ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಯುವ ಸಾಮ್ರಾಟ್ ಅಂತಾನೆ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದರು. ಇದು ಸರ್ಜಾ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿತ್ತು.
ಈ ಸಂದರ್ಭದಲ್ಲಿ ಮೇಘನಾ ಗರ್ಭಿಣಿ ಆಗಿದ್ದರು. ಪತಿ ಸಾವಿನ ದುಃಖದಲ್ಲಿಯೇ ದಿನದೂಡಿದ ಮೇಘನಾ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗು ಜನಿಸಿದ್ದರಿಂದ ಆತನನ್ನು ಜೂನಿಯರ್ ಚಿರು ಎಂದೇ ಕರೆಯಲಾಗಿತ್ತು. ಮಗನ ನಗುವಿನಲ್ಲಿ ಪತಿಯ ಸಾವಿನ ನೋವನ್ನು ಮರೆಯುವುದಾಗಿ ಮೇಘನಾ ಹೇಳಿಕೊಂಡಿದ್ದರು. ಈಗ ಮೇಘನಾ ಮಗುವಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದು, ಸಿಂಬಾಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.
ಇತ್ತೀಚೆಗೆ ಮಗುವಿಗೆ ಕೊರೊನಾ ಅಂಟುವ ಭಯ ಕಾಡಿದ ಬಗ್ಗೆ ಮೇಘನಾ ಹೇಳಿಕೊಂಡಿದ್ದರು. ನನ್ನ ಗೆಳೆಯರ ಜತೆ ನಾನು ಸಂಪರ್ಕದಲ್ಲಿದ್ದೆ. ಆದರೆ, ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ, ನಾನು ಸೆಲ್ಫ್ ಕ್ವಾರಂಟೈನ್ ಆದೆ. ನನ್ನ ಮಗು ಹಾಗೂ ಪಾಲಕರ ಆರೋಗ್ಯದ ಬಗ್ಗೆ ನೆನೆದು ತುಂಬಾನೇ ಭಯಗೊಂಡಿದ್ದೆ. ನನ್ನಲ್ಲಿ ಯಾವುದೇ ಕೊರೊನಾ ಲಕ್ಷಣ ಕಾಣಿಸಿಲ್ಲ ಎಂದರು.
ಆದಾಗ್ಯೂ, ನಾನು ಕೊರೊನಾ ಪರೀಕ್ಷೆಗೆ ಒಳಪಟ್ಟೆ. ಈ ವೇಳೆ ನೆಗೆಟಿವ್ ಬಂದಿದೆ ಎಂದು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಸಿನಿಮಾ, ರಾಜಕೀಯ ಮುಗಿದ ಅಧ್ಯಾಯ ಎಂದ 'ಮೋಹಕ ತಾರೆ'