ಲಾಕ್ಡೌನ್ ವೇಳೆ ಭಾರಿ ಸದ್ದು ಮಾಡಿದ್ದ ಚಿತ್ರ ಲವ್ ಮಾಕ್ಟೈಲ್. ಈ ಚಿತ್ರದಿಂದ ಸ್ಯಾಂಡಲ್ವುಡ್ನಲ್ಲಿ ಹವಾ ಕ್ರಿಯೇಟ್ ಮಾಡಿಕೊಂಡ ಜೋಡಿ ಅಂದ್ರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್. ಈ ಜೋಡಿ ಸದ್ಯ ತಮ್ಮ ಮದುವೆ ಸಿದ್ಧತೆಯ ಬ್ಯುಸಿಯಲ್ಲಿದ್ದಾರೆ.
ಹೌದು ಹೊಸ ವರ್ಷದ ಫೆಬ್ರವರಿ 14ರಂದು ಪ್ರೇಮಿಗಳ ದಿನದಂದೇ ಮದುವೆ ಆಗಲು ನಿರ್ಧರಿಸಿರುವ ಈ ಜೋಡಿ ಈಗಾಗಲೇ ಮದುವೆಗೋಸ್ಕರ ಶಾಪಿಂಗ್ ಶುರು ಮಾಡಿದೆ. ಮದುವೆ ಬಟ್ಟೆಗಳಿಗೆ ಪ್ರಸಿದ್ಧ ಪಡೆದಿರುವ ಕಾಂಚೀಪುರಂಗೆ ಇಂದು ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹೋಗಿದ್ದಾರೆ.
ಇದನ್ನೂ ಓದಿ : 'ಫಿದಾ' ನಿರ್ಮಾಪಕ ದಿಲ್ ರಾಜು ಬರ್ತಡೇ ಪಾರ್ಟಿ ಫೋಟೋಗಳು
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಮಿಲನ ನಾಗರಾಜ್, ನಮ್ಮ ವಿಶೇಷ ದಿನಕ್ಕಾಗಿ ಶಾಪಿಂಗ್ ಮಾಡಲು ಕಾಂಚಿಪುರಂಗೆ ಬಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಮಿಲನ ಜೊತೆ ಕೃಷ್ಣ ಕೂಡ ಇದ್ದು ಇಬ್ಬರು ಸೆಲ್ಫಿ ಕ್ಲಿಕ್ಕಿಸಿ ಹಾಕಿದ್ದಾರೆ.
ಮೊದಲಿನಿಂದಲೂ ಪ್ರೇಮಿಗಳಾಗಿದ್ದ ಈ ಜೋಡಿ ಇತ್ತೀಚೆಗೆ ತಾವು ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದರು. ಇವರ ಈ ನಿರ್ಧಾರಕ್ಕೆ ಎಲ್ಲರೂ ಶುಭ ಹಾರೈಸಿ ವಿಶ್ ಮಾಡಿದ್ರು.
- " class="align-text-top noRightClick twitterSection" data="
">