ETV Bharat / sitara

ನಾಗತಿಹಳ್ಳಿ ಸಿನಿಮಾಗೆ ಕ್ರಿಕೆಟ್ ತಂಡಗಳ ಶೀರ್ಷಿಕೆ - undefined

ಕನ್ನಡ ಮೇಷ್ಟ್ರು ಎಂದೇ ಹೆಸರಾದ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಹೊಸ ಸಿನಿಮಾಗೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಎಂಬ ಹೆಸರಿಟ್ಟಿದ್ದು ಸಿನಿಮಾದಲ್ಲಿ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಶ್ರೀಮಂತಿಕೆಯ ಕಥೆ ಇರಲಿದೆ ಎನ್ನಲಾಗಿದೆ.

nagatihalli
author img

By

Published : Jul 15, 2019, 9:40 AM IST

ಹಿರಿಯ ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಎಂದಿಗೂ ಶೀರ್ಷಿಕೆ ಇಲ್ಲದೆ ಚಿತ್ರೀಕರಣ ಪ್ರಾರಂಭ ಮಾಡಿರಲಿಲ್ಲ. ಇದೀಗ ಅವರು ಇನ್ನೊಂದು ಸಿನಿಮಾವನ್ನು ಮಾಡುತ್ತಿದ್ದು ಚಿತ್ರೀಕರಣ ಪೂರ್ತಿಗೊಳಿಸಿ ಶೀರ್ಷಿಕೆ ಕೂಡಾ ಅಂತಿಮಗೊಳಿಸಿದ್ದಾರೆ.

manvita
ಮಾನ್ವಿತಾ ಕಾಮತ್

‘ಅಮೆರಿಕ ಅಮೆರಿಕ’ ಶೀರ್ಷಿಕೆ ಇದ್ದಂತೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಶೀರ್ಷಿಕೆಯನ್ನು ತಮ್ಮ ಹೊಸ ಚಿತ್ರಕ್ಕೆ ಫೈನಲ್ ಮಾಡಿದ್ದಾರೆ. ಕನ್ನಡ ಮೇಷ್ಟ್ರು ಎಂದು ಕೂಡಾ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರಶೇಖರ್ ಈ ಹೊಸ ಸಿನಿಮಾಗೆ ಮತ್ತೆ ಆಂಗ್ಲ ಭಾಷೆಯಲ್ಲಿ ಶೀರ್ಷಿಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇಡೀ ಚಿತ್ರೀಕರಣ ಇಂಗ್ಲೆಂಡ್​​ನಲ್ಲಿ ನಡೆದಿರುವುದರಿಂದ ಶೀರ್ಷಿಕೆಗೆ ತಕರಾರು ಆಗುವ ಸಾಧ್ಯತೆ ಇಲ್ಲ. ಇದೇನಪ್ಪ ಇದು ಕ್ರಿಕೆಟ್ ಸಂಬಂಧಿತ ಸಿನಿಮಾನ ಎಂದು ಅನುಮಾನ ಬರುವುದು ಗ್ಯಾರಂಟಿ.

vaista
ವಸಿಷ್ಠ ಎನ್ ಸಿಂಹ

ಆದರೆ ನಾಗತಿಹಳ್ಳಿ ಅವರ ಕಥಾ ವಸ್ತು ಬೇರೆಯದೇ ಇದೆ. ಈ ಶೀರ್ಷಿಕೆ ಕ್ರಿಕೆಟ್​​​ಗೆ ಸಂಬಂಧಿಸಿದ ಹಾಗೆ ಇದೆ. ಆದರೆ ಶೀರ್ಷಿಕೆ ಜೊತೆ ‘ಕ್ರಿಕೆಟ್ ಅಲ್ಲ’, ಎಂದು ಉಪ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕರು. ಎರಡು ದೇಶಗಳ ನಡುವೆ ಇರುವ ಸಾಂಸ್ಕೃತಿಕ ಶ್ರೀಮಂತಿಕೆ ತೆರೆಯ ಮೇಲೆ ಲಭ್ಯವಾಗಲಿದೆ. ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕಾಗಿ ಒಂದೂವರೆ ತಿಂಗಳು ಲಂಡನಿನಲ್ಲಿ ಚಿತ್ರೀಕರಣ ಮಾಡಿದ್ದಾರೆ. ವಸಿಷ್ಠ ಎನ್ ಸಿಂಹ ಹಾಗೂ ಮಾನ್ವಿತಾ ಕಾಮತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಮೊದಲು ಲಂಡನಿನಲ್ಲೇ ಚಿತ್ರೀಕರಿಸಲಾಗುವುದು ಎನ್ನಲಾಗಿದೆ. ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅರ್ಜುನ್ ಜನ್ಯಾ, ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದು 'ಕನ್ನಡ ಕಲಿ' ಎಂಬ ಹಾಡು ಬಹಳ ವಿಶೇಷವಾಗಿದೆಯಂತೆ. ಸಂಸದೆ ಸುಮಲತಾ ಅಂಬರೀಶ್ ಹಾಗೂ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

 ನಾಗತಿಹಳ್ಳಿ ಸಿನಿಮಾಕ್ಕೆ ಇಂಡಿಯ ವರ್ಸಸ್ ಈಗ್ಲೆಂಡ್ ಶೀರ್ಷಿಕೆ

ಹಿರಿಯ ನಿರ್ದೇಶಕ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಯಾವತ್ತೂ ಶೀರ್ಷಿಕೆ ಇಲ್ಲದೆ ಚಿತ್ರೀಕರಣ ಪ್ರಾರಂಭ ಮಾಡಿರಲಿಲ್ಲ. ಈಗ ಸಿದ್ದವಾಗಿರುವ ಸಿನಿಮಾಕ್ಕೆ ಚಿತ್ರೀಕರಣ ಪೂರ್ತಿಗೊಳಿಸಿ ಶೀರ್ಷಿಕೆ ಅಂತಿಮಗೊಳಿಸಿದ್ದಾರೆ.

ಅಮೆರಿಕ ಅಮೆರಿಕ ಶೀರ್ಷಿಕೆ ಇದ್ದಂತೆ ಇಂಡಿಯ ವರ್ಸಸ್ ಈಗ್ಲೆಂಡ್ ಶೀರ್ಷಿಕೆ ಫೈನಲ್ ಮಾಡಿದ್ದಾರೆ. ಕನ್ನಡ ಮೇಷ್ಟ್ರು ಸಹ ಎಂದು ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾಕ್ಕೆ ಮತ್ತೆ ಆಂಗ್ಲ ಭಾಷೆಯಲ್ಲಿ ಶೀರ್ಷಿಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇಡೀ ಚಿತ್ರೀಕರಣ ಈಗ್ಲೆಂಡ್ ಅಲ್ಲಿ ನಡೆದಿರುವುದರಿಂದ ಶೀರ್ಷಿಕೆಗೆ ತಕರಾರು ಆಗುವ ಸಾಧ್ಯತೆ ಇಲ್ಲ.

ಸಧ್ಯಕ್ಕೆ ಇದೇನಪ್ಪ ಕ್ರಿಕೆಟ್ ಸಂಬಂದಿತ ಚಿತ್ರವ ಎಂದು ಕೆಲವು ಆಲೋಚಿಸುವುದು ಉಂಟು. ಆದರೆ ನಾಗತಿಹಳ್ಳಿ ಅವರ ಕಥಾ ವಸ್ತು ಬೇರೆಯದೇ ಇದೆ. ಹೆಚ್ಚಾಗಿ ಈ ಶೀರ್ಷಿಕೆ ಕ್ರಿಕೆಟ್ಗೆ ಸಂಬಂದ ಪಟ್ಟ ಹಾಗೆ ಕಾಣುತ್ತದೆ. ಆದರೆ ಕ್ರಿಕೆಟ್ ಅಲ್ಲ’....ಎಂದು ಉಪ ಶೀರ್ಷಿಕೆ ಇಟ್ಟಿದ್ದಾರೆ ನಿರ್ದೇಶಕರು. ಎರಡು ದೇಶದ ನಡುವೆ ಇರುವ ಸಂಸ್ಕೃತಿಕ ಶ್ರೀಮಂತಿಕೆ ತೆರೆಯ ಮೇಲೆ ಲಭ್ಯವಾಗಲಿದೆ.

ನಾಗತಿಹಳ್ಳಿ ಚಂದ್ರಶೇಖರ್ ಒಂದೂವರೆ ತಿಂಗಳು ಲಂಡನ್ ದೇಶದಲ್ಲಿ ಚಿತ್ರೀಕರಣ ಮಾಡಿದ್ದಾರೆ. ವಸಿಷ್ಠ ಎನ್ ಸಿಂಹ ಈ ಚಿತ್ರದಿಂದ ನಾಯಕ ಸಹ ಆಗಿದ್ದಾರೆ. ನಾಯಕಿ ಆಗಿ ಮನ್ವಿತ ಹರೀಶ್ ನಟಿಸಿದ್ದಾರೆ.

ಲಂಡನ್ ದೇಶದಲ್ಲೇ ಚಿತ್ರದ ಮೊದಲ ಪ್ರದರ್ಶನ ಅಂತ ಸಹ ಹೇಳಲಾಗುತ್ತಿದೆ. ಸಧ್ಯಕ್ಕೆ ಚಿತ್ರೆತರ ಚಟುವಟಿಕೆಗಳು ನಡೆಯುತ್ತಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಕನ್ನಡ ಕಾಲಿ...ಎಂಬ ಹಾಡು ವಿಶೇಷವಾಗಿದೆಯಂತೆ. ಸಂಸದೆ ಸುಮಲತಾ ಅಂಬರೀಶ್, ಕೆಲವು ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.