ETV Bharat / sitara

ಮಾರಿಗೋಲ್ಡ್​​ ತಿನ್ನಲು ರೆಡಿಯಾದ್ರು ಗುಳಿ ಕೆನ್ನೆ ಚೆಲುವ ದಿಗಂತ್​​​​​​​​​

ದಿಗಂತ್​ ಅಭಿನಯದ ಮಾರಿಗೋಲ್ಡ್​​ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಮೊದಲ ಹಂತದ ಶೂಟಿಂಗ್ ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗದ ಸುತ್ತಮುತ್ತ ಮಾಡಲಾಗುತ್ತಿದೆಯಂತೆ.

marigold diganth next movie
ಮಾರಿಗೋಲ್ಡ್​​ ತಿನ್ನಲು ರೆಯಾದ್ರು ಡಿಂಪಲ್​ ಬೆಲುವ ದಿಗಂತ್​​
author img

By

Published : Mar 11, 2020, 9:29 AM IST

ಗಾಳಿಪಟ 2ನಲ್ಲಿ ಬ್ಯುಸಿ ಇರುವ ಗುಳಿ ಕೆನ್ನೆ ಚೆಲುವ ದಿಗಂತ್ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರವೇ ಮಾರಿಗೋಲ್ಡ್​​​. ಸಿನಿಮಾ ಕ್ರೈಂ, ಕಾಮಿಡಿ ಹಾಗೂ ಥ್ರಿಲ್ಲರ್ ಕಥೆ ಹೊಂದಿದೆಯಂತೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಬೆಂಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಸುತ್ತಮುತ್ತ ಶೂಂಟಿಂಗ್​ ಮಾಡಲಾಗುತ್ತಿದೆಯಂತೆ.

ಚಿತ್ರಕ್ಕೆ ರಾಘವೇಂದ್ರ ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಅಲ್ಲದೆ ಸಹ ನಿರ್ದೇಶಕರಾಗಿ ರಘುವರ್ಧನ್ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ರಘುವರ್ಧನ್​ ಗುಣವಂತ, ತಿಮ್ಮರಾಯ, ಭದ್ರಿ ಹಾಗೂ ಎಲ್​​ಎಲ್​​​ಬಿ ಸಿನಿಮಾಕ್ಕೆ ಆ್ಯಕ್ಷನ್​ ಕಟ್​​ ಹೇಳಿದ್ದರು.

marigold diganth next movie
ಮಾರಿಗೋಲ್ಡ್​​ ತಿನ್ನಲು ರೆಡಿಯಾದ್ರು ಡಿಂಪಲ್​ ಚೆಲುವ ದಿಗಂತ್​​

ಮಾರಿಗೋಲ್ಡ್​​​ ಚಿತ್ರದಲ್ಲಿ ದಿಂಗತ್​ಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ (ಚಾರ್ಲಿ 777 ಕಥಾ ನಾಯಕಿ) ಬಣ್ಣ ಹಚ್ಚಲಿದ್ದಾರೆ. ಇನ್ನು ತಾರಾಗಣದಲ್ಲಿ ಕೆಜಿಎಫ್ ಖ್ಯಾತಿಯ ಸಂಪತ್ ಕುಮಾರ್, ಕಾಕ್ರೋಚ್ ಸುಧಿ, ಯಶ್​​ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ರಘು ಸಂಭಾಷಣೆ ಬರೆದಿದ್ದು, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್​​ ಸಂಕಲನ, ವೀರ ಸಮರ್ಥ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.