ETV Bharat / sitara

ತಮಿಳಿನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ 'ಬೆಲ್ ​​​ಬಾಟಂ'ನ ಮೋಡಿ ನಂಜಪ್ಪ - undefined

'ಬೆಲ್​​​ ಬಾಟಂ' ಸಿನಿಮಾ ತಮಿಳಿಗೆ ರೀಮೇಕ್ ಆಗುತ್ತಿದ್ದು, ಸಿನಿಮಾದಲ್ಲಿ ಮೋಡಿ ನಂಜಪ್ಪ ಪಾತ್ರ ಮಾಡಿದ್ದ ಶಿವಮಣಿ ಅವರೇ ತಮಿಳಿನಲ್ಲಿ ಅದೇ ಪಾತ್ರ ಮಾಡುತ್ತಿದ್ದಾರೆ. ತಮಿಳಿನಲ್ಲಿ ಸತ್ಯಶಿವ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ಶಿವಮಣಿ
author img

By

Published : Apr 11, 2019, 8:38 PM IST

Updated : Apr 11, 2019, 9:48 PM IST

ಜಯತೀರ್ಥ ನಿರ್ದೇಶನದ 'ಬೆಲ್ ​​​ಬಾಟಂ' ಸಿನಿಮಾ 50 ದಿನಗಳನ್ನು ಪೂರೈಸಿ 100ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನು ಈ ಸಿನಿಮಾ ತೆಲುಗು, ತಮಿಳಿಗೂ ರೀಮೇಕ್ ಆಗುತ್ತಿದೆ.

ತಮಿಳಿಗೆ ರೀಮೇಕ್ ಆಗುತ್ತಿದೆ ಕನ್ನಡದ 'ಬೆಲ್ ​​​ಬಾಟಂ'

ತಮಿಳಿನಲ್ಲಿ ಈಗಾಗಲೇ ಶೂಟಿಂಗ್ ಆರಂಭವಾಗಿದ್ದು ಸತ್ಯಶಿವ ನಿರ್ದೇಶಿಸುತ್ತಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿ ನಿರ್ದೇಶಕ ಶಿವಮಣಿ ಅಭಿನಯಿಸಿದ್ದ ಮೋಡಿ ನಂಜಪ್ಪ ಪಾತ್ರವನ್ನು ತಮಿಳಿನಲ್ಲಿ ಕೂಡಾ ಅವರೇ ನಿಭಾಯಿಸುತ್ತಿದ್ದಾರೆ. ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶಿವಮಣಿ, 'ಬೆಲ್​​​ ಬಾಟಂ' ಸಿನಿಮಾ ನಂತರ ನನಗೆ ಒಳ್ಳೆಯ ಅವಕಾಶಗಳು ಹುಡುಕಿ ಬರುತ್ತಿವೆ. ಸುಮಾರು 27 ವರ್ಷಗಳವರೆಗೆ ನಿರ್ದೇಶನದಲ್ಲಿದ್ದ ನಾನು ಈಗ ನಟನಾಗಿದ್ದೇನೆ. ಈ ತಿಂಗಳ 28 ರಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಶಿವಮಣಿ ಹೇಳಿದ್ದಾರೆ.

ಇನ್ನು ತಮಿಳಿನಲ್ಲೂ ಈ ಚಿತ್ರಕ್ಕೆ 'ಬೆಲ್​​​ ಬಾಟಂ' ಟೈಟಲ್ ಫಿಕ್ಸ್ ಆಗಿದ್ದು, ರಿಷಭ್​​​ ಶೆಟ್ಟಿ ಪಾತ್ರವನ್ನು ತಮಿಳಿನಲ್ಲಿ 'ಕಳಗು' ಸಿನಿಮಾ ನಾಯಕ ಕೃಷ್ಣ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಮೋಡಿ ನಂಜಪ್ಪ ತಮಿಳಿನಲ್ಲೂ ಮೋಡಿ ಮಾಡಲು ಹೊರಟಿದ್ದು, ತಮಿಳಿಗರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Intro:ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಚಿತ್ರಗಳ ನೀಡಿದ್ದ ನಟ ನಿರ್ದೇಶಕ ಶಿವಮಣಿ ಜೋಶ್ ಚಿತ್ರದನಂತ್ರ ನಟನೆ ಮತ್ತು ನಿರ್ದೇಶನ ಯಾವುದರಲ್ಲೂ ಕಾಣಿಸಿಕೊಂಡಿರಲಿಲ್ಲ.ಅದ್ರೆ ಸದ್ದಿಲ್ಲದೆ ನಿರ್ದೇಶಕ ಶಿವಮಣಿ ಬೆಲ್ ಬಾಟಮ್ ಚಿತ್ರದಲ್ಲಿ ಮೋಡಿ ನಂಜಪ್ಪನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಅದ್ರು.ಅಲ್ಲದೆ ಮೋಡಿ ನಂಜಪ್ಪನ ಪಾತ್ರದಲ್ಲಿ ಮೋಡಿ ಮಾಡಿದ್ದ ಶಿವಮಣಿಅವರಿಗೆ ಸಾಲು ಸಾಲು ಚಿತ್ರಗಳು ಹುಡುಕಿ ಬಂದವು.

Body:ಅಲ್ಲದೆ ಬೆಲ್ ಬಾಟಮ್ ಚಿತ್ರ ತಮಿಳಿಗೆ ರಿಮೇಕ್ ಆಗ್ತಿದ್ದು ಕನ್ನಡದ ಬೆಲ್ ಬಾಟಮ್ ಚಿತ್ರದಲ್ಲಿ ಮಾಡಿದ್ದ ಮೋಡಿ ನಂಜಪ್ಪನ ಪಾತ್ರವನ್ನು ತಮಿಳು ವರ್ಸನ್ ಗೂ ನಿರ್ದೇಶಕ ಶಿವಮಣಿ ಅವರ ಆಯ್ಕೆಯಾಗಿದ್ದು. ನಿರ್ದೇಶಕ ಶಿವಮಣಿ ನಟನಾಗಿ ಸ್ಯಾಂಡಲ್ ವುಡ್ ನಿಂದ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

Conclusion:ಇನ್ನೂ ತಮಿಳಿನಲ್ಲೂ ಈ ಚಿತ್ರಕ್ಕೆ " ಬೆಲ್ ಬಾಟಮ್ " ಟೈಟಲ್ ಫಿಕ್ಸ್ ಆಗಿದ್ದು ಈ ಚಿತ್ರವನ್ನು ಸತ್ಯ ಶಿವ ನಿರ್ದೇಶನ ಮಾಡ್ತಿದ್ದಾರೆ.ಇನ್ನೂ ರಿಷಬ್ ಶೆಟ್ಟಿ ಪ್ಲೇ ಮಾಡಿದ್ದ ಡಿಟೆಕ್ಟಿವ್ ದಿವಾಕನ ಪಾತ್ರವನ್ನು ಕಾಲಿವಿಡ್ ನ" ಕಳಗು" ಚಿತ್ರದಲ್ಲಿ ನಾಯಕನಾಗಿ ನಟಿಸಿದ ಕೃಷ್ಣ ಪ್ಲೇ ಮಾಡ್ತಿದ್ದಾರೆ.ಇನ್ನೂ ಚಿತ್ರದಲ್ಲಿ ಗಮನ. ಸೆಳೆದಿದ್ದ ಮೋಡಿ ನಂಜಪ್ಪನ ಪಾತ್ರಕ್ಕೆ ಶಿವಮಣಿ ಆಯ್ಕೆ ಆಗಿದ್ದು ಇದೇ ತಿಂಗಳ ೨೮ ರಿಂದ ಶೂಟಿಂಗ್ ಆರಂಭವಾಗಲಿದ್ದೆ.ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳ ನಿರ್ದೇಶನ ಮಾಡಿದ್ದ ಶಿವಮಣಿ ಈಗ ಕಾಲಿವುಡ್ ನಟನಾಗಿ ಎಂಟ್ರಿಕೊಡ್ತಿದ್ದು ಅಲ್ಲೂ ಮೋಡಿ ಮಾಡ್ತಾರ ಎಂದು ಕಾದು ನೋಡಬೇಕಿದೆ.

ಸತೀಶ ಎಂಬಿ.
Last Updated : Apr 11, 2019, 9:48 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.