ಬೆಂಗಳೂರು: ಸಿನಿಮಾ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಆಡಿಯೋ ಸಂಗೀತ ಕ್ಷೇತ್ರದಲ್ಲಿ ಲಹರಿ ಮ್ಯೂಸಿಕ್ ಸಂಸ್ಥೆಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದ ಹೆಗ್ಗಳಿಕೆ ಇದೆ. ಅಷ್ಟು ಮಾತ್ರವೇ ಅಲ್ಲ, ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಲಹರಿ ಆಡಿಯೋ ಸಂಸ್ಥೆಯದ್ದು. ಅದರ ಸಾಧನೆಯ ಕಿರೀಟಕ್ಕೆ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. ಆ ಸಾಲಿಗೀಗ ಮಹತ್ವದ ಮತ್ತೊಂದು ಗೌರವ ದೊರೆತಿದೆ.
ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ಗೆ ಈಗ 1.18 ಕೋಟಿಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್ ಯುಗಕ್ಕೆ ಹೊಚ್ಚ ಹೊಸ ದಾಖಲೆಯೂ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಯುಟ್ಯೂಬ್ ಸಂಸ್ಥೆಯಿಂದ ಪ್ರತಿಷ್ಟಿತ ಡೈಮಂಡ್ ಅವಾರ್ಡ್ ಪ್ರಶಸ್ತಿ ಸಿಕ್ಕಿದೆ. ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಅವರಿಗೆ ಪ್ರಶಸ್ತಿ ಸಂತಸ ತಂದಿದೆ.
ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದಾರೆ. ಇದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲ್ಲಬೇಕಾದ ಗೌರವ. ಅವರಿಗೆ ಇದು ಅರ್ಪಣೆ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು. ಲಹರಿ ಮ್ಯೂಜಿಕ್‌ಗೆ ಈಗಾಗಲೇ ಯುಟ್ಯೂಬ್‌ಸಂಸ್ಥೆಯಿಂದ ಎರಡು ಅವಾರ್ಡ್‌ಸಿಕ್ಕಿವೆ.
ಲಹರಿ ಯುಟ್ಯೂಬ್ ಚಾನೆಲ್ ಶುರುವಾಗಿ ಇಲ್ಲಿಗೆ 10 ವರ್ಷ. ಇಷ್ಟು ಕಡಿಮೆ ಅವದಿಯಲ್ಲಿ ಅದು 1.18 ಕೋಟಿ ಚಂದದಾರರ ಬಳಗ ಹೊಂದಿದೆ. ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ವಿಸ್ತರಣೆ ಗೊಂಡಿದೆ. ಪ್ರತಿ ಭಾಷೆಯಲ್ಲೂ ಒಂದೊಂದು ತಂಡ ಹೊಂದಿದೆ. ಪ್ರತಿ ತಂಡದಲ್ಲೂ 20 ರಿಂದ 25 ಮಂದಿ ಕೆಲಸಗಾರರಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಟೇಶಿ ವೆಂಕಟೇಶ್ ವಿರುದ್ಧ 1 ಕೋಟಿ ರೂ ಮಾನನಷ್ಠ ಮೊಕದ್ದಮೆ ಹೂಡಿದ ರೂಪ ಐಯ್ಯರ್