ಕೊಲ್ಲಂ (ಕೇರಳ): ಅಂಗನವಾಡಿ ಶಿಕ್ಷಕಿಯರ ಬಗ್ಗೆ ತಕರಾರು ತೆಗೆದ ಆರೋಪದ ಮೇಲೆ ಕೇರಳ ರಾಜ್ಯ ಮಹಿಳಾ ಆಯೋಗ (ಕೆಎಸ್‌ಡಬ್ಲ್ಯುಸಿ) ಮಲಯಾಳಂ ನಟ ಮತ್ತು ನಿರ್ದೇಶಕ ಶ್ರೀನಿವಾಸನ್ ವಿರುದ್ಧ ಪ್ರಕರಣ ದಾಖಲಿಸಿದೆ.
ಶ್ರೀನಿವಾಸನ್ ಮಹಿಳೆಯರ ವಿರುದ್ಧ ಅವಹೇಳನಕಾರಿ ವಿಚಾರಗಳನ್ನು ಉಲ್ಲೇಖಿಸಿದ್ದು, ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಕೆಎಸ್‌ಡಬ್ಲ್ಯುಸಿ ಸದಸ್ಯೆ ಶಾಹಿದಾ ಕಮಲ್ ಒತ್ತಾಯಿಸಿದ್ದಾರೆ.
ಖಾಸಗಿ ಚಾನೆಲ್ನ ಸಂದರ್ಶನದಲ್ಲಿ ನೀಡಿದ ಹೇಳಿಕೆಯ ಆಧಾರದ ಮೇಲೆ ಈ ದೂರು ದಾಖಲಾಗಿದೆ.
ವಿದೇಶಗಳಲ್ಲಿ ಮಕ್ಕಳಿಗೆ ತಜ್ಞರು ಕಲಿಸುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದವರು ಮಕ್ಕಳಿಗೆ ಕಲಿಸುತ್ತಾರೆ. ಈ ಅನಕ್ಷರಸ್ಥ ಮಹಿಳೆಯರ ಪಾಠಕ್ಕಿಂತ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶ್ರೀನಿವಾಸನ್ ಹೇಳಿದ್ದರು.