ETV Bharat / sitara

ಪ್ರೇಮಿಗಳ ದಿನದಂದು 'ಜೂನಿಯರ್​ ಚಿರು' ದರ್ಶನ - ಚಿರಂಜೀವಿ ಸರ್ಜಾ ಮಗ

ಫೆ.14ರಂದು ಮೇಘನಾ ರಾಜ್​ ತಮ್ಮ ಮುದ್ದು ಮಗನನ್ನು ಎಲ್ಲರಿಗೂ ತೋರಿಸಲು ಕಾತುರರಾಗಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದಾರೆ.

ಪ್ರೇಮಿಗಳ ದಿನದಂದು 'ಜೂ.ಚಿರು' ದರ್ಶನಪ್ರೇಮಿಗಳ ದಿನದಂದು 'ಜೂ.ಚಿರು' ದರ್ಶನ
ಪ್ರೇಮಿಗಳ ದಿನದಂದು 'ಜೂ.ಚಿರು' ದರ್ಶನ
author img

By

Published : Feb 12, 2021, 7:21 PM IST

ಇನ್ನೆರಡು ದಿನ ಕಳೆದ್ರೆ ಫೆ.14, ಅಂದ್ರೆ ಪ್ರೇಮಿಗಳ ದಿನ. ಈ ದಿನದಂದು ಸರ್ಜಾ ಫ್ಯಾಮಿಲಿಯಿಂದ ಡಬಲ್​​ ಉಡುಗೊರೆ ಸಿಗುತ್ತಿದೆ. ಅದೇನಂದ್ರೆ ಪೊಗರು ಸಿನಿಮಾದ ಆಡಿಯೋ ಲಾಂಚ್​ ಕೂಡ ಇದೇ ದಿನ ಆಗುತ್ತಿದೆ. ಇನ್ನೊಂದು ಕಡೆ ಚಿರು-ಮೇಘನಾ ಪುತ್ರ ಜೂನಿಯರ್​​ ಚಿರುವಿನ ದರ್ಶನ ಕೂಡ ಅವತ್ತೇ ಆಗುತ್ತಿದೆ.

ಹೌದು ಈ ಬಗ್ಗೆ ನಟಿ ಮೇಘನಾ ರಾಜ್​ ವಿಡಿಯೋ ಒಂದನ್ನು ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಅದ್ರಲ್ಲಿ ಬರೆದಿರುವ ನಟಿ, ನೀವು ಅವನ್ನು ಕೇಳಿಸಿಕೊಳ್ಳುತ್ತಿದ್ದೀರಾ? ನೀವು ಕೇಳುತ್ತಿರುವುದು ಜೂ.ಚಿರುವೇ.. ಫೆ.14ರಂದು ನಿಮಗೆ ಅವನನ್ನು ತೋರಿಸಲು ನಾನು ಕಾತುರಳಾಗಿದ್ದೇನೆ ಎಂದಿದ್ದಾರೆ.

ಇನ್ನು ಚಿರು ಮತ್ತು ಮೇಘನಾ ಇಬ್ಬರ ಪ್ರೀತಿಯ ಮಗ ಜೂನಿಯರ್ ಚಿರು. ಮೇಘನಾ ಪುತ್ರನಿಗೆ ಹೆಸರೇನು ಇಡ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಅಲ್ಲದೇ ಈಗಾಗಲೇ ಅಭಿಮಾನಿಗಳು ಮೇಘನಾ ರಾಜ್​ರನ್ನ ಕೇಳುತ್ತಿದ್ದಾರೆ. ಈ ಬಗ್ಗೆ ಮಾಹಿತಿಯನ್ನ ಫೆ. 14ರಂದು ಮೇಘನಾ ನೀಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.