ಸ್ಯಾಂಡಲ್ವುಡ್ನಲ್ಲಿ ನಟ ಅಜಯ್ ರಾವ್ ಹೆಸರಿಗೆ ಕೃಷ್ಣ ಹೆಸರಿನ ಚಿತ್ರಗಳು ತಳುಕು ಹಾಕಿಕೊಂಡಿವೆ. ಇದೀಗ 'ಕಿರಿಕ್ ಕೃಷ್ಣ' ಹೆಸರಿನ ಹೊಸ ಸಿನಿಮಾವೊಂದು ಸೆಟ್ಟೇರುತ್ತಿದೆ. ಆದರೆ ಇದರಲ್ಲಿ ಅಜಯ್ ರಾವ್ ನಟಿಸುತ್ತಿಲ್ಲ. ಹೊಸ ಪ್ರತಿಭೆ ಕೃಷ್ಣ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಈಗಾಗಲೇ 'ಕಿರಿಕ್ ಕೃಷ್ಣ' ಚಿತ್ರೀಕರಣ ಆರಂಭವಾಗಿದೆ. ಮುಗ್ಧ ಯುವಕನೊಬ್ಬ ತನ್ನ ಗ್ರಾಮದ ಮುಖ್ಯಸ್ಥರ ಕೈಗೆ ಸಿಲುಕಿ ಹೇಗೆ ನರಳುತ್ತಾನೆ...ಕೊನೆಯಲ್ಲಿ ಆತ ತನಗಾದ ಅನ್ಯಾಯಕ್ಕೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆ. ಫಸ್ಟ್ ಹಾಫ್ನಲ್ಲಿ ಸೈಲೆಂಟ್ ಆಗಿದ್ದ ನಟ ಸೆಕೆಂಡ್ ಹಾಫ್ನಲ್ಲಿ ವೈಲೆಂಟ್ ಆಗುತ್ತಾನೆ.

ಶ್ರೀ ಕೃಷ್ಣ ಕಂಬೈನ್ಸ್ ಅಡಿಯಲ್ಲಿ ನಿರ್ಮಾಪಕ ಮುನಿರಾಜು, ಜಯರಾಮಯ್ಯ ಹಾಗೂ ಆನೇಕಲ್ ಗೌತಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಯಕ ಕೃಷ್ಣ ಚಿತ್ರದಲ್ಲಿ ನಟಿಸಿರುವುದಲ್ಲದೆ ತಾವೇ ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ಜಾನಿ ಮಾಸ್ಟರ್ ಸಾಹಸ, ಕುಮಾರ್ ಸಂಕಲನ, ದೀಪು ಛಾಯಾಗ್ರಹಣ ಮಾಡುತ್ತಿದ್ದಾರೆ.

ನಾಯಕ ಕೃಷ್ಣ ಜೊತೆಗೆ ಭಾನುಶ್ರೀ, ಶೈಲೂ, ಜ್ಯೋತಿ, ಶೋಭರಾಜ್, ರಂಗಾಯಣ ರಘು, ತಬಲಾ ನಾಣಿ, ಮೂಗು ಸುರೇಶ್, ಕಲ್ಯಾಣಿ, ಕಲ್ಯಾಣಿ ರಾಜು, ಮೈಕೊ ನಾಗರಾಜ್ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.