ETV Bharat / sitara

ಕೊರೊನಾ ಸಮಸ್ಯೆ ನಡುವೆಯೂ 25 ದಿನಗಳನ್ನು ಪೂರೈಸಿದ 'ಆಕ್ಟ್ 1978' ಸಿನಿಮಾ..!

ಮಂಸೋರೆ ನಿರ್ದೇಶನದಲ್ಲಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಆಕ್ಟ್​ 1978' ಸಿನಿಮಾ 25ನೇ ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸುಮಾರು 50 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಸಿನಿಪ್ರಿಯರು ಕೂಡಾ ಈ ಸಿನಿಮಾ 25 ದಿನಗಳನ್ನು ಪೂರೈಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

Act 1978  completed 25 days
'ಆಕ್ಟ್ 1978'
author img

By

Published : Dec 16, 2020, 12:58 PM IST

ಕೊರೊನಾ ಲಾಕ್​​ಡೌನ್​ ಸಡಿಲಿಕೆ ನಂತರ ಬಿಡುಗಡೆಯಾಗಿ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ ಚಿತ್ರ 'ಆಕ್ಟ್​ 1978'. ಕನ್ನಡ ಚಿತ್ರರಂಗದಲ್ಲಿ ಯಾವುದೇ ಹೊಸ ಸಿನಿಮಾ ರಿಲೀಸ್ ಆಗದ ಸಮಯದಲ್ಲಿ ತೆರೆಕಂಡ 'ಆಕ್ಟ್ 1978' ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವ ಮೂಲಕ 25 ದಿನಗಳನ್ನು ಪೂರೈಸಿ, 50ನೇ ದಿನದತ್ತ ದಾಪುಗಾಲು ಇಡುತ್ತಿದೆ.

'ಆಕ್ಟ್ 1978' ತಂಡದಿಂದ ಸುದ್ದಿಗೋಷ್ಠಿ

ಸಿನಿಮಾ 25 ದಿನಗಳನ್ನು ಪೂರೈಸಿದ ಈ ಸಂಭ್ರಮವನ್ನು ಆಚರಿಸಲು ನಿರ್ದೇಶಕ ಮಂಸೋರೆ, ನಟರಾದ ಪ್ರಮೋದ್ ಶೆಟ್ಟಿ, ಬಿ. ಸುರೇಶ್, ಸಂಚಾರಿ ವಿಜಯ್, ದತ್ತಣ್ಣ, ನಟಿ ಶರಣ್ಯ, ರಘು ಶಿವಮೊಗ್ಗ, ಕಥೆಗಾರ ವೀರೇಂದ್ರ ಮಲ್ಲಣ್ಣ, ಛಾಯಾಗ್ರಹಕ ಸತ್ಯ ಹೆಗ್ಗಡೆ ಹಾಗೂ ನಿರ್ಮಾಪಕ ದೇವರಾಜ್ ಸೇರಿದಂತೆ ಚಿತ್ರತಂಡದ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಹಿರಿಯ ನಟ ಬಿ.ಸುರೇಶ್ ಮಾತನಾಡಿ, ಕೊರೊನಾ ಸಮಯದಲ್ಲಿ ಈ ಸಿನಿಮಾ ಬಿಡುಗಡೆಯಾಗಿರುವುದು ಚಿತ್ರರಂಗಕ್ಕೆ ಒಂದು ದಾರಿ ದೀಪವಾಗಿದೆ ಎಂದರು. ಸಂಚಾರಿ ವಿಜಯ್ ಮಾತನಾಡಿ, ಮಲ್ಟಿಪ್ಲೆಕ್ಸ್​​​​​​​ನಲ್ಲಿ ಮತ್ತೆ ಕನ್ನಡ ಸಿನಿಮಾಗಳಿಗೆ ಅನ್ಯಾಯ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಮೋದ್ ಶೆಟ್ಟಿ ಮಾತನಾಡಿ, ಕನ್ನಡದ ಎಲ್ಲಾ ಸ್ಟಾರ್​​​​​​​​​​​​​​ಗಳು ಈ‌ ಸಿನಿಮಾಗೆ ಬೆಂಬಲ ನೀಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಕಥೆಗಾರ ವೀರೇಂದ್ರಮಲ್ಲಣ್ಣ, ನಿರ್ದೇಶಕ ಮಂಸೋರೆ, ನಿರ್ಮಾಪಕ ದೇವರಾಜು ಮಾತನಾಡಿ ಸಿನಿಮಾ ಯಶಸ್ಸಿಗೆ ಪ್ರೇಕ್ಷಕರು ಕಾರಣ ಎಂದು ಧನ್ಯವಾದ ಅರ್ಪಿಸಿದರು.

Act 1978  completed 25 days
25 ದಿನಗಳನ್ನು ಪೂರೈಸಿದ 'ಆಕ್ಟ್ 1978'

ಇದನ್ನೂ ಓದಿ:ನಟನೆ ಜೊತೆಗೆ ಗಾಯಕನಾದ ದಿಯಾ ಖ್ಯಾತಿಯ ಹೀರೋ!

ಚಿತ್ರದಲ್ಲಿ ನಾಯಕಿ ಯಜ್ಞ ಶೆಟ್ಟಿ ಕೈಯಲ್ಲಿ ಗನ್ ಹಿಡಿದು ಸರ್ಕಾರಿ ಅಧಿಕಾರಿಗಳ ವಿರುದ್ಧ ಹೋರಾಡುವ ಮಹಿಳೆಯಾಗಿ ಅದ್ಭುತ ನಟನೆ ಮಾಡಿದ್ದಾರೆ. ಮಂಸೋರೆ, ವೀರೇಶ್ ಮಲ್ಲಣ್ಣ ಹಾಗೂ ದಯಾನಂದ್ ಟಿ.ಕೆ. 'ಆಕ್ಟ್​​​​​ 1978' ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ರಾಹುಲ್ ಶಿವಕುಮಾರ್ ಸಂಗೀತ ನಿರ್ದೇಶನ, ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ನಾಗೇಂದ್ರ ಕೆ. ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ. ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ'ಆಕ್ಟ್ -1978' ಸಿನಿಮಾ 25 ದಿನಗಳನ್ನು ಮುಗಿಸಿ 50ನೇ ದಿನದತ್ತ ಮುನ್ನುಗ್ಗುತ್ತಿರುವುದಕ್ಕೆ ಸಿನಿಪ್ರಿಯರು ಕೂಡಾ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.