ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ಹಿಂದಿಯಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾಕ್ಕೆ 'ಶಬಾಶ್ ಮಿಥು' ಎಂದು ಟೈಟಲ್ ಇಡಲಾಗಿದ್ದು, ಲೀಡ್ ರೋಲ್ನಲ್ಲಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ. ಈ ಚಿತ್ರ ತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಸಿನಿಮಾದ ಫಸ್ಟ್ಲುಕ್ ಅನ್ನು ರಿಲೀಸ್ ಆಗಿದೆ.
-
“I have always been asked who’s your favourite male cricketer but you should ask them who their favourite female cricketer is.” The statement that made every cricket lover pause n introspect that do they love the game or the gender playing it.@M_Raj03 you are a ‘Game Changer’ pic.twitter.com/2VlxYpXmSM
— taapsee pannu (@taapsee) January 29, 2020 " class="align-text-top noRightClick twitterSection" data="
">“I have always been asked who’s your favourite male cricketer but you should ask them who their favourite female cricketer is.” The statement that made every cricket lover pause n introspect that do they love the game or the gender playing it.@M_Raj03 you are a ‘Game Changer’ pic.twitter.com/2VlxYpXmSM
— taapsee pannu (@taapsee) January 29, 2020“I have always been asked who’s your favourite male cricketer but you should ask them who their favourite female cricketer is.” The statement that made every cricket lover pause n introspect that do they love the game or the gender playing it.@M_Raj03 you are a ‘Game Changer’ pic.twitter.com/2VlxYpXmSM
— taapsee pannu (@taapsee) January 29, 2020
ಈ ಸಿನಿಮಾವನ್ನು ಮುಂದಿನ ವರ್ಷ ಅಂದ್ರೆ 2021ರ ಫೆಬ್ರುವರಿ 5ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ತಾಪ್ಸಿ, ಎಲ್ಲರೂ ನನಗೆ ಕ್ರಿಕೆಟ್ನಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂದು ಕೇಳುತ್ತಾರೆ. ಆದ್ರೆ ಕ್ರಿಕೆಟ್ನಲ್ಲಿ ನಿಮ್ಮ ನೆಚ್ಚಿನ ಆಟಗಾರ್ತಿ ಯಾರೆಂದು ಬಹಳ ಜನ ಕೇಳುವುದಿಲ್ಲ. ಆದ್ರೆ ಇಲ್ಲಿ ಆಟ ಮುಖ್ಯವಾಗುತ್ತದೆಯೋ ಅಥವಾ ಆಟಗಾರರು ಯಾವ ಲಿಂಗ ಎಂಬುದು ಮುಖ್ಯವಾಗುತ್ತದೆಯೋ ಎಂದು ಕೇಳಿದ್ದಾರೆ. ಇದರ ಜೊತೆಗೆ ಸಿನಿಮಾದ ರಿಲೀಸ್ ಡೇಟ್ನನ್ನು ತಾಪ್ಸಿ ರಿವೀಲ್ ಮಾಡಿದ್ದಾರೆ.
ರಾಹುಲ್ ಧೋಲಾಕಿಯ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಪ್ರಿಯಾ ಅವೆನ್ ಕಥೆ ಬರೆದಿದ್ದಾರೆ. ಮಿಥಾಲಿ ರಾಜ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನ ಮಾಜಿ ಕ್ಯಾಪ್ಟನ್ ಆಗಿದ್ರು. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮಿಥಾಲಿ ಅತಿ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ ಬರೋಬ್ಬರಿ 6000 ರನ್ಗಳನ್ನು ಪೇರಿಸಿದ್ದಾರೆ.