ETV Bharat / sitara

ಮುದ್ದೇಬಿಹಾಳದ ಯುವ ನಿರ್ದೇಶಕನ ಚೊಚ್ಚಲ ಚಿತ್ರ ‘ಲಕ್ಷ್ಯ' ನ.19ರಂದು ತೆರೆಗೆ - ಸ್ಯಾಂಡಲ್​ವುಡ್ ಸುದ್ದಿ

ಮುದ್ದೇಬಿಹಾಳದ ರವಿ ಸಾಸನೂರ ನಿರ್ದೇಶನದಲ್ಲಿ ಸಿನಿಮಾಗಳ ಮೂಲಕ ಉತ್ತಮ ಸಂದೇಶ ಬೀರಬೇಕು ಎಂಬ ಉದ್ದೇಶದಿಂದ ಲಕ್ಷ್ಯ ಚಿತ್ರ ಮೂಡಿಬಂದಿದ್ದು, ನವೆಂಬರ್ 19ರಂದು ತೆರೆಕಾಣಲಿದೆ.

lakshya-kannada-movie-released-date-annouced
ಮುದ್ದೇಬಿಹಾಳದ ಯುವ ನಿರ್ದೇಶಕನ ಚೊಚ್ಚಲ ಚಿತ್ರ ‘ಲಕ್ಷ್ಯ' ನ.19ರಂದು ತೆರೆಗೆ
author img

By

Published : Nov 16, 2021, 7:01 AM IST

Updated : Nov 16, 2021, 8:00 AM IST

ಮುದ್ದೇಬಿಹಾಳ(ವಿಜಯಪುರ): ಕನ್ನಡ ಭಾಷೆಯಲ್ಲಿ ಸಿನಿಮಾಗಳ ಮೂಲಕ ಉತ್ತಮ ಸಂದೇಶ ಬೀರಬೇಕು ಎಂಬ ಉದ್ದೇಶದಿಂದ ಲಕ್ಷ್ಯ ಚಿತ್ರ (lakshya Movie) ನಿರ್ಮಿಸಿದ್ದು ರಾಜ್ಯಾದ್ಯಂತ ನವೆಂಬರ್ 19ರಂದು ಚಿತ್ರ ತೆರೆಯ ಮೇಲೆ ಬಿಡುಗಡೆ ಆಗಲಿದೆ ಎಂದು ಮುದ್ದೇಬಿಹಾಳದ ಯುವ ನಿರ್ದೇಶಕ ರವಿ ಸಾಸನೂರ (Director Ravi Sasanuru) ಹೇಳಿದರು.

ಪಟ್ಟಣದ ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯ ಜವಾಬ್ದಾರಿಯುತ ಸಂದೇಶ ನೀಡುವ ಸಿನಿಮಾ ಮಾಡಿದ್ದೇವೆ. ಸಿನಿಮಾದಲ್ಲಿ ಒಳ್ಳೆಯ ಅಪ್ಪ ಅಮ್ಮ ಇದ್ದಾರೆ. ಭ್ರಷ್ಟ ಅಧಿಕಾರಿಗಳೂ ಇದ್ದಾರೆ. ಮನೆ ಮಂದಿ ಒಟ್ಟಿಗೆ ಕೂತು ಸಿನಿಮಾ ನೋಡಬಹುದಾಗಿದೆ. ಈ ಸಿನಿಮಾದ ಮೂಲಕ ಹೊಸತನ್ನು ನೀಡುವ ಪ್ರಯತ್ನ ಮಾಡಲಾಗಿದೆ ಎಂದು ರವಿ ಸಾಸನೂರು ಹೇಳಿದ್ದಾರೆ.

ಬೆಳಗಾವಿ ಭಾಗದಲ್ಲಿ ಚಿತ್ರೀಕರಣ

ಚಿತ್ರದ ಸಹ ನಟ ಮಿಥುನ್.ಆರ್.ಪಿ ಮಾತನಾಡಿ, ಸಿನಿಮಾವನ್ನು ಗೋಕಾಕ್​, ಬೆಳಗಾವಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಯುವ ಪೀಳಿಗೆಯ ಕೈಯ್ಯಲ್ಲಿ ಭವಿಷ್ಯವಿದೆ. ಜವಾಬ್ದಾರಿಯನ್ನು ಮರೆತಾಗ ಬುದ್ಧಿ ಕಲಿಸುವ ಪಾತ್ರವನ್ನು ನನಗೆ ನೀಡಲಾಗಿದೆ. ಒಟ್ಟಾರೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕ ಪ್ರಭುಗಳು ಚಿತ್ರ ನೋಡಿ ಆಶೀರ್ವದಿಸಬೇಕು ಎಂದು ಹೇಳಿದರು. ಇದೇ ವೇಳೆ ಸಂಕಲನಕಾರ ಶಿವಕುಮಾರ ಎ., ಚಿತ್ರ ತಂಡದ ಅನೀಲಕುಮಾರ ತೇಲಂಗಿ ಮಾತನಾಡಿದರು.

‘ಲಕ್ಷ್ಯ' ಸಿನಿಮಾದ ಬಗ್ಗೆ ನಿರ್ದೇಶಕ ಮತ್ತು ನಟರ ಅಭಿಪ್ರಾಯ

ಶುಭಕೋರಿದ ಗಣ್ಯರು

ಅಭ್ಯುದಯ ಶಿಕ್ಷಣ ಸಂಸ್ಥೆಯ (Abhudhyaya Educational Institute) ಕಾರ್ಯದರ್ಶಿ ಎಂ.ಎನ್.ಮದರಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ವಿದ್ಯಾಸ್ಫೂರ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ, ಶರಣು ಬೂದಿಹಾಳಮಠ ಫೌಂಡೇಶನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಮುಖಂಡ ಬಿ.ಪಿ.ಕುಲಕಣ ಮೊದಲಾದವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ಸುದ್ದಿಗೋಷ್ಠಿಯಲ್ಲಿ ಎನ್​ಎಸ್​ಯುಐ (NSUI) ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಯುವ ಕಾಂಗ್ರೆಸ್​ ಅಧ್ಯಕ್ಷ ಮಹ್ಮದ ರಫೀಕ್​ ಶಿರೋಳ, ಬಸವರಾಜ ಬಿರಾದಾರ, ಅಶೋಕ ನಾಡಗೌಡ ಮೊದಲಾದವರು ಇದ್ದರು.

ಲಕ್ಷ್ಯ ಸಿನಿಮಾದ ಬಗ್ಗೆ ಮಾತನಾಡಿದ ಶರಣು ಬೂದಿಹಾಳಮಠ ಫೌಂಡೇಶನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ ಮುದ್ದೇಬಿಹಾಳದ ಗಿರಿಜಾಶಂಕರ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆಗೆ ಬರುವ ಮೊದಲ 50 ಮಂದಿಗೆ ಫೌಂಡೇಶನ್ ವತಿಯಿಂದ ಉಚಿತವಾಗಿ ಸಿನಿಮಾ ಟಿಕೆಟ್ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಗಣೇಶ್​ ನಟಿಸಿದ ಸಖತ್​ ಸಿನಿಮಾದ ಟೈಟಲ್​ ಸಾಂಗ್​ ರಿಲೀಸ್​, ಸೋಷಿಯಲ್​ ಮೀಡಿಯಾದಲ್ಲಿ ಫುಲ್​ ಹವಾ

Last Updated : Nov 16, 2021, 8:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.