ಬೆಂಗಳೂರು : ಕನ್ನಡ ಚಿತ್ರ ರಂಗದ ಪ್ರತಿಭಾನ್ವಿತ ನಟಿ ಮೇಘನ ಗಾಂವಕರ್ ಇದೀಗ ಲಾಕ್ಡೌನ್ನಿಂದಾಗಿ ಸಿಕ್ಕಿರುವ ಸಮಯದಲ್ಲಿ ತಮ್ಮ ಪಿಹೆಚ್ಡಿ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಎರಡು ವರ್ಷಗಳಿಂದ ಗಮನ ಹರಿಸಲು ಸಾಧ್ಯವಾಗದೇ ಇದ್ದ ಅವರ ಪಿಎಚ್ಡಿ ವ್ಯಾಸಂಗಕ್ಕೆ ಇದೀಗ ಹೆಚ್ಚು ಆಸಕ್ತಿ ತೋರಿದ್ದಾರೆ. ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಎಂಬ ವಿಷಯದ ಕುರಿತು ಮೇಘನ ಗಾಂವಕರ್ ಅವರು ಪಿಎಚ್ಡಿ ಮಾಡುತ್ತಿದ್ದು ಇದೀಗ ಮನೆಯಲ್ಲಿ ಕುಳಿತು ಲ್ಯಾಪ್ಟಾಪ್ ಸಹಾಯದಿಂದ ಅಧ್ಯಯನ ಆರಂಭಿಸಿದ್ದಾರೆ. ಜೊತೆಗೆ ಈ ನಟಿ ಓದುವುದರ ಜೊತೆಗೆ ಪುಟ್ಟ ಕತೆಗಳನ್ನು ಬರೆಯುವುದನ್ನು ಮುಂದುವರೆಸಿದ್ದಾರೆ.
ಕನ್ನಡದಲ್ಲಿ ಈಕೆ, ನಮ್ ಏರಿಯಾದಲ್ ಒಂದ್ ದಿನ, ವಿನಾಯಕ ಗೆಳೆಯರ ಬಳಗ, ಚಾರ್ಮಿನಾರ್, ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ, ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಮುಂದೊಂದು ದಿನ ನಿರ್ದೇಶಕಿಯಾಗಬೇಕು ಎನ್ನುವ ಹಂಬಲ ಹೊಂದಿದ್ದಾರೆ ಈ ನಟಿ.