ETV Bharat / sitara

ಸ್ಯಾಂಡಲ್​​ವುಡ್​​ನಲ್ಲಿ ಮಿಂಚುತ್ತಿರುವ ಮಲಯಾಳಂ ಚೆಲುವೆಯರು! - ಮಲೆಯಾಳಂ ನಟಿಯರು

ಕನ್ನಡ ಚಿತ್ರರಂಗದ ಆರಂಭದ ದಿನದಿಂದಲೂ ಪರಭಾಷೆಯಿಂದ ನಟಿಮಣಿಯರನ್ನು ಕರೆತರುವ ವಾಡಿಕೆ ಇದೆ. ಹಾಗೇ ನೋಡೋದಾದ್ರೆ 70ರ ದಶಕದಿಂದಲೂ, ಮಲಯಾಳಂ ನಟಿಯರು ಕನ್ನಡ ಚಿತ್ರರಂಗದಲ್ಲಿ, ಕನ್ನಡದ ನಟರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.

Malayalam actresses in Kannada cinema
ಸ್ಯಾಂಡಲ್​​ವುಡ್​​ನಲ್ಲಿ ಮಿಂಚುತ್ತಿರುವ ಮಲಯಾಳಂ ಚೆಲುವೆಯರು
author img

By

Published : Jun 3, 2020, 10:45 PM IST

ಕನ್ನಡ ನಟಿಯರಿಗಿಂತ ಬೇರೆ ಭಾಷೆಯ ಬ್ಯೂಟಿಫುಲ್ ಹೀರೋಯಿನ್ಸ್ ಕನ್ನಡದಲ್ಲಿ ಹೈಪ್​ ಕ್ರಿಯೇಟ್​​​ ಮಾಡಿಕೊಂಡಿದ್ದಾರೆ. ತೆಲುಗು, ತಮಿಳು ಹಾಗು ಹಿಂದಿ ಭಾಷೆಯ ನಟಿಯರಿಗಿಂತ ಕೇರಳ ನಟಿಯರು ಸ್ಯಾಂಡಲ್​​ವುಡ್​ನಲ್ಲಿ ಕಮಾಲ್ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.

ಕನ್ನಡ ಚಿತ್ರರಂಗದ ಆರಂಭದ ದಿನದಿಂದಲೂ ಪರಭಾಷೆಯಿಂದ ನಟಿಮಣಿಯರನ್ನು ಕರೆತರುವ ವಾಡಿಕೆ ಇದೆ. ಹಾಗೇ ನೋಡೋದಾದ್ರೆ 70ರ ದಶಕದಿಂದಲೂ, ಮಲಯಾಳಂ ನಟಿಯರು ಕನ್ನಡ ಚಿತ್ರರಂಗದಲ್ಲಿ, ಕನ್ನಡದ ನಟರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಹಾಗಾದ್ರೆ ಸ್ಯಾಂಡಲ್​ವುಡ್​ನಲ್ಲಿ ಮಲಯಾಳಂ ನಟಿಮಣಿಯರ ದರ್ಬಾರ್ ಹೇಗಿದೆ ಅನ್ನೋದನ್ನ ನೋಡೊಣ ಬನ್ನಿ.

Malayalam actresses in Kannada cinema
ಅಂಬಿಕಾ

ಚಳಿ ಚಳಿ ತಾಳೆನು ಈ ಚಳಿಯ ಹಾಡನ್ನ ಕೇಳ್ತಾ ಇದ್ರೆ, ಎಲ್ಲಾರ ಕಣ್ಮುಂದೆ ಬರೋದು ರೆಬಲ್ ಸ್ಟಾರ್ ಅಂಬರೀಷ್ ಮತ್ತು ಬ್ಯೂಟಿಫುಲ್ ಹೀರೋಯಿನ್ ಅಂಬಿಕಾ. ನೋಡದಿಕ್ಕೆ ಕನ್ನಡದವರ ತರ ಕಾಣುವ ಅಂಬಿಕಾ ಮೂಲತಃ ಕೇರಳದವರು. 90ರ ದಶಕದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರೋ ಅಂಬಿಕಾ, 1981ರಲ್ಲಿ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಎಂಟ್ರಿ ಕೊಡ್ತಾರೆ. ಅಂದಿನ ದಿಗ್ಗಜ ನಟರಾದ ಡಾ ರಾಜ್ ಕುಮಾರ್ ಹಾಗು ಅಂಬರೀಷ್​, ಶ್ರೀನಾಥ್, ಟೈಗರ್​ ಪ್ರಭಾಕರ್​ರಂತಹ ನಟರ ಜೊತೆ ಅಂಬಿಕಾ ನಟಿಸಿದ್ದಾರೆ. 30ಕ್ಕಿಂತ ಹೆಚ್ಚು ಸಿನಿಮಾಗಳನ್ನ ಕನ್ನಡದಲ್ಲಿ ಮಾಡಿರುವ ಅಂಬಿಕಾ ಮಲಯಾಳಂನ ಸುಂದರಿ ಅಂದ್ರೆ ನಂಬೋದಿಕ್ಕೆ ಆಗೋಲ್ಲ.

ದಕ್ಷಿಣ ಭಾರತದಲ್ಲಿ ತನ್ನ ಸೌಂದರ್ಯದಿಂದಲೇ ಕಮಲ್ ಹಾಸನ್, ರಜನಿಕಾಂತ್, ಮೋಹನ್ ಲಾಲ್ ಹೀಗೆ ದೊಡ್ಡ ನಟರ ಜೊತೆ ನಟಿಸಿದ ನಟಿ ಊರ್ವಶಿ. 1980ರಲ್ಲಿ ನ್ಯಾಯ ನೀತಿ ಧರ್ಮ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡ್ತಾರೆ. ಮೂರನೇ ಚಿತ್ರಕ್ಕೆ ಡಾ. ರಾಜ್ ಕುಮಾರ್ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲಾ ವಿಷ್ಣುರ್ಧನ್, ಅಂಬರೀಷ್, ರವಿಚಂದ್ರನ್ ಹೀಗೆ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ಊರ್ವಶಿ ಕೂಡ ಮಲಯಾಳಂನ ನಟಿ ಅನ್ನೋದು ವಿಶೇಷ.

Malayalam actresses in Kannada cinema
ಶಿಲ್ಪಾ

ಇನ್ನು ಜನುಮದ ಜೋಡಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಲಯಾಳಂ ನಟಿ ಶಿಲ್ಪಾ. ಚೊಚ್ಚಲ ಚಿತ್ರದಲ್ಲೇ ರಾಜ್ಯ ಪ್ರಶಸ್ತಿ ಪಡೆದ ಶಿಲ್ಪಾ ಮೂಲತಃ ಮಲಯಾಳಂ ನಟಿ. ಕನ್ನಡದವರ ತರ ಇದ್ದ ಶಿಲ್ಪಾ ಕನ್ನಡದಲ್ಲಿ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Malayalam actresses in Kannada cinema
ಭಾವನಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜಾಕಿ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಮಲಯಾಳಂ ಸುಂದರಿ ಭಾವನ ಮೆನನ್​​. ಪವರ್ ಸ್ಟಾರ್ ಜೊತೆ ಎರಡು ಸಿನಿಮಾ ಮಾಡಿದ್ದಾರೆ. ಅಲ್ಲದೆ ಶಿವರಾಜ್ ಕುಮಾರ್, ಸುದೀಪ್, ಗಣೇಶ್ ಜೊತೆ ರೊಮ್ಯಾನ್ಸ್ ಮಾಡಿರುವ ಭಾವನಾ ಕೂಡ ಕನ್ನಡದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

Malayalam actresses in Kannada cinema
ಪಾರ್ವತಿ ಮೆನನ್

ಭಾವನ ನಂತ್ರ ಪುನೀತ್ ರಾಜ್ ಕುಮಾರ್ ಜೊತೆ ಹಿಟ್ ಫೇರ್ ಅಂತಾ ಕರೆಯಿಸಿಕೊಂಡ ಕೇರಳ ಕುಟ್ಟಿ ಪಾರ್ವತಿ ಮೆನನ್. ಮಿಲನ ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರವೇಶಿಸಿ ಪಾರ್ವತಿ ಮೆನನ್, ಕನ್ನಡಿಗರ ಮನಸ್ಸು ಕದಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.

Malayalam actresses in Kannada cinema
ನವ್ಯ

2008ರಲ್ಲಿ ದರ್ಶನ್ ಅಭಿನಯದ ಗಜ ಚಿತ್ರದ ಮೂಲಕ, ಸ್ಯಾಂಡಲ್​ವುಡ್ ಕಡೆ ಮುಖ ಮಾಡಿದ ಮಲಯಾಳಂ ನಟಿ ನವ್ಯ ನಾಯರ್, ವಿಷ್ಣುವರ್ಧನ್ ಅಭಿನಯದ ನಮ್ಮೆಜಮಾನ್ರು, ಶಿವರಾಜ್ ಕುಮಾರ್ ಜೊತೆ ಭಾಗ್ಯದ ಬಳೆಗಾರ, ರವಿಚಂದ್ರನ್ ಜೊತೆ ದೃಶ್ಯಂ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Malayalam actresses in Kannada cinema
ಮೀರಾ ಜಾಸ್ಮಿನ್​​

ಮಲಯಾಳಂ ನಟಿಯರಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಹಿಟ್ ಹೀರೋಯಿನ್ಸ್ ಅನ್ನಿಸಿಕೊಂಡವರಲ್ಲಿ, ಮೀರಾ ಜಾಸ್ಮಿನ್ ಕೂಡ ಒಬ್ಬರು. 2004 ರಲ್ಲಿ ತೆರೆಕಂಡ ಮೌರ್ಯ ಚಿತ್ರದ ಮೂಲಕ ಮೀರಾ ಜಾಸ್ಮಿನ್ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Malayalam actresses in Kannada cinema
ಅನುಪಮಾ ಪರಮೇಶ್ವರನ್

ಟಿವಿ ನಿರೂಪಣೆ ಮಾಡ್ತಾ ಹೀರೋಯಿನ್ ಆದ ಮಲಯಾಳಂ ನಟಿ ಅಂದ್ರೆ ಭಾಮ. ಯಶ್ ಅಭಿನಯದ ಮೊದಲ ಸಲ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ನಂತರ ಶೈಲೂ, ಆಟೋ ರಾಜಾ, ಬರ್ಫಿ, ರಾಗ ಸೇರಿದಂತೆ ಹತ್ತು ಚಿತ್ರಗಳಲ್ಲಿ ಭಾಮ ನಟಿಸಿ ಸೈ ಎನ್ನಿಸಿಕೊಂಡ್ರು.

ಇವ್ರು ಅಷ್ಟೇ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದೇ ಸಿನಿಮಾಕ್ಕೆ ಬಂದು ಹೋದ ಮಲಯಾಳಂ ನಟಿಯರು ಕೂಡ ಇದ್ದಾರೆ. ಅದ್ರಲ್ಲಿ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ಮಿಂಚಿದ ಗ್ಲ್ಯಾಮಾರ್ ಡಾಲ್ ನಯನತಾರ, ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ಮಿಂಚಿದ ಅಮಲಾ ಪೌಲ್ ಹಾಗು ಪವರ್ ಸ್ಟಾರ್ ಜೊತೆ ನಟಸಾರ್ವಭೌಮ ಚಿತ್ರದಲ್ಲಿ ರೊಮ್ಯಾನ್ಸ್ ಅನುಪಮಾ ಪರಮೇಶ್ವರನ್ , ಒಂದೇ ಸಿನಿಮಾ ಆದ್ರೂ ದೊಡ್ಡ ಮಟ್ಟದಲ್ಲಿ ಗಮನ ಸೆಳೆದ್ರು.

Malayalam actresses in Kannada cinema
ನಯನ್ ತಾರಾ

ಇನ್ನು ರಿಲೀಸ್​ಗೆ ರೆಡಿಯಾಗಿರುವ ಕೋಟಿಗೊಬ್ಬ 3 ಚಿತ್ರದಲ್ಲಿ, ಕಿಚ್ಚನ ಜೊತೆ ಡುಯ್ಯೆಟ್ ಹಾಡಿರುವ ಮಡೋನಾ ಸೆಬಾಸ್ಟಿನ್ ಕೂಡ ಮಲಯಾಳಂ ಬೆಡಗಿ ಅನ್ನೋದು ವಿಶೇಷ.

ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಮಲಯಾಳಂ ಚೆಂದುಳ್ಳಿ ಚೆಲುವೆಯರು ದರ್ಬಾರ್ ಜೋರಾಗಿದೆ ಅನ್ನೋದಿಕ್ಕೆ ಈ ನಟಿಯರೇ ಸಾಕ್ಷಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.