ETV Bharat / sitara

9 ಅವತಾರಗಳಲ್ಲಿ ‘ಪ್ರೇಮಂ ಪೂಜ್ಯಂ’ ಮಾಡಲಿರುವ ನಟ ನೆನಪಿರಲಿ ಪ್ರೇಮ್.. - ‘ಪ್ರೇಮಂ ಪುಜ್ಯಂ’ ಮಾಡಲಿರುವ ನೆನಪಿರಲಿ ಪ್ರೇಮ್

ಮೊದಲ ಬಾರಿಗೆ ವಿಯಟ್ನಾಂ ಅಲ್ಲಿ 4000 ಕಿ.ಮೀ. ಪ್ರಯಾಣ ಮಾಡಿ ಚಿತ್ರೀಕರಣ ಮಾಡಿರುವ ಮೊದಲ ಕನ್ನಡ ಸಿನಿಮಾ ‘ಪ್ರೇಮಂ ಪುಜ್ಯಂ’. ಎರಡು ಹಾಡಿನ ಚಿತ್ರೀಕರಣ ಇಲ್ಲಿ ನಡೆದಿದೆ. 15 ದಿವಸ 54 ಜನ ಚಿತ್ರತಂಡದ ಸದಸ್ಯರು ಲಾಕ್​ ಡೌನ್​ಗಿಂತ ಮುಂಚೆಯೆ ಚಿತ್ರೀಕರಣ ಮುಗಿಸಿ ಬಂದಿದ್ದಾರೆ.

LOVELY STAR PREMKUMAR 9 GET UP FOR PREMAM POOJYAM
ನೆನಪಿರಲಿ ಪ್ರೇಮ್
author img

By

Published : May 8, 2020, 12:04 PM IST

ಕನ್ನಡದ ಸುಂದರ ನಟ ನೆನಪಿರಲಿ ಪ್ರೇಮ್ ಈಗ 25ನೇ ಸಿನಿಮಾ ಸಂತಸದಲ್ಲಿದ್ದಾರೆ. ಅದೇ ‘ಲವ್‌ ರೀವಿಸಿಟೆಡ್‌ ’ ಉಪ ಶೀರ್ಷಿಕೆಯುಳ್ಳ ಚಿತ್ರ ‘‘ಪ್ರೇಮಂ ಪೂಜ್ಯಂ’. ಚಿತ್ರದ ಮೂರು ನಿರ್ಮಾಪಕರುಗಳು ಹಾಗೂ ಸಂಗೀತ ಮತ್ತು ನಿರ್ದೇಶನ ಮಾಡಿರುವವರು ವೈದ್ಯಕೀಯ ವೃತ್ತಿಯಿಂದ ಬಂದವರು. ಹಾಗಾಗಿ ಇದು ಡೈರೆಕ್ಟರ್ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಡಾಕ್ಟರ್ಸ್ ಸಿನಿಮಾ.

ಮೊದಲ ಬಾರಿಗೆ ವಿಯಟ್ನಾಂನಲ್ಲಿ 4000 ಕಿ.ಮೀ. ಪ್ರಯಾಣ ಮಾಡಿ ಚಿತ್ರೀಕರಣ ಮಾಡಿರುವ ಮೊದಲ ಕನ್ನಡ ಸಿನಿಮಾ ‘ಪ್ರೇಮಂ ಪೂಜ್ಯಂ’. ಎರಡು ಹಾಡಿನ ಚಿತ್ರೀಕರಣ ಇಲ್ಲಿ ನಡೆದಿದೆ. 15 ದಿವಸ 54 ಚಿತ್ರತಂಡದ ಸದಸ್ಯರು ಲಾಕ್‌ಡೌನ್​ಗಿಂತ ಮುಂಚೆಯೇ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ 9 ಅವತಾರ​​ಗಳಲ್ಲಿ ಕಾಣಿಸಿದ್ದಾರೆ. ಕ್ಲೀನ್‌ಶೇವ್, ಗಡ್ಡದಾರಿ, ಸ್ಟೈಲಿಶ್ ಯುವಕ, ಧರ್ಮ ಶಾಲಾ (ಹಿಮಾಚಲ ಪ್ರದೇಶ) ಪೋರ್ಶನ್, ಹೀಗೆ ವಿವಿಧ ಗೆಟಪ್​ಗಳಲ್ಲಿ ಕಾನಿಸಿಕೊಂಡಿದ್ದಾರೆ.

ಪ್ರಥಮ ಬಾರಿಗೆ ಡಾ. ರಾಘವೇಂದ್ರ ಎಂಬುವರು ನಿರ್ದೇಶನ ಮಾಡಿದ್ದಾರೆ. ಪ್ರೇಮ್ ಅವರ 25ನೇ ಸಿನಿಮಾಕ್ಕೆ ಡಾ. ರಕ್ಷಿತ್ ಕೆಡಂಬಾಡಿ, ಡಾ.ದೇವದಾಸ್ ಆಚಾರ್ಯ ಮತ್ತು ಡಾ. ರಾಜಕುಮಾರ್ ಜಾನಕಿರಾಮನ್ ನಿರ್ಮಾಪಕರುಗಳು. ನವೀನ್‌ಕುಮಾರ್ ಛಾಯಾಗ್ರಾಹಕ ಮತ್ತು ನಿರ್ದೇಶಕ ಡಾ ಬಿ ಎಸ್ ರಾಘವೇಂದ್ರ ಅವರೇ ರಾಗ ಸಂಯೋಜನೆ ಮತ್ತು ಗೀತರಚನೆ ಒದಗಿಸಿದ್ದಾರೆ.

ಐಂದ್ರಿತಾ ರೇ 3ನೇ ಬಾರಿಗೆ ನೆನಪಿರಲಿ ಪ್ರೇಮ್ ಅವರಿಗೆ ನಾಯಕಿ ಆಗಿದ್ದಾರೆ. ಅದರಲ್ಲಿ ‘ಅತಿ ಅಪರೂಪ’ ಬಿಡುಗಡೆ ಆಗಿದೆ, ದಿನೇಷ್ ಬಾಬು ಅವರ ಒಂದು ಸಿನಿಮಾ ಬಿಡುಗಡೆ ಆಗಿಲ್ಲ. ಈಗ ಪ್ರೇಮಂ ಪೂಜ್ಯಂ’ ಮೂರನೇ ಸಿನಿಮಾ. ಬೃಂದಾ ಆಚಾರ್ಯ ಸಹ ಈ ಚಿತ್ರದ ನಾಯಕಿ, ಸಾಧು ಕೋಕಿಲ, ಮಾಸ್ಟರ್ ಆನಂದ್ ಸಹ ತಾರಾಗಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.