ದೀಪಿಕಾ ಪಡುಕೋಣೆ ಮತ್ತು ವಿಕ್ರಾಂತ್ ಮೆಸ್ಸೆ ಅಭಿನಯದ ಮೇಘನಾ ಗುಲ್ಜಾರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಚಪಾಕ್ ರಿಲೀಸ್ ಆಗಿದ್ದು, ಅದ್ಭುತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇನ್ನು ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ವಾಲ್ ಜೀವನದ ಮೇಲೆ ಈ ಸಿನಿಮಾ ನಿರ್ಮಾಣವಾಗಿದ್ದು, ಲಕ್ಷ್ಮಿ ಪಾತ್ರದಲ್ಲಿ ದೀಪಿಕಾ ಮಿಂಚಿದ್ದಾರೆ.
ಸಿನಿಮಾ ನೋಡಿದ ಮೇಲೆ ಚಿತ್ರದ ಕಥಾ ನಾಯಕಿ ಲಕ್ಷ್ಮಿ ಫೋಟೋ ಒಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ರಣವೀರ್ ಸಿಂಗ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಅಗರ್ವಾಲ್, ನಿಮ್ಮ ಜೊತೆಗಿ ಈ ಫೋಟೋ ತುಂಬಾ ಮುದ್ದಾಗಿದೆ. ನೀವೇ ಬೆಸ್ಟ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಟ್ವೀಟ್ ಅನ್ನು ರಣವೀರ್ ಸಿಂಗ್ಗೆ ಟ್ಯಾಗ್ ಮಾಡಿದ್ದಾರೆ.
-
It's a cute picture with u 🥰 you are the best ❤️ @RanveerOfficial
— Laxmi (@TheLaxmiAgarwal) January 10, 2020 " class="align-text-top noRightClick twitterSection" data="
Movie dekhane ke baad ke Moment 🤗#Chhapaak #movie #inspiring 📸 @vikasmalani_official pic.twitter.com/Tt9tpXyROr
">It's a cute picture with u 🥰 you are the best ❤️ @RanveerOfficial
— Laxmi (@TheLaxmiAgarwal) January 10, 2020
Movie dekhane ke baad ke Moment 🤗#Chhapaak #movie #inspiring 📸 @vikasmalani_official pic.twitter.com/Tt9tpXyROrIt's a cute picture with u 🥰 you are the best ❤️ @RanveerOfficial
— Laxmi (@TheLaxmiAgarwal) January 10, 2020
Movie dekhane ke baad ke Moment 🤗#Chhapaak #movie #inspiring 📸 @vikasmalani_official pic.twitter.com/Tt9tpXyROr
ಇನ್ನು ಚಪಾಕ್ ಸಿನಿಮಾ ಹಲವಾರು ಸಂಕಷ್ಟಗಳನ್ನು ಎದುರಿಸಿ ಯಶಸ್ವಿಯಾಗಿ ತೆರೆ ಕಂಡಿದೆ. ಅಲ್ಲದೆ ಕಥಾ ನಾಯಕಿ ಲಕ್ಷ್ಮಿ ಪರ ವಕೀಲೆ, ನನಗೆ ಚಿತ್ರ ತಂಡದಿಂದ ಯಾವುದೇ ಕ್ರೆಡಿಟ್ ಸಿಕ್ಕಿಲ್ಲ. ಆದ್ರಿಂದ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಹಾಗೂ ಬಿಜೆಪಿ ಕಾರ್ಯಕರ್ತರು ಚಪಾಕ್ ಸಿನಿಮಾದಲ್ಲಿ ಹಿಂದು ಧರ್ಮಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದರು. ಈ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ಚಪಾಕ್ ತೆರೆ ಕಂಡಿದೆ.