ETV Bharat / sitara

Jr NTR ಅಭಿಮಾನಿಗಳಿಂದ ನಟಿಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆ : ದೂರು ದಾಖಲು - ಮೀರಾ ಚೋಪ್ರಾ

ಮೀರಾ ಚೋಪ್ರಾಗೆ ಜೂನಿಯರ್​ ಎನ್​ಟಿಆರ್​​ ಅಭಿಮಾನಿಗಳಿಂದ ಸಾಮೂಹಿಕ ಅತ್ಯಾಚಾರದ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ತಮಗೆ ಕಿರುಕುಳ ನೀಡಿದವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿದ್ದಾರೆ.

complaint
Jr NTR ಅಭಿಮಾನಿಗಳಿಂದ ನಟಿಗೆ ಸಾಮೂಹಿಕ ಅತ್ಯಾಚಾರದ ಬೆದರಿಕೆ
author img

By

Published : Jun 3, 2020, 5:15 PM IST

Updated : Jun 3, 2020, 5:36 PM IST

ಬಹುಭಾಷ ನಟಿ ಮೀರಾ ಚೋಪ್ರಾಗೆ ಜೂನಿಯರ್​ ಎನ್​ಟಿಆರ್​​ ಅಭಿಮಾನಿಗಳಿಂದ ಸಾಮೂಹಿಕ ಅತ್ಯಾಚಾರದ ಬೆದರಿಗೆ ಬಂದಿದೆ. ಇತ್ತೀಚೆಗೆ ಟ್ವಿಟರ್​​​ ಸಾಮಾಜಿಕ ಜಾಲತಾಣದಲ್ಲಿ ನಡೆದ ಸಂವಾದದಲ್ಲಿ ಜೂನಿಯರ್​​ ಎನ್​ಟಿಆರ್​​ ಬಗ್ಗೆ ಮೀರಾ ಚೋಪ್ರಾ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ನಟಿ ತಮಗೆ ಕಿರುಕುಳ ನೀಡಿದವರ ವಿರುದ್ಧ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ.

#askmeera (ಆಸ್ಕ್ ಮೀರಾ) ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ನಟಿಯು ಟ್ವಿಟರ್ ಸಂವಾದದಲ್ಲಿ ತೊಡಗಿದ್ದರು. ಈ ವೇಳೆ ಕೆಲವರು ನಿಮಗೆ ತೆಲುಗು ಸಿನಿಮಾ ರಂಗದಲ್ಲಿ ನೆಚ್ಚಿನ ನಟ ಯಾರು? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮೀರಾ, ನನಗೆ ಮಹೇಶ್​ ಬಾಬು ಅಂದ್ರೆ ಇಷ್ಟ ಅಂತ ಹೇಳಿದ್ದಾರೆ.

ಇದೇ ವೇಳೆ, ಒಂದಷ್ಟು ಜನ, ಜ್ಯೂ.ಎನ್ ಟಿಆರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಮೀರಾ ಚೋಪ್ರಾ, ಅವರು ಯಾರು ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದಿದ್ದಾರೆ.

  • Well i didnt know not being somebodys fan was a crime.. i want to say this loud to all the girls that if you are not a fan of @tarak9999 , u could be raped, murdered, gangraped, ur parents could be killed as tweeted by his fans. They r totally spoiling the name of their idol.

    — meera chopra (@MeerraChopra) June 2, 2020 " class="align-text-top noRightClick twitterSection" data=" ">

ಇದೇ ಸಂದರ್ಭದಲ್ಲಿ ಕೆಲವು ಜೂನಿಯರ್​​ ಎನ್​ಟಿಆರ್​ ಅಭಿಮಾನಿಗಳು ಶಕ್ತಿ, ದಮ್ಮು ಸಿನಿಮಾಗಳನ್ನು ವೀಕ್ಷಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕೂ ಪ್ರತಿಕ್ರಿಯಿಸಿದ್ದ ಮೀರಾ ಚೋಪ್ರಾ ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ. ಇದರಿಂದ ಕೆರಳಿದ ಎನ್ ಟಿಆರ್ ಅಭಿಮಾನಿಗಳು, ಮೀರಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.

  • A big thanks to @NCWIndia and @sharmarekha for helping me filing an FIR. Safety of women is always compromised but we get our support and strength from people like u. 🙏🙏

    — meera chopra (@MeerraChopra) June 3, 2020 " class="align-text-top noRightClick twitterSection" data=" ">

ಈ ಘಟನೆಯಿಂದ ಬೇಸರಗೊಂಡ ಮೀರಾ ಟ್ವಿಟರ್​​​ನಲ್ಲಿ ಎನ್ ಟಿಆರ್ ಖಾತೆಗೆ ಟ್ಯಾಗ್ ಮಾಡಿ, "ಈ ರೀತಿಯ ಅಭಿಮಾನಿಗಳಿಂದ ನೀವು ಈ ಮಟ್ಟಕ್ಕೆ ಬೆಳೆದಿದ್ದೀನಿ ಎಂದು ನಿಮಗೆ ಅನಿಸುತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಿಮ್ಮ ಅಭಿಮಾನಿಗಳಿಗೆ ಇಂತಹ ಗೂಂಡಾಗಿರಿಯಿಂದ ದೂರವಿರಬೇಕು ಎಂದು ತಿಳಿಸುವಂತೆ ಒತ್ತಾಯಿಸಿದ್ದಾರೆ.

ಈ ಘಟನೆಯನ್ನು ವಿರೋಧಿಸಿ ಟ್ವಿಟ್ಟರ್​​ನಲ್ಲಿ ಮೀರಾ ಪರ ಅಭಿಯಾನ ಶುರುವಾಗಿದೆ. ಬೆದರಿಕೆ, ಕಿರುಕುಳ ಘಟನೆಯನ್ನು ವಿರೋಧಿಸಿ ಟ್ವಿಟರ್ ನಲ್ಲಿ #WeSupportMeeraChopra ಪ್ರಾರಂಭವಾಗಿದೆ.

Last Updated : Jun 3, 2020, 5:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.