ETV Bharat / sitara

ಹದಗೆಟ್ಟ ರಸ್ತೆಗಳು... ಬಿಬಿಎಂಪಿ ವಿರುದ್ಧ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಕಿಡಿ

ಗಾಢ ನಿದ್ರೆಯಲ್ಲಿ ಮುಳುಗಿದಂತಿರುವ ಬಿಬಿಎಂಪಿ ಅಧಿಕಾರಿಗಳಿಗೆ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಕರ್ತವ್ಯ ನೆನಪಿಸಿದ್ದಾರೆ.

ಚಿತ್ರಕೃಪೆ: ಟ್ವಿಟರ್​​
author img

By

Published : Jul 24, 2019, 9:52 AM IST

ಬೆಂಗಳೂರು: ರಸ್ತೆಗಳನ್ನು ದುರಸ್ಥಿಗೊಳಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿರುವ ಬಿಬಿಎಂಪಿ ವಿರುದ್ಧ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್ ಕಿಡಿ ಕಾರಿದ್ದಾರೆ.

ನಗರದ ಹಳನಾಯಕನಹಳ್ಳಿ, ಕಸವನಹಳ್ಳಿ, ದೊಡ್ಡಕನಲ್ಲಿ, ಹರ್ಲೂರು ಹಾಗೂ ಜನಸಂದ್ರ ಏರಿಯಾದ ರಸ್ತೆಗಳೆಲ್ಲ ಹಾಳಾಗಿವೆ. ಸುರಿದ ಮಳೆಯಿಂದ ರಸ್ತೆಯಲ್ಲಿರುವ ಹೊಂಡಗಳಲ್ಲಿ ನೀರು ತುಂಬಿಕೊಂಡಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು, ದ್ವಿಚಕ್ರವಾಹನ ಸವಾರರು ಸುಗಮ ಸಂಚಾರಕ್ಕೆ ಪರದಾಡುವಂತಾಗಿದೆ. ನಿತ್ಯ ನರಕ ಅನುಭವಿಸುತ್ತಿರುವ ಇಲ್ಲಿಯ ನಿವಾಸಿಗಳ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿಲ್ಲ.

ಅಧೋಗತಿ ತಲುಪಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ನಟ ಸುದೀಪ್ ಅವರ ಪತ್ನಿ ಪ್ರಿಯಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನೆನಪಿಸಬೇಕಾಗಿರುವುದು ವಿಷಾದಕರ. ದಯವಿಟ್ಟು ಈ ವಿಷಯವನ್ನು ತಕ್ಷಣವೇ ಗಮನಿಸಿ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.