ETV Bharat / sitara

ನಿತಿನ್ ಜೊತೆ ಡ್ಯೂಯೆಟ್ ಹಾಡಲು ದುಬೈಗೆ ಹಾರಿದ ಕನ್ನಡತಿ ನಭಾ ನಟೇಶ್​ - Ismart shankar fame Nabha natesh

ಕನ್ನಡತಿ ನಭಾ ನಟೇಶ್ ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಅವರು ನಿತಿನ್​ ಜೊತೆ ಹೆಸರಿಡದ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದು ಚಿತ್ರೀಕರಣಕ್ಕಾಗಿ ದುಬೈಗೆ ತೆರಳಿದ್ದಾರೆ. ಚಿತ್ರವನ್ನು ಮೆರ್ಲಪಾಕ ಗಾಂಧಿ ನಿರ್ದೇಶಿಸುತ್ತಿದ್ದಾರೆ.

Nabha natesh
ನಭಾ ನಟೇಶ್​
author img

By

Published : Dec 8, 2020, 2:30 PM IST

'ವಜ್ರಕಾಯ' ಪಟಾಕ ಪಾರ್ವತಿ ನಭಾ ನಟೇಶ್, ಕನ್ನಡ ಸಿನಿಮಾಗಳಿಗಿಂತ ಈಗ ತೆಲುಗು ಸಿನಿಮಾಗಳಲ್ಲಿ ಬಹಳ ಬ್ಯುಸಿ ಇದ್ದಾರೆ. 'ನನ್ನು ದೋಚುಕುಂದುವಟೇ' ಚಿತ್ರದ ಮೂಲಕ ಟಾಲಿವುಡ್​​​​ಗೆ ಬಂದ ನಭಾ ನಟೇಶ್​, ಇಸ್ಮಾರ್ಟ್ ಶಂಕರ್ ಚಿತ್ರದ ಮೂಲಕ ತೆಲುಗು ಯುವಕರ ಮೋಸ್ಟ್ ಫೇವರೆಟ್ ನಟಿಯರ ಲಿಸ್ಟ್​​​​ಗೆ ಸೇರಿಕೊಂಡಿದ್ದಾರೆ. ಆ ಚಿತ್ರದಲ್ಲಿ ನಭಾ ಆ್ಯಕ್ಟಿಂಗ್ ನೋಡಿ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ.

ಡಿಸ್ಕೋ ರಾಜ, ಸೋಲೋ ಬ್ರತುಕೆ ಸೋ ಬೆಟರ್ ಸಿನಿಮಾಗಳಲ್ಲಿ ಕೂಡಾ ನಟಿಸಿರುವ ನಭಾ ನಟೇಶ್, ಸದ್ಯಕ್ಕೆ ಅಲ್ಲುಡು ಅದುರ್ಸ್ ಹಾಗೂ ಇನ್ನೂ ಹೆಸರಿಡದ ಅಂಧಾದುನ್ ರೀಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಿತಿನ್ ನಾಯಕನಾಗಿ ನಟಿಸುತ್ತಿದ್ದು ನಭಾ, ನಿತಿನ್ ಜೊತೆ ಡ್ಯೂಯೆಟ್ ಹಾಡಲು ದುಬೈಗೆ ತೆರಳಿದ್ದಾರೆ. ಚಿತ್ರವನ್ನು ಮೆರ್ಲಪಾಕ ಗಾಂಧಿ ನಿರ್ದೇಶಿಸುತ್ತಿದ್ದು ಎನ್​​​​​​. ಸುಧಾಕರ್​ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ನಿರ್ಮಿಸುತ್ತಿದ್ದಾರೆ. ಇದು ನಿತಿನ್ ಅಭಿನಯದ 30ನೇ ಸಿನಿಮಾವಾಗಿದ್ದು ಭಾನುವಾರದಿಂದ ದುಬೈನಲ್ಲಿ ಚಿತ್ರೀಕರಣ ಆರಂಭವಾಗಿದೆ. ಈ ವಿಚಾರವನ್ನು ನಭಾ ಹಾಗೂ ನಿತಿನ್ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ತಮನ್ನಾ ಕೂಡಾ ನಟಿಸುತ್ತಿದ್ದಾರೆ. ಸದ್ಯಕ್ಕೆ ನಭಾ ನಟೇಶ್ ಹಾಗೂ ನಿತಿನ್ ಭಾಗದ ಚಿತ್ರೀಕರಣ ದುಬೈನಲ್ಲಿ ಜರುಗುತ್ತಿದ್ದು ಜನವರಿಯಲ್ಲಿ ಆರಂಭವಾಗಲಿರುವ ಮುಂದಿನ ಷೆಡ್ಯೂಲ್​​​​​​​ನಲ್ಲಿ ತಮನ್ನಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದ್ದಾರೆ. ಮಹತಿ ಸ್ವರಸಾಗರ್, ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.