ಕಾಕಾತಾಳೀಯ ಎಂದರೆ ನಾನು ಈ ಮೊದಲು ಮಾಧವನ ಪಾತ್ರಕ್ಕೆ ಆಯ್ಕೆಯಾಗಿದ್ದೆ. ಆದರೆ ಕಾರಣಾಂತರಗಳಿಂದ ಸೌರವ್ ಅವರು ಆ ಪಾತ್ರದಲ್ಲಿ ಕಾಣಿಸಿಕೊಂಡರು. ಇದೀಗ ಮಾಧವನ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿರುವುದು ನನಗೆ ಸಂತಸ ತಂದಿದೆ ಎಂದು ಹೇಳುತ್ತಾರೆ ವಿಯಾನ್.
ಅಪ್ಪ ಅಮ್ಮನ ಮಾತನ್ನು ಕೇಳುವ ಮಗನಾಗಿರುವ ಮಾಧವ ಸಂಪ್ರದಾಯಗಳನ್ನು ಪಾಲಿಸುತ್ತಲೇ ಬೆಳೆದವನು. ಅದರಲ್ಲೂ ಅಮ್ಮನ ಮಾತೆಂದರೆ ವೇದ ವಾಕ್ಯ. ಬ್ಯುಸಿನೆಸ್ ಟೂರ್ಗಾಗಿ ಹುಬ್ಬಳ್ಳಿಗೆ ಹೋದ ಮಾಧವ ತುಂಬಾ ಬದಲಾಗುತ್ತಾನೆ. ಅಮ್ಮಮ್ಮ ಮಾತನ್ನು ಕೇಳದ ಆದ ತನ್ನ ವ್ಯಕ್ತಿತ್ವದಲ್ಲಿ ಬದಲಾವಣೆ ಪಡೆಯುತ್ತಾನೆ. ಅವನ ದಿಢೀರ್ ಬದಲಾವಣೆ ಮನೆಯವರಿಗೆ ಆಶ್ವರ್ಯ ತರುತ್ತದೆ. ಮಾತ್ರವಲ್ಲ ಮುಂದೆ ಇದರಿಂದ ಧಾರಾವಾಹಿ ಕತೆಗೆ ಟ್ವಿಸ್ಟ್ ಕೂಡಾ ದೊರಕಲಿದೆ ಎಂದು ಪಾತ್ರದ ಬಗ್ಗೆ ಮಾತನಾಡುತ್ತಾರೆ ವಿಯಾನ್.
ಕಸ್ತೂರಿ ನಿವಾಸ ಧಾರಾವಾಹಿಯ ಜೊತೆಗೆ ಶಾಂತಂ-ಪಾಪಂನಲ್ಲಿಯೂ ವಿಯಾನ್ ಅಭಿನಯಿಸುತ್ತಿದ್ದಾರೆ. ಇನ್ನು ಇದರ ಹೊರತಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಭಿನಯಿಸಿದ್ದ ವಿಯಾನ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ನಟಿಸಿದ್ದಾರೆ.