ಈಗಾಗಲೇ ನಿಶ್ಚಯವಾಗಿರುವಂತೆ ಆಗಸ್ಟ್ 2 ರಂದು ದರ್ಶನ್ ಅಭಿನಯದ 'ಮುನಿರತ್ನ ಕುರುಕ್ಷೇತ್ರ' ಸಿನಿಮಾ ಬಿಡುಗಡೆ ಡೌಟು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣೆಗೆ.
ಶಾಸಕರು ಆಗಿರುವ ನಿರ್ಮಾಪಕ ಮುನಿರತ್ನ ನಾಯ್ಡು ಕೆಲವು ದಿವಸಗಳ ಕಾಲ ಮುಂಬೈನಲ್ಲಿ ಅತೃಪ್ತ ಶಾಸಕರಲ್ಲಿ ಒಬ್ಬರಾಗಿ ಇದದ್ದು ಈಗ ‘ಕುರುಕ್ಷೇತ್ರ’ ಚಟುವಟಿಕೆಗಳಿಗೆ ಹಾನಿಯಾಗಿದೆ. ಭಾರತೀಯ ಜನತಾ ಪಾರ್ಟಿ ಮುಂದೆ ಬಂದು ಸರ್ಕಾರ ರಚನೆ ಆಗುವವರೆಗೂ 15 ಅತೃಪ್ತ ಶಾಸಕರು ಬೆಂಗಳೂರಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಮುಂಬೈಯಿಂದ ಈಗ ಪುಣೆಯಲ್ಲಿ ಅವರೆಲ್ಲರೂ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ.
ಇತ್ತ ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ಮುನಿರತ್ನ ನಾಯ್ಡು ಅವರ ಅವಶ್ಯಕತೆಯಿದೆ. ಈಗಾಗಲೇ 20 ದಿವಸಗಳಿಂದ ಚಿತ್ರಕ್ಕೆ ಸಂಬಂಧ ಪಟ್ಟ ಚಟುವಟಿಕೆ ಸ್ಥಗಿತವಾಗಿದೆ. ಹಾಗಾಗಿ 'ಡಿ ಬಾಸ್' 50 ನೇ ಸಿನಿಮಾ ಆಗಸ್ಟ್ 2 ರಂದು ಬಿಡುಗಡೆ ಆಗುವುದು ಡೌಟು ಎನ್ನುವ ಮಾತು ಗಾಂಧಿನಗರದಲ್ಲಿ ಶುರು ಆಗಿದೆ.