ಏಪ್ರಿಲ್ ತಿಂಗಳಾಂತ್ಯದಲ್ಲಿ ವಿಶ್ವಾದ್ಯಂತ ತೆರೆಗೆ ಬಂದಿದ್ದ ಮಾರ್ವೆಲ್ ಸಿನಿಮಾಸ್ ಬಹುನಿರೀಕ್ಷಿತ ಚಿತ್ರ 'ಅವೇಂಜರ್ಸ್: ಎಂಡ್ಗೇಮ್' ಇದೀಗ ಅತಿದೊಡ್ಡ ಮೈಲಿಗಲ್ಲು ಸ್ಥಾಪಿಸಿದೆ.
ಇಂಗ್ಲಿಷ್ ಸಿನಿಮಾ ಪ್ರಿಯರ ಅತಿಯಾದ ನಿರೀಕ್ಷೆಯ ಮಧ್ಯೆ ಹಲವಾರು ಸೂಪರ್ ಹೀರೋಗಳ ಒಗ್ಗೂಡುವಿಕೆಯಲ್ಲಿ ಎಂಡ್ಗೇಮ್ ತೆರೆಗೆ ಅಪ್ಪಳಿಸಿತ್ತು. ಮೊದಲ ದಿನ ಹಾಗೂ ವಾರಾಂತ್ಯಕ್ಕೆ ಕಲೆಕ್ಷನ್ ವಿಚಾರದಲ್ಲಿ ಎಲ್ಲ ಸಿನಿಮಾಗಳನ್ನು ಹಿಂದಿಕ್ಕಿ ತನ್ನ ತಾಕತ್ತು ಪ್ರದರ್ಶಿಸಿತ್ತು.
ಮಾರ್ವೆಲ್ ಸಿನಿಪ್ರಿಯರಿಂದ ಅದ್ಭುತ ರೆಸ್ಪಾನ್ಸ್ ಪಡೆದರೂ ಈ ಚಿತ್ರ ಅವತಾರ್ ಸಿನಿಮಾದ ಸಾರ್ವಕಾಲಿಕ ಗಳಿಕೆಯನ್ನು ಹಿಂದಿಕ್ಕಲಾಗಿರಲಿಲ್ಲ. ಇದೇ ಕಾರಣಕ್ಕೆ ಎಂಡ್ಗೇಮ್ ಜೂನ್ 28ರಂದು ಮತ್ತೆ ತೆರೆಗೆ ಬಂದಿತ್ತು. ಇದೀಗ ಎಂಡ್ಗೇಮ್ ಚಿತ್ರ ಅವತಾರ್ ಒಟ್ಟಾರೆ ಕಲೆಕ್ಷನ್ ಹಿಂದಿಕ್ಕಿ ನೂತನ ದಾಖಲೆ ಬರೆದಿದೆ.
2009ರಲ್ಲಿ ರಿಲೀಸ್ ಆಗಿದ್ದ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ ಸಿನಿಮಾ 19,170 ಕೋಟಿ ಗಳಿಕೆ ಮಾಡಿತ್ತು. ಹತ್ತು ವರ್ಷದ ಅವಧಿಯಲ್ಲಿ ಬೇರೆ ಯಾವುದೇ ಸಿನಿಮಾಗಳು ಈ ಗಳಿಕೆಯ ಸಮೀಪವೂ ಸುಳಿದಿರಲಿಲ್ಲ. ಇದೀಗ 'ಅವೇಂಜರ್ಸ್:ಎಂಡ್ಗೇಮ್' 19,210 ಕೋಟಿ ರೂ ಕಲೆಕ್ಷನ್ ಮಾಡುವ ಮೂಲಕ 'ಅವತಾರ್' ಚಿತ್ರದ ಹತ್ತು ವರ್ಷದ ಸಾರ್ವಭೌಮತ್ವವನ್ನು ಕೊನೆಗಾಣಿಸಿದೆ.
-
#BREAKING : #AvengersEndgame has surpassed #Avatar to become All-time No.1 movie in the world..#AvengersEndgame - $2.789 Billion#Avatar - $2.788 Billion #Avatar was the record holder for the past 10 years..
— Ramesh Bala (@rameshlaus) July 21, 2019 " class="align-text-top noRightClick twitterSection" data="
">#BREAKING : #AvengersEndgame has surpassed #Avatar to become All-time No.1 movie in the world..#AvengersEndgame - $2.789 Billion#Avatar - $2.788 Billion #Avatar was the record holder for the past 10 years..
— Ramesh Bala (@rameshlaus) July 21, 2019#BREAKING : #AvengersEndgame has surpassed #Avatar to become All-time No.1 movie in the world..#AvengersEndgame - $2.789 Billion#Avatar - $2.788 Billion #Avatar was the record holder for the past 10 years..
— Ramesh Bala (@rameshlaus) July 21, 2019
ಅಂದ ಹಾಗೆ 'ಅವತಾರ್' ಚಿತ್ರದ ಎರಡನೇ ಭಾಗ 2020ರಲ್ಲಿ ತೆರೆಗೆ ಬರಲಿದೆ. ಮಾರ್ವೆಲ್ ಸಿನಿಮಾ ಸಹ ತನ್ನ ಮುಂದಿನ ಚಿತ್ರಗಳ ಬಗ್ಗೆ ಇಂದು ಅಧಿಕೃತ ಘೋಷಣೆ ಮಾಡಿದೆ. ಒಟ್ಟಿನಲ್ಲಿ ಎಂಡ್ಗೇಮ್ ದಾಖಲೆಯನ್ನು ಅವತಾರ್-2 ಬ್ರೇಕ್ ಮಾಡುತ್ತಾ ಎನ್ನುವುದು ಮುಂದಿರುವ ಕುತೂಹಲ.