ETV Bharat / sitara

'ಹರಿವು'ನಿಂದ 'ಮೇಲೊಬ್ಬ ಮಾಯಾವಿ'ವರೆಗೂ ಸಂಚಾರಿ ವಿಜಯ್​ ಬದುಕಿನ ಪಯಣ ಹೀಗಿತ್ತು..

ವಿಜಯ್ ಕುಮಾರ್ ಮುಂದೆ ಸಂಚಾರಿ ಎಂಬ ಹೆಸರು ಸೇರಿಕೊಳ್ಳುವುದಕ್ಕೆ ಒಂದು ಕಾರಣವಿದೆ. ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ವಿಜಯ್ ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂದಿತು. ಅಲ್ಲಿಂದ ವಿಜಯ್ ಕುಮಾರ್ ಬದಲು ಸಂಚಾರಿ ವಿಜಯ್ ಎಂದೇ ಜನಪ್ರಿಯರಾದರು.

Life Journey of Actor Sanchari vijya
ಸಂಚಾರಿ ವಿಜಯ್​​ನ ಬದುಕಿನ ಪಯಣ
author img

By

Published : Jun 14, 2021, 2:29 PM IST

Updated : Jun 15, 2021, 7:25 AM IST

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ನಟನೆ ಮೂಲಕ ಗುರುತಿಸಿಕೊಂಡ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಕನ್ನಡ ಚಿತ್ರರಂಗದಲ್ಲಿ ಹತ್ತಾರು ವಿಶಿಷ್ಠ ಪಾತ್ರಗಳನ್ನು ಮಾಡಬೇಕಿದ್ದ ಸಂಚಾರಿ ವಿಜಯ್ ಬೈಕ್ ಅಪಘಾತಕ್ಕೆ ತುತ್ತಾಗಿ, ಇಹಲೋಕ ತ್ಯಜಿಸಿದರು.

ಉದ್ದವಾದ ಮೂಗು, ಗುಂಗುರು ಕೂದಲು, ಕಟ್ಟು ಮಸ್ತಾದ ದೇಹ ಹೊಂದಿದ್ದ ವಿಜಯ್, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಒಂದು ಅಚ್ಚರಿಯ ಸಂಗತಿ. ಬಿ.ವಿಜಯ್ ಕುಮಾರ್, ಇದು ಸಂಚಾರಿ ವಿಜಯ್ ಅವ್ರ ಮೂಲ ಹೆಸರು. 1983ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ ಗ್ರಾಮದಲ್ಲಿ ಜುಲೈ 17ರಂದು ಸಂಚಾರಿ ವಿಜಯ್ ಜನನವಾಗುತ್ತೆ.

Life Journey of Actor Sanchari vijya
ದರ್ಶನ್​ ಜೊತೆ ಸಂಚಾರಿ ವಿಜಯ್

ಕಲೆ ಅನ್ನೋದು ರಕ್ತಗತವಾಗಿ ಬರುತ್ತೆ ಅನ್ನೋದಕ್ಕೆ ತಾಜಾ ಉದಾಹರಣೆ ಸಂಚಾರಿ ವಿಜಯ್. ತಂದೆ ಬಸವರಾಜಯ್ಯನವರು ಚಿತ್ರಕಲಾವಿದರು, ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ತಾಯಿ ಗೌರಮ್ಮನವರು, ಜಾನಪದ ಕಲಾವಿದರಾಗಿದ್ದು, ಭದ್ರಾವತಿಯ ರೇಡಿಯೋದಲ್ಲಿ ಅನೇಕ ಕಾರ್ಯಕ್ರಗಳನ್ನು ನೀಡಿದ್ದಾರೆ. ಇಂತಹ ಕಲಾರಧಕರ ಕುಟುಂಬದಲ್ಲಿ ಜನಿಸಿದ ವಿಜಯ್ ಕುಮಾರ್ ಬಾಲ್ಯದಿಂದಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ವಿಜಯ್ ಹಲವು ತಿಂಗಳ ಕಾಲ ಕೆಲಸ ಮಾಡಿದ್ದಾರೆ. ಆದರೆ ವಿಜಯ್‌ಗೆ ಜೀವನದಲ್ಲಿ ಉಪನ್ಯಾಸಕ ವೃತ್ತಿ ಅಷ್ಟೊಂದು ತೃಪ್ತಿ ನೀಡಿರಲಿಲ್ಲ.

Life Journey of Actor Sanchari vijya
ಮೋಹನ್ ಲಾಲ್‌ ಜೊತೆ ಸಂಚಾರಿ ವಿಜಯ್​

ಮೊದಲೇ ಕಲೆ ಕುಟುಂಬದಿಂದ ವಿಜಯ್, ರಂಗಭೂಮಿ ಹಾಗು ಸಿನಿಮಾ ಕೈಬೀಸಿ ಕರೆಯುತ್ತಿತ್ತು. ಕಾಲೇಜ್ ಟೀಚಿಂಗ್ ಮಾಡುತ್ತಿದ್ದ ವಿಜಯ್, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ತಮ್ಮ ಕೆಲಸಕ್ಕೆ ವಿದಾಯ ಹೇಳಿ ಪೂರ್ಣಪ್ರಮಾಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹತ್ತು ವರ್ಷಗಳಿಂದ ಸಂಚಾರಿ ವಿಜಯ್, ಥಿಯೇಟರ್‌ನಲ್ಲಿ ರಂಗತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಕನ್ನಡದ ಹಲವಾರು ರಂಗತಂಡಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಲ್ಲಿ ನಟನೆ ಮಾತ್ರವಲ್ಲದೇ, ಎರಡು ನಾಟಕಗಳನ್ನು ನಿರ್ದೇಶಿಸಿರೋದು ವಿಜಯ್ ಪ್ರತಿಭೆಗೆ ಸಾಕ್ಷಿ.

Life Journey of Actor Sanchari vijya
ನಟ ಧನುಷ್​ ಜೊತೆ ಸಂಚಾರಿ ವಿಜಯ್

ಇನ್ನು ವಿಜಯ್ ಕುಮಾರ್ ಮುಂದೆ ಸಂಚಾರಿ ಎಂಬ ಹೆಸರು ಸೇರಿಕೊಳ್ಳುವುದಕ್ಕೆ ಒಂದು ಕಾರಣವಿದೆ. ಸಂಚಾರಿ ಹೆಸರಿನ ನಾಟಕ ತಂಡದಲ್ಲಿ ವಿಜಯ್ ಒಬ್ಬರಾಗಿರುವುದರಿಂದ ಇವರಿಗೆ ಸಂಚಾರಿ ವಿಜಯ್ ಎಂಬ ಹೆಸರು ಬಂತು. ಅಲ್ಲಿಂದ ವಿಜಯ್ ಕುಮಾರ್ ಬದಲು ಸಂಚಾರಿ ವಿಜಯ್ ಎಂಬ ಹೆಸರು ಸೇರಿಕೊಂಡಿದೆ.

2011ರಲ್ಲಿ ತೆರೆಗೆ ಬಂದ ರಂಗಪ್ಪ ಹೋಗ್​ಬಿಟ್ನಾ ಸಿನಿಮಾ ಮೂಲಕ ಸಂಚಾರಿ ವಿಜಯ್​ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಆದರೆ ಈ ಸಿನಿಮಾ ಸಂಚಾರಿ ವಿಜಯ್‌ಗೆ ಅಷ್ಟೊಂದು ಹೆಸರು ತಂದುಕೊಡುವುದಿಲ್ಲ. ಈ ಚಿತ್ರದ ಬಳಿಕ, ದಾಸವಾಳ, ಒಗ್ಗರಣೆ ಚಿತ್ರಗಳಲ್ಲಿ ಅವರು ನಟಿಸುತ್ತಾರೆ. ಈ ಚಿತ್ರಗಳು ಕೂಡ ವಿಜಯ್ ಅಂದುಕೊಂಡಂತೆ ಯಶಸ್ಸು ಸಿಗುವುದಿಲ್ಲ. 2014ರಲ್ಲಿ ಸಂಚಾರಿ ವಿಜಯ್ ನಟಿಸಿದ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈ ಚಿತ್ರ ಪ್ರಶಸ್ತಿ ವಿಭಾಗದಲ್ಲಿ ಮಾತ್ರ ಗಮನ ಸೆಳೆಯುತ್ತೆ.

Life Journey of Actor Sanchari vijya
ಸಂಚಾರಿ ವಿಜಯ್

ಹೀಗೆ ಒಂದು ಕನ್ನಡದಲ್ಲಿ ನಾಲ್ಕು ಸಿನಿಮಾ, ತಮಿಳು ಹಾಗು ತೆಲುಗಿನಲ್ಲಿ ಒಂದೊಂದು ಸಿನಿಮಾ ಮಾಡಿದ್ದ ಈ ನಟನಿಗೆ ಹೆಚ್ಚು ಪ್ರಖ್ಯಾತಿ ತಂದು ಕೊಟ್ಟ ಸಿನಿಮಾ 2015ರಲ್ಲಿ ತೆರೆಗೆ ಬಂದ "ನಾನು ಅವನಲ್ಲ ಅವಳು". ಈ ಚಿತ್ರದಲ್ಲಿ ಮಾಡಿರುವ ಪಾತ್ರ ಸಂಚಾರಿ ವಿಜಯ್ ಯಾರು ಅನ್ನೋದನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಯಿಸುತ್ತೆ. ಯಾಕಂದರೆ ಈ ಚಿತ್ರದ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಸಂಚಾರಿ ವಿಜಯ್ ಪಡೆದುಕೊಳ್ಳುತ್ತಾರೆ.

ಇಲ್ಲಿಂದ ಸಂಚಾರಿ ವಿಜಯ್ ಕನ್ನಡ ಚಿತ್ರರಂಗಲ್ಲಿ ಕಿಲ್ಲಿಂಗ್ ವೀರಪ್ಪನ್, ವರ್ತಮಾನ, ಕೃಷ್ಣ ತುಳಸಿ, ನಾತಿಚಾರಾಮಿ, ಜೆಂಟಲ್ ಮ್ಯಾನ್, ಆಕ್ಟ್ 1978 ಹೀಗೆ ಹತ್ತಾರು ಸಿನಿಮಾಗಳಲ್ಲಿ ಸಂಚಾರಿ ವಿಜಯ್ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಆದರೆ ಮೇಲೊಬ್ಬ ಮಾಯಾವಿ, ಆಟಕ್ಕುಂಟು ಲೆಕ್ಕಕ್ಕೆ ಸಿನಿಮಾಗಳು ರಿಲೀಸ್ ಆಗಬೇಕಿದೆ.

ಇನ್ನು ಸಂಚಾರಿ ವಿಜಯ್ ಒಬ್ಬ ನಟ, ನಾಟಕ ನಿರ್ದೇಶಕನಲ್ಲದೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನ ಕಲಿತುಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹಲವಾರು ನಾಟಕಗಳು, ರಿಯಾಲಿಟಿ ಶೋಗಳಲ್ಲಿ ತಮ್ಮ ಹಾಡುಗಾರಿಕೆಯನ್ನು ಪ್ರದರ್ಶನ ಮಾಡಿದ್ದಾರೆ.

ರಂಗಭೂಮಿ, ಸಿನಿಮಾ ಹಾಗು ಸಂಗೀತದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಂಚಾರಿ ವಿಜಯ್ ಕಡಿಮೆ, ವಯಸ್ಸಿಗೆ ತಮ್ಮ ಬದುಕಿನ ಪಯಾಣ ಮುಗಿಸುತ್ತಾರೆ ಅನ್ನೋದು ಕಠೋರ ವಿಧಿಲೀಲೆ. ಈ ವಿಧಿಯಾಟದ ಮುಂದೆ ಎಲ್ಲರೂ ತಲೆ ಬಾಗಬೇಕು ಅನ್ನೋದು ಬ್ರಹ್ಮ ಲಿಖಿತ. ಅದೇ ಇರಲಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ.

Last Updated : Jun 15, 2021, 7:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.