ಸ್ಯಾಂಡಲ್ವುಡ್ ನಟ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾಗಿ 7 ದಿನಗಳಾಗಿವೆ. ಚಿರು ನಿಧನಕ್ಕೆ ಎಲ್ಲರೂ ದು:ಖ ವ್ಯಕ್ತಪಡಿಸಿದ್ದಾರೆ. ಮಲಯಾಳಂ ನಟಿ ನಜ್ರಿಯಾ ನಜೀಮ್ ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಹಾಗೂ ಮೇಘನಾ ಜೊತೆಗೆ ಇರುವ ಫೋಟೋವನ್ನು ಅಪ್ಲೋಡ್ ಮಾಡಿ ಕಂಬನಿ ಮಿಡಿದಿದ್ದಾರೆ.
ನಜ್ರಿಯಾ ಚಿರಂಜೀವಿ ಅವರೊಂದಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಆದರೆ 'ಮ್ಯಾಡ್ ಡ್ಯಾಡ್' ಎಂಬ ಮಲಯಾಳಂ ಸಿನಿಮಾದಲ್ಲಿ ಮೇಘನಾ ಜೊತೆ ನಜ್ರಿಯಾ ನಟಿಸಿದ್ದರು. ಆಗ ಚಿರಂಜೀವಿ ಸರ್ಜಾ ಅವರ ಪರಿಚಯವಾಗಿತ್ತು. ಚಿರು ಮೇಘನಾ ಮದುವೆಗೆ ನಜ್ರಿಯಾ ಕೂಡಾ ಆಗಮಿಸಿ ಶುಭ ಕೋರಿದ್ದರು. ಆದರೆ ಇದೀಗ ಚಿರಂಜೀವಿ ಸರ್ಜಾ ನಿಧನ ಅವರಿಗೆ ಶಾಕ್ ನೀಡಿದೆ. ಇಷ್ಟು ಚಿಕ್ಕ ವಯಸ್ಸಿಗೆ ಚಿರು ಅಗಲಿದ್ದು ಅವರಿಗೆ ನೋವು ತಂದಿದೆ. ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿ ಕೂಡಾ ಚಿರಂಜೀವಿ ಅವರೊಂದಿಗಿನ ಪೋಟೋ ಹಾಕಿಕೊಂಡು ಮೇಘನಾ ಅವರಿಗೆ ಚಿರು ನಿಧನದ ಶಕ್ತಿ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ನಜ್ರಿಯಾ ನಜೀಮ್ ಬಾಲನಟಿಯಾಗಿ ಮಾಲಿವುಡ್ಗೆ ಬಂದವರು. ನಿರೂಪಕಿ ಕೂಡಾ ಆಗಿದ್ದ ಅವರು 2013 ರಲ್ಲಿ ಮೇಘನಾ ಜೊತೆ 'ಮ್ಯಾಡ್ ಡ್ಯಾಡ್' ಚಿತ್ರದ ಮೂಲಕ ಕರಿಯರ್ ಆರಂಭಿಸಿದರು. ಬೆಂಗಳೂರು ಡೇಸ್, ಓಂ ಶಾಂತಿ ಓಷನಾ, ರಾಜಾ ರಾಣಿ, ನ್ಯಾರಂ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಹದ್ ಪಾಸಿಲ್ ಅವರನ್ನು ನಜ್ರಿಯಾ 2014 ರಲ್ಲಿ ಮದುವೆಯಾದರು.