ಅದೆಲ್ಲಾ ಸರಿ ಈ ರೈಲ್ವೆ ನಿಲ್ದಾಣದ ಸೆಟ್ಟು, ರವಿಚಂದ್ರನ್ ಅವರ ಕ್ರಿಯೇಟಿವಿಟಿ ಬಗ್ಗೆ ಈಗೇಕೆ ಮಾತು ಅಂತೀರಾ ? ಅದಕ್ಕೊಂದು ಕಾರಣವಿದೆ. ಇದೀಗ ಕನ್ನಡ ಚಿತ್ರವೊಂದಕ್ಕೆ ಬೃಹದಾಕಾರದ ಮೆಟ್ರೊ ಸ್ಟೇಷನ್ ಸೆಟ್ ಹಾಕಲಾಗಿದೆ.
ಹೌದು, ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ರೀ-ಸ್ಟಾರ್ಟ್ ಆಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ಸೀನ್ಗಾಗಿ ಬೆಂಗಳೂರಿನ ಮಿನರ್ವ ಮಿಲ್ನಲ್ಲಿ ಒಂದು ಮೆಟ್ರೊ ರೈಲು ನಿಲ್ದಾಣದ ಸೆಟ್ ನಿರ್ಮಿಸಲಾಗಿದೆ. ಮೆಟ್ರೊ ರೈಲು ಸೆಟ್ ಹಾಕಿರುವುದು ಭಾರತೀಯ ಚಿತ್ರ ರಂಗದಲ್ಲಿ ಇದೇ ಮೊದಲು. ಒರಿಜಿನಲ್ ಮೆಟ್ರೊ ರೈಲು ನಿಲ್ದಾಣದಲ್ಲಿ ಚಿತ್ರೀಕರಣಕಕ್ಕೆ ಅನುಮತಿ ಸಿಕ್ಕದಿರುವು ಚಿತ್ರತಂಡದ ಈ ಸಾಹಕ್ಕೆ ಮುಖ್ಯ ಕಾರಣ. ಇದರ ನಿರ್ಮಾಣ ರಚನಾಕಾರ ಲಾಲ್ ಗುಡಿ ಇಳಯರಾಜ. ಈ ಸೆಟ್ ನೋಡಿ ಸುದೀಪ್ ಸಹ ಬೆರಗಾಗಿದ್ದಾರಂತೆ.
ಇನ್ನು 'ಕೋಟಿಗೊಬ್ಬ 3' ನಿರ್ದೇಶಕ ತಮಿಳಿನ ಶಿವ ಕಾರ್ತಿಕ್. ಚಿತ್ರದಲ್ಲಿ ಸುದೀಪ್ ಜೊತೆ ಮಡೋನ್ನ ಸೆಬಾಸ್ಟೀನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಶನಿ, ನವಾಬ್ ಷಾ, ರವಿಶಂಕರ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.