ETV Bharat / sitara

ಆ ವಿಶೇಷ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ 'ಲವ್​ ಮಾಕ್​ಟೇಲ್' ಜೋಡಿ...! - Milana nagaraj marriage dated fixed

ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಕೃಷ್ಣ ಹಾಗೂ ಮಿಲನ ನಾಗರಾಜ್​ ಮುಂದಿನ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನದಂದೇ ಹಸೆಮಣಿ ಏರುತ್ತಿದೆ. ವಿಶೇಷ ಫೋಟೋಶೂಟ್ ಮಾಡಿಸುವ ಮೂಲಕ ಈ ಜೋಡಿ ತಮ್ಮ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿದೆ.

Darling Krishna marriage date fixed
ಡಾರ್ಲಿಂಗ್ ಕೃಷ್ಣ ಮದುವೆ ದಿನಾಂಕ ಫಿಕ್ಸ್
author img

By

Published : Nov 4, 2020, 11:37 AM IST

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಲವ್ ಮಾಕ್​​ಟೇಲ್'​​​ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ತಿಳಿದ ವಿಚಾರ. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಸಿನಿಮಾ ಅಕ್ಟೋಬರ್ 16 ರಂದು ಥಿಯೇಟರ್​​​ನಲ್ಲಿ ರೀ ರಿಲೀಸ್ ಆಗಿತ್ತು.

Darling Krishna marriage date fixed
2021 ಫೆಬ್ರವರಿ 14 ರಂದು ಮದುವೆಯಾಗುತ್ತಿರುವ ಜೋಡಿ

ಇನ್ನು ಈ ಸಿನಿಮಾ ಮೂಲಕ ಕೃಷ್ಣ ಹಾಗೂ ಮಿಲನಾ ಇಬ್ಬರೂ ನಿಜ ಜೀವನದಲ್ಲಿ ಕೂಡಾ ಪ್ರೇಮಿಗಳು ಎಂಬ ವಿಚಾರ ರಿವೀಲ್ ಆಗಿತ್ತು. ಈ ಜೋಡಿ ಸದ್ಯಕ್ಕೆ ಲವ್ ಮಾಕ್​ಟೇಲ್ ಸೀಕ್ವೆಲ್​​​ನಲ್ಲಿ ಬ್ಯುಸಿ ಇದೆ. ಇದರ ನಡುವೆ ಅಭಿಮಾನಿಗಳಿಗೆ ಈ ಜೋಡಿ ಗುಡ್ ನ್ಯೂಸ್ ಕೊಟ್ಟಿದೆ. ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಈ ಜೋಡಿ ಈಗ ಉತ್ತರ ನೀಡಿದೆ. 2021 ಫೆಬ್ರವರಿ 14 ಪ್ರೇಮಿಗಳ ದಿನದಂದು ಕೃಷ್ಣ-ಮಿಲನಾ ಸಪ್ತಪದಿ ತುಳಿಯುತ್ತಿದ್ದಾರೆ.

Darling Krishna marriage date fixed
ಕೃಷ್ಣ - ಮಿಲನಾ ನಾಗರಾಜ್

ತಮ್ಮ ಮದುವೆ ದಿನಾಂಕವನ್ನು ಈ ಜೋಡಿ ಬಹಳ ಡಿಫರೆಂಟ್ ಆಗಿ ಅನೌನ್ಸ್ ಮಾಡಿದೆ. ಇದಕ್ಕಾಗಿ ಇವರಿಬ್ಬರೂ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಜೋಡಿಗೆ ಅಭಿಮಾನಿಗಳು ಹಾಗೂ ಸ್ಯಾಂಡಲ್​​ವುಡ್ ಗಣ್ಯರು ಶುಭ ಕೋರುತ್ತಿದ್ದಾರೆ. ಮದುವೆಗೂ ಮುನ್ನವೇ 'ಲವ್ ಮಾಕ್​​ಟೇಲ್ -2' ತೆರೆ ಕಂಡರೂ ಅಚ್ಚರಿ ಇಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.