ETV Bharat / sitara

50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಕುರುಕ್ಷೇತ್ರ.. ಶೀಘ್ರದಲ್ಲೇ ಕಾರ್ಯಕ್ರಮ ಆಯೋಜನೆ - ರೆಬಲ್ ಸ್ಟಾರ್​​ ಅಂಬರೀಶ್

ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಯಶಸ್ವಿ 50 ದಿನಗಳನ್ನು ಪೂರೈಸಿದೆ. ಶೀಘ್ರದಲ್ಲೇ 50 ದಿನಗಳ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.

ದರ್ಶನ್
author img

By

Published : Oct 1, 2019, 3:54 PM IST

ಸ್ಯಾಂಡಲ್​​ವುಡ್ ನ ಬಿಗ್ ಬಜೆಟ್ ಚಿತ್ರ 'ಕುರುಕ್ಷೇತ್ರ' ಬಿಡುಗಡೆಯಾಗಿ ಯಶಸ್ವಿಯಾಗಿ 50 ದಿನ ಪೂರೈಸಿದೆ. ಅಗಸ್ಟ್ 9ರಂದು ರಿಲೀಸಾಗಿದ್ದ ದಚ್ಚು ಸಿನಿಮಾ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ದರ್ಶನ್ ವೃತ್ತಿಜೀವನದಲ್ಲಿ 100 ಕೋಟಿ ರೂಪಾಯಿ ಗಳಿಸಿದ ಸಿನಿಮಾಗಳಲ್ಲಿ ಕುರುಕ್ಷೇತ್ರ ಸಿನಿಮಾ ಎರಡನೆಯದು.

darshan
'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್

ಇದಕ್ಕೂ ಮುನ್ನ ದರ್ಶನ್ ನಟಿಸಿದ್ದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ 100 ದಿನಗಳನ್ನು ಪೂರೈಸಿ 100 ಕೋಟಿ ರೂಪಾಯಿ ಲಾಭ ಮಾಡಿತ್ತು. ಇದೀಗ ದರ್ಶನ್ 50ನೇ ಸಿನಿಮಾ 'ಕುರುಕ್ಷೇತ್ರ' ರಾಜ್ಯದ 50ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ 100 ಕೋಟಿ ರೂಪಾಯಿ ಕೂಡಾ ಗಳಿಸಿದ್ದು ಚರಿತ್ರೆಯ ಪುಟಗಳನ್ನು ಸೇರಿದೆ. ಇನ್ನು, ಕೀನ್ಯಾದ ಮಸಾಯಿ ಮಾರಾ ಕಾಡಿಗೆ ವೈಲ್ಡ್​​ ಪೋಟೋಗ್ರಫಿಗಾಗಿ ತೆರಳಿದ್ದ ದರ್ಶನ್ ಬೆಂಗಳೂರಿಗೆ ವಾಪಸಾಗಿದ್ದಾರೆ. ಶೀಘ್ರವೇ ಚಿತ್ರದ 50 ದಿನಗಳ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಚಿತ್ರದ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.

muniratna
ನಿರ್ಮಾಪಕ ಮುನಿರತ್ನ

ಸ್ಯಾಂಡಲ್​​ವುಡ್​​​ನಲ್ಲಿ ಕುರುಕ್ಷೇತ್ರ ಸಿನಿಮಾ ಇತಿಹಾಸ ಸೃಷ್ಟಿ ಮಾಡಿರುವುದಕ್ಕೆ ಹಲವಾರು ಕಾರಣಗಳಿವೆ. ಕನ್ನಡ ಸಿನಿಮಾ ಕ್ಷೇತ್ರದ ಹಲವಾರು ಹಿರಿಯ ಕಲಾವಿದರುಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 3ಡಿ ತಂತ್ರಜ್ಞಾನದಲ್ಲಿ ಒಂದು ಪೌರಾಣಿಕ ಸಿನಿಮಾ ಮೂಡಿ ಬಂದಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊದಲು. ದುರ್ಯೋಧನ ಆಗಿ ದರ್ಶನ್ ನಟಿಸಿದ್ದು ಇವರೊಂದಿಗೆ, ರೆಬಲ್ ಸ್ಟಾರ್​​ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ರವಿಶಂಕರ್, ಶ್ರೀನಿವಾಸಮೂರ್ತಿ, ಶ್ರೀನಾಥ್, ಭಾರತಿ ವಿಷ್ಣುವರ್ಧನ್, ಸ್ನೇಹ, ಮೇಘನಾ ರಾಜ್, ಹರಿಪ್ರಿಯಾ, ರವಿ ಚೇತನ್, ಸೋನು ಸೂದ್ ಸೇರಿ ಹಲವಾರು ಕಲಾವಿದರು ಅಭಿನಯಿಸಿದ ಚಿತ್ರಕ್ಕೆ ಹಿರಿಯ ನಿರ್ದೇಶನ ನಾಗಣ್ಣ ಸಾರಥ್ಯ ವಹಿಸಿದ್ದರು. ರಾಕ್​​​​ಲೈನ್ ವೆಂಕಟೇಶ್ ಈ ಚಿತ್ರವನ್ನು ವಿತರಣೆ ಮಾಡಿದ್ದರು. ಜೆ ಕೆ ಭಾರವಿ ಅವರ ಕಥಾ ಸಹಾಯ, ಜಯನನ್ ವಿನ್ಸೆಂಟ್ ಛಾಯಾಗ್ರಹಣ, ವಿ. ಹರಿಕೃಷ್ಣ ಅವರ ಸಂಗೀತ, ಜೋನಿ ಹರ್ಷ ಸಂಕಲನ ಈ ಚಿತ್ರಕ್ಕಿದೆ.

ಕುರುಕ್ಷೇತ್ರ 50 ದಿವಸದ ಆಚರಣೆ ಸಧ್ಯದಲ್ಲೇ

ಡಿ ಬಾಸ್ ದರ್ಶನ್ ಅವರ  ಕನ್ನಡ ಚಿತ್ರ ರಂಗದಲ್ಲಿ 3ಡಿ ಹಾಗೂ 2ಡಿ ಅಲ್ಲಿ ಏಕ ಕಾಲದಲ್ಲಿ ಬಿಡುಗಡೆ ಆದ ಪೌರಾಣಿಕ ಚಿತ್ರ ಮುನಿರತ್ನ ಕುರುಕ್ಷೇತ್ರ 100 ಕೋಟಿ ಗಳಿಕೆಯ ಸಿನಿಮಾ ದರ್ಶನ್ ಅವರ ವೃತ್ತಿ ಜೀವನದಲ್ಲಿ ಎರಡನೇ ಬಾರಿ ಎಂಬುದು ನಿಜ. ದರ್ಶನ್ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ನಿಧಾನವಾಗಿ 100 ಕೋಟಿ ಒಟ್ಟಾರೆ ಆಗಿ ಗಳಿಸಿದ ಸಿನಿಮಾ ಹಾಗೂ 100 ದಿವಸ ಪ್ರದರ್ಶನ ಆದ ಸಿನಿಮಾ.

ಆದರೆ ಡಿ ಬಾಸ್ ದರ್ಶನ್ ಅವರ 50 ನೇ ಸಿನಿಮಾ 50 ದಿವಸಕ್ಕೆ ತಲುಪಿ 50 ಕ್ಕೂ ಹೆಚ್ಚು ಪರದೆಗಳಲ್ಲಿ ಅಲ್ಲಿ ಪ್ರದರ್ಶನ ಕಾಣುತ್ತಲಿದ್ದು 100 ಕೋಟಿ ಗಳಿಕೆ ಸಹ ಕಂಡಿದ್ದು ಚರಿತ್ರೆ ಪುಟಗಳಲ್ಲಿ ಸೇರಿದೆ. ಸಧ್ಯಕ್ಕೆ ಕೀನ್ಯಾ ದೇಶದ ಮಸಾಯಿ ಸ್ಥಳದಲ್ಲಿ  ಮಗ ವಿನೀತ್ ಜೊತೆ ವನ್ಯ ಜೀವಿಗಳು, ಆದಿವಾಸಿ ಜನರ ಜೊತೆ ಕೆಲವು ದಿವಸ ಕಾಲ ಕಳೆಯುತ್ತಿರುವ ಡಿ ಬಾಸ್ ದರ್ಶನ್ ಬೆಂಗಳೂರಿಗೆ ಬಂದ ತಕ್ಷಣ ನಿರ್ಮಾಪಕ ಮುನಿರತ್ನ ನಾಯ್ಡು ಕುರುಕ್ಷೇತ್ರ ಚಿತ್ರದ 50 ದಿವಸ ಪ್ರದರ್ಶನದ ಕಾರ್ಯಕ್ರಮ ಯೋಜನೆ ಸಿದ್ದತೆ ಬಗ್ಗೆ ಚರ್ಚೆ ಆಗಲಿದೆ. ದರ್ಶನ್ ಅವರು ವಿದೇಶದಿಂದಲೇ ಅಭಿಮಾನಿಗಳಿಗೆ ಕುರುಕ್ಷೇತ್ರ ಯಶಸ್ಸಿಗೆ ವಂದನೆ ತಿಳಿಸಿದ್ದಾರೆ.

ಹಲವಾರು ಕಡೆ ದರ್ಶನ್ ಅಭಿಮಾನಿಗಳು 50 ದಿವಸ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. 9 ನೇ ಆಗಸ್ಟ್ ರಾಷ್ಟ್ರಾದ್ಯಂತ ಹಾಗೂ ಆಮೇಲೆ ವಿದೇಶಗಳಲ್ಲಿ ಕುರುಕ್ಷೇತ್ರ ಬಿಡುಗಡೆ ಆಗಿ ಭರ್ಜರಿ ಆಗಿ ಯಶಸ್ಸನ್ನು ಕಂಡಿತ್ತು.

ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಈ ಮುನಿರತ್ನ ಕುರುಕ್ಷೇತ್ರ ದೊಡ್ಡ ಇತಿಹಾಸ ಸೃಷ್ಟಿ ಮಾಡಿರುವುದಕ್ಕೆ ಹಲವಾರು ಕಾರಣಗಳಿವೆ. ಕನ್ನಡ ಸಿನಿಮಾ ಕ್ಷೇತ್ರದಿಂದ ಹಲವಾರು ಹಿರಿಯ ಕಲಾವಿದರುಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 3ಡಿ ತಂತ್ರಜ್ಞಾನದಲ್ಲಿ ಒಂದು ಪೌರಾಣಿಕ ಸಿನಿಮಾ ಮೂಡಿಬಂದಿರುವುದು ಭಾರತೀಯ ಚಿತ್ರ ರಂಗ ಇತಿಹಾಸದಲ್ಲೇ ಮೊದಲು.

ದುರ್ಯೋಧನ ಆದ ದರ್ಶನ್ ಜೊತೆ, ಡಾ ಅಂಬರೀಶ್, ವಿ ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ರವಿಶಂಕರ್, ಶ್ರೀನಿವಾಸಮೂರ್ತಿ, ಡಾ ಶ್ರೀನಾಥ್, ಡಾ ಭಾರತಿ ವಿಷ್ಣುವರ್ಧನ,ಸ್ನೇಹ, ಮೇಘನ ರಾಜ್, ಹರಿಪ್ರಿಯಾ, ರವಿ ಚೇತನ್, ಸೋನು ಸೂದ್, ದನಿಷ್ ಅಕ್ಥರ್…. ಹೀಗೆ ಹಲವಾರು ಕಲಾವಿದರುಗಳು ಅಭಿನಯಿಸಿದ ಚಿತ್ರಕ್ಕೆ ಹಿರಿಯ ನಿರ್ದೇಶನ ನಾಗಣ್ಣ ಸಾರತ್ಯವನ್ನು ವಹಿಸಿದವರು.

185 ನಿಮಿಷದ ಈ ಮುನಿರತ್ನ ಕುರುಕ್ಷೇತ್ರ ಸಿನಿಮಾಕ್ಕೆ ಹಣ ಹೂಡಿದವರು ಮುನಿರತ್ನ ನಾಯ್ಡು. ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ಮತ್ತು ನಟ ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನೂ ವಿತರಣೆ ಮಾಡಿರುವವರು.

ಜೆ ಕೆ ಭಾರವಿ ಅವರ ಕಥಾ ಸಹಾಯ, ಜಯನನ್ ವಿನ್ಸೆಂಟ್ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ, ಜೋನಿ ಹರ್ಷ ಸಂಕಲನ ಈ ಬಹು ದೊಡ್ಡ ಬಜೆಟಿನ ಸಿನಿಮಾಕ್ಕೆ ಮಾಡಿರುವರು. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.