ ನಿರ್ದೇಶನದ ಜವಾಬ್ದಾರಿ ರಾಮ್ ಜೀ ಅವರ ಮೇಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆ ಎಂಬ ಜನಪ್ರಿಯ ಧಾರಾವಾಹಿಯನ್ನು ನಿರ್ದೇಶಿಸಿ ಮನೆ ಮಾತಾಗಿರುವ ರಾಮ್ ಜೀ ಇದೇ ಮೊದಲ ಬಾರಿಗೆ ಜೀ ಕನ್ನಡದಲ್ಲಿ ಧಾರಾವಾಹಿ ನಿರ್ದೇಶಿಸಲಿದ್ದಾರೆ.

" ಪ್ಯಾಂಟಸಿ ಧಾರಾವಾಹಿ ನಾಗಿಣಿಯನ್ನು ಜನ ಸ್ವೀಕರಿಸಿದ್ದರು. ಜೊತೆಗೆ ನಾಗಿಣಿ ಧಾರಾವಾಹಿ ಮುಗಿಯುತ್ತಿದೆ ಎಂದು ತಿಳಿದಾಗ ನಾಗಿಣಿ ಭಾಗ 2 ಮಾಡುವಂತೆಯೂ ಬೇಡಿಕೆಯೂ ಅವರಿಗಿತ್ತು. ಇದೀಗ ಅದೇ ಕಾರಣಕ್ಕೆ ಅದ್ಭುತವಾದ ಕಥೆ ಹೆಣೆದಿದ್ದು, ಸುಂದರವಾದ ಕಥೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ" ಎಂದಿದ್ದಾರೆ ರಾಮ್ ಜೀ.

ತನ್ನ ಹತ್ಯೆ ಮಾಡಿದ ಪ್ರೇಮಿಯ ವಿರುದ್ಧ ನಾಗಿಣಿ ಭೂಲೋಕಕ್ಕೆ ಬರುವ ಮೂಲಕ ಕತೆ ಆರಂಭವಾಗಲಿದೆ ಎನ್ನುವ ರಾಮ್ ಜೀ ಕೊಂಚ ಗ್ರಾಫಿಕ್ಸ್ ಕೂಡಾ ಬಳಸಿದ್ದಾರೆ. ಇದರ ಜೊತೆಗೆ ಧಾರಾವಾಹಿಗಾಗಿ ಭವ್ಯವಾದ ಸೆಟ್ ಹಾಕಲೆಂದೇ ಮುಂಬೈಯಿಂದ ಸ್ಪೆಷಲಿಸ್ಟ್ ಗಳನ್ನು ಕರೆಸಿಕೊಂಡಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆದರೆ ಡಿಸೆಂಬರ್ ಎರಡನೇ ವಾರದಿಂದ ಬುಸುಗುಡಲು ಬರಲಿದ್ದಾಳೆ ನಾಗಿಣಿ 2.

https://www.instagram.com/p/B4tXnw7A92r/?igshid=im352i6aq416Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.