ETV Bharat / sitara

ಕೇವಲ 8 ದಿನದಲ್ಲಿ ಚಿತ್ರೀಕರಣವಾದ 'ಮೃತ್ಯುಂಜಯ' ಸಿನಿಮಾ

ಯುವ ನಿರ್ದೇಶಕ ಎಸ್.ಎಸ್ ಸಜ್ಜನ್ ಅವರ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜೊತೆಗೆ ನಿರ್ದೇಶನ ಮಾಡಿರುವ ಮೃತ್ಯುಂಜಯ ಎಂಬ ಸಿನಿಮಾ ಆತ್ಮಹತ್ಯೆ ಮಾಡಿಕೊಳ್ಳುವವರ ಕಥೆಯನ್ನು ಒಳಗೊಂಡಿದೆ.

mruthyunjaya
ಮೃತ್ಯುಂಜಯ ಸಿನಿಮಾ
author img

By

Published : Apr 6, 2021, 6:32 AM IST

Updated : Apr 6, 2021, 2:27 PM IST

ಸಿನಿಮಾ‌ ಎಂಬ ಮಾಯಾಲೋಕಕ್ಕೆ ಸ್ಟಾರ್ ನಟರು ಹಾಗು ಸಕ್ಸಸ್‌ಫುಲ್ ನಿರ್ದೇಶಕರ ಮಧ್ಯೆ, ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಹೊಸ ಪ್ರತಿಭೆಗಳು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. 1991ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಮೃತ್ಯುಂಜಯ ಎಂಬ ಸಿನಿಮಾ ಬಂದು, ಸೂಪರ್ ಹಿಟ್ ಆಗಿತ್ತು. ಈಗ ಇದೇ ಟೈಟಲ್ ಇಟ್ಟುಕೊಂಡು, ಹೊಸ ಕಾನ್ಸೆಪ್ಟ್​ನೊಂದಿಗೆ ಹೊಸಬರ ಚಿತ್ರತಂಡ ಚಂದನವನ ಪ್ರವೇಶಿಸಿದೆ.

ಯುವ ನಿರ್ದೇಶಕ ಎಸ್.ಎಸ್ ಸಜ್ಜನ್ ಅವರ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜೊತೆಗೆ ನಿರ್ದೇಶನ ಮಾಡಿರುವ, ಈ ಚಿತ್ರದಲ್ಲಿ ಯುವ ನಟ ಹಿತೇಶ್ ಹಾಗೂ ಯುವ ನಟಿ ಶ್ರೇಯ ಶೆಟ್ಟಿ ಅಭಿನಯಿಸಿದ್ದಾರೆ. ಈ ಮೃತ್ಯುಂಜಯ ಚಿತ್ರದಲ್ಲಿ ಹೂಮಳೆ ಖ್ಯಾತಿಯ ಸುಮನ್‌ ನಗರ್​ಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಟೀಸರನ್ನು ನಟ ಯಶಸ್ ಅನಾವರಣ ಮಾಡಿ ಈ ಹೊಸಬರ ತಂಡಕ್ಕೆ ಶುಭ ಹಾರೈಯಿಸಿದರು.

ಮೃತ್ಯುಂಜಯ ಸಿನಿಮಾ

ಸಸ್ಪೆನ್ಸ್ ಕಮ್ ಥ್ರಿಲ್ಲರ್ ಅಂಶ ಹೊಂದಿರುವ ಮೃತ್ಯುಂಜಯ ಸಿನಿಮಾ ಆತ್ಮಹತ್ಯೆ ಮಾಡಿಕೊಳ್ಳುವವರ ಕಥೆಯನ್ನ ಒಳಗೊಂಡಿದೆ. ಸುಮನ್‌ ನಗರ್​ಕರ್ ಸೈಕ್ಯಾಟ್ರಿಸ್ಟ್ ಪಾತ್ರ ಮಾಡಿದ್ದು, ಹಿತೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯ ಶೆಟ್ಟಿ ಸುಮನ್‌ ನಗರ್​ಕರ್ ಅಸಿಸ್ಟೆಂಟ್ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಹುಚ್ಚ ವೆಂಕಟ್ ಅವ​ರನ್ನು ಹೋಲುವ ದುರ್ಗಾ ಪ್ರಸಾದ್ ಎಂಬ ಯುವ ಕಲಾವಿದ ಹುಚ್ಚ ವೆಂಕಟ್ ಅವರಂತೆ ಅಭಿನಯಿಸಿದ್ದಾ‌ರೆ. ಇದರ ಜೊತೆಗೆ ಆಟೋ ರಾಜ, ಚೇತನ್ ದುರ್ಗಾ, ಮಜಾಭಾರತ ಶಿವು, ಚೈತ್ರಾ, ಪವಿತ್ರಾ, ಜಲಜ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಗೋಪಾಲಸ್ವಾಮಿ ಬೆಟ್ಟದ ಕಾಡಿನಲ್ಲಿ ಚೆಕ್ ಡ್ಯಾಂ ಉದ್ಘಾಟಿಸಿದ ನಟ ದರ್ಶನ್

ಪತ್ರಕರ್ತರಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ಎಸ್.ಎಸ್ ಸಜ್ಜನ್, ಈ ಹಿಂದೆ ಮಂತ್ರಂ‌ ಎಂಬ ಸಾಮಾಜಿಕ ಕಳಕಳಿ ಚಿತ್ರವನ್ನ ಮಾಡಿದ್ದರು. ಸಜ್ಜನ್‌ ಈ ಬಾರಿ ಆತ್ಮಹತ್ಯೆಯ ಬಗ್ಗೆ ಮೃತ್ಯುಂಜಯ ಸಿನಿಮಾದಲ್ಲಿ ಹೇಳೋದಿಕ್ಕೆ ಹೊರಟ್ಟಿದ್ದಾರೆ. ಕೇವಲ ಎಂಟು ದಿನಗಳಲ್ಲಿ ಚಿತ್ರೀಕರಣವಾಗಿರುವ ಮೃತ್ಯುಂಜಯ ಸಿನಿಮಾ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ.

ಬೆಂಗಳೂರು, ಡಾಬಸ್​ಪೇಟೆ ಹಾಗು ಶಿವಗಂಗೆಯ ಸುಂದರ ತಾಣಗಳಲ್ಲಿ ಛಾಯಾಗ್ರಹಕ ದೇವೇಂದ್ರ ರೆಡ್ಡಿ ಚಿತ್ರೀಕರಿಸಿದ್ದು, ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ.‌ ಸಸ್ಪೆನ್ಸ್ ಜೊತೆಗೆ ಸಾಮಾಜಿಕ‌‌ ಸಂದೇಶವಿರುವ ಮೃತ್ಯುಂಜಯ ಸಿನಿಮಾವನ್ನ, ಎಸ್.ಪಿ ಪಿಕ್ಚರ್ಸ್ ಅಡಿ ಶೈಲಜಾ‌ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್​ನಿಂದ ಗಮನ‌ ಸೆಳೆಯುತ್ತಿರೋ ಮೃತ್ಯುಂಜಯ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

Last Updated : Apr 6, 2021, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.