ETV Bharat / sitara

ತಿಂಗಳ ಕೊನೆಗೆ 'ಲೋಕಲ್ ಟ್ರೈನ್' ಹತ್ತಿ ಬರಲಿದ್ದಾರೆ ಡಾರ್ಲಿಂಗ್ ಕೃಷ್ಣ - ಈ ವಾರ ಬಿಡುಗಡೆಯಾಗುತ್ತಿದೆ ಲವ್ ಮಾಕ್ಟೈಲ್

ಕೃಷ್ಣ ಅಭಿನಯದ ಮತ್ತೊಂದು ಸಿನಿಮಾ ‘ಲೋಕಲ್ ಟ್ರೈನ್’ ಕೂಡಾ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರಕ್ಕೆ ಕೂಡಾ ಒಳ್ಳೆಯ ಪ್ರತಿಕ್ರಿಯೆ ದೊರೆಯುವುದು ಎಂದು ಸಂಜನ ಸಿನಿ ಆರ್ಟ್ಸ್​​ ನಿರ್ಮಾಪಕ ಹೆಚ್​. ಎಸ್​​. ವಾಳ್ಕೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಸದ್ಯಕ್ಕೆ ‘ಲೋಕಲ್ ಟ್ರೈನ್’ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ.

Local train
'ಲೋಕಲ್ ಟ್ರೈನ್'
author img

By

Published : Mar 13, 2020, 10:59 PM IST

'ಲವ್​ ಮಾಕ್ಟೈಲ್​​​' ಚಿತ್ರದ ಯಶಸ್ಸಿನಲ್ಲಿರುವ ಮದರಂಗಿ ಕೃಷ್ಣ ಅಲಿಯಾಸ್ ಡಾರ್ಲಿಂಗ್ ಕೃಷ್ಣ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳ ನಾಯಕ ಎನ್ನಬಹುದು. 'ಲವ್ ಮಾಕ್ಟೈಲ್​​​' ಸಿನಿಮಾ ನಾಯಕಿ ಮಿಲನ ಜೊತೆ ಸೇರಿ ಸಿನಿಮಾ ಮಾಡಿದ ಕೃಷ್ಣ, ಮಿಲನ ಅವರನ್ನೇ ವಿವಾಹ ಆಗುತ್ತಿರುವುದು ಕೂಡಾ ಅಭಿಮಾನಿಗಳಿಗೆ ಸಂತೋಷ ತಂದಿದೆ.

Local train
'ಲೋಕಲ್ ಟ್ರೈನ್'

ಕೃಷ್ಣ ಅಭಿನಯದ ಮತ್ತೊಂದು ಸಿನಿಮಾ ‘ಲೋಕಲ್ ಟ್ರೈನ್’ ಕೂಡಾ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರಕ್ಕೆ ಕೂಡಾ ಒಳ್ಳೆಯ ಪ್ರತಿಕ್ರಿಯೆ ದೊರೆಯುವುದು ಎಂದು ಸಂಜನ ಸಿನಿ ಆರ್ಟ್ಸ್​​ ನಿರ್ಮಾಪಕ ಹೆಚ್​. ಎಸ್​​. ವಾಳ್ಕೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಸದ್ಯಕ್ಕೆ ‘ಲೋಕಲ್ ಟ್ರೈನ್’ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ. ಮಾರ್ಚ್ ಕೊನೆಯ ವಾರದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ‘ಲೋಕಲ್ ಟ್ರೈನ್’ ಒಂದು ವಿಭಿನ್ನ ಕಥಾ ವಸ್ತು ಹೊಂದಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಲು ಲೋಕಲ್ ಟ್ರೈನ್​​​​ ಬಳಸುತ್ತಿರುತ್ತಾರೆ. ಈ ಲೋಕಲ್ ಟ್ರೈನ್ ಚಿತ್ರದ ಕೇಂದ್ರ ಬಿಂದು. ಈ ಟ್ರೈನಿನಲ್ಲೇ ಹಲವಾರು ಘಟನೆಗಳು ಸಂಭವಿಸುತ್ತವೆ.

Local train
'ಲೋಕಲ್ ಟ್ರೈನ್'

ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ಸುಮಾರು 70 ದಿನಗಳ ಕಾಲ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಡಾರ್ಲಿಂಗ್ ಕೃಷ್ಣ ಜೊತೆಗೆ ಮೀನಾಕ್ಷಿ ದೀಕ್ಷಿತ್ ಹಾಗೂ ಎಸ್ತರ್ ನರೋನ್ಹಾ ಇಬ್ಬರು ನಾಯಕಿಯರು ನಟಿಸಿದ್ದಾರೆ. ಇವರೊಂದಿಗೆ ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ಚಿ. ಗುರುದತ್​, ಮೈಸೂರು ಗೋಪಿ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಅರ್ಜುನ್ ಜನ್ಯ ರಾಗ ಸಂಯೋಜನೆ ಮಾಡಿದ್ದಾರೆ. ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಮಾರುತಿ.ಟಿ ಚಿತ್ರಕ್ಕೆ ಸಂಭಾಷಣೆ ಒದಗಿಸಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.