ETV Bharat / sitara

ಕಿಚ್ಚನ ಹೆಸರಿನಲ್ಲಿ ತೆರೆಯಿತು ಗ್ರಂಥಾಲಯ, ಇದು ಕಿಚ್ಚನ ಸಾಮ್ರಾಜ್ಯ ಎಂದ ಅಭಿಮಾನಿಗಳು

author img

By

Published : Sep 5, 2019, 5:56 PM IST

ಕಿಚ್ಚನ ಅಭಿಮಾನಿಗಳು ತನ್ನ ಹೀರೋ ಹೆಸರಿನಲ್ಲಿ ಗ್ರಂಥಾಲಯ ತೆರೆದಿದ್ದಾರೆ. ಗ್ರಂಥಾಲಯದ ಮೇಲೆ ಕಿಚ್ಚ ಸುದೀಪ್​ ಗ್ರಂಥಾಲಯ. ಇದು ಕಿಚ್ಚನ ಸಾಮ್ರಾಜ್ಯ ಎಂದು ಬರೆಯಲಾಗಿದೆ.  ಇನ್ನು ಗ್ರಂಥಾಲಯ ಸಿದ್ದವಾಗುತ್ತಿರುವ ಫೋಟೋವನ್ನು ಬಸಯ್ಯ ಎಂಬುವವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಕಾರ್ಯಕ್ಕೆ ಕಿಚ್ಚಾ ಸುದೀಪ್​ ಅಭಿನಂದನೆ ಸಲ್ಲಿಸಿದ್ದು, ತಮ್ಮ ಖಾತೆಯಲ್ಲಿ ಗ್ರಂಥಾಲಯದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕಿಚ್ಚನ ಹೆಸರಿನಲ್ಲಿ ತೆರೆಯಿತು ಗ್ರಂಥಾಲಯ

ಸಿನಿಮಾ ನಾಯಕ ಹೆಸರುಗಳಲ್ಲಿ ಹೋಟೆಲ್​​ ತೆರೆದಿರುವುದನ್ನು ನೋಡಿದ್ದೀರಿ, ತಮ್ಮ ಮಕ್ಕಳಿಗೆ ನಟನ ಹೆಸರನ್ನು ನಾಮಕರಣ ಮಾಡಿರುವುದನ್ನು ನೋಡಿದ್ದೀರಿ, ತಮ್ಮ ವಾಹನಗಳಿಗೆ ನೆಚ್ಚಿನ ನಟನ ಚಿತ್ರಗಳನ್ನು ಹಾಕಿಸಿ ಅವರ ಹೆಸರುಗಳನ್ನು ಬರೆಸಿಕೊಳ್ಳುವುದನ್ನೂ ನೋಡಿದ್ದೀರಿ. ಅಷ್ಟೇ ಯಾಕೆ ತಮ್ಮ ಎದೆಯ ಮೇಲೆ ಅಭಿಮಾನದಿಂದ ತನ್ನ ನಾಯಕನ ಹಚ್ಚೆ ಹಾಕಸಿಕೊಳ್ಳುವನ್ನೂ ನೋಡಿದ್ದೀರಿ. ಆದ್ರೆ ಇಲ್ಲಿ ಕಿಚ್ಚ ಸುದೀಪ್​ ಅಭಿಮಾನಿಗಳು ಒಂದೊಳ್ಳೆ ಕೆಲಸ ಮಾಡಿ ಸುದೀಪ್​ ಅವರಿಂದಲೇ ಸೈ ಎನ್ನಿಸಿಕೊಂಡಿದ್ದಾರೆ.

ಹೌದು, ಕಿಚ್ಚನ ಅಭಿಮಾನಿಗಳು ತನ್ನ ಹೀರೋ ಹೆಸರಿನಲ್ಲಿ ಗ್ರಂಥಾಲಯವನ್ನು ತೆರೆದಿದ್ದಾರೆ. ಗ್ರಂಥಾಲಯದ ಮೇಲೆ ಕಿಚ್ಚ ಸುದೀಪ್​ ಗ್ರಂಥಾಲಯ. ಇದು ಕಿಚ್ಚನ ಸಾಮ್ರಾಜ್ಯ ಎಂದು ಬರೆಯಲಾಗಿದೆ. ಇನ್ನು ಗ್ರಂಥಾಲಯ ಸಿದ್ದವಾಗುತ್ತಿರುವ ಫೋಟೋವನ್ನು ಬಸಯ್ಯ ಎಂಬುವವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಕಾರ್ಯಕ್ಕೆ ಕಿಚ್ಚ ಸುದೀಪ್​ ಅಭಿನಂದನೆ ಸಲ್ಲಿಸಿದ್ದು, ತಮ್ಮ ಖಾತೆಯಲ್ಲಿ ಗ್ರಂಥಾಲಯದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಸಯ್ಯ ಎಂಬುವವರು ಕಿಚ್ಚ ಸುದೀಪ್​ ಹೆಸರಿನ ಗ್ರಂಥಾಲಯದ ಫೋಟೋ ಹಾಕಿ, ಅಭಿಮಾನಿಗಳ ಆರಾಧ್ಯ ದೈವ ನಮ್ಮ ಕಿಚ್ಚ ಸುದೀಪ್ ಅಣ್ಣಾನ ಅಭಿಮಾನಕ್ಕೆ ಕೊನೆಯೇ ಇಲ್ಲ....... ಜೈ ಕಿಚ್ಚ ಸುದೀಪ್ ಅಣ್ಣಾ 😍❤️, ಕಿಚ್ಚನ ಹುಟ್ಟುಹಬ್ಬದ ದಿನದ ಪ್ರಯುಕ್ತ ಅವರ ಹೆಸರಿನಲ್ಲಿ ಸಿದ್ಧಗೊಂಡಿರುವ ಗ್ರಂಥಾಲಯ ಎಂದು ಬರೆದುಕೊಂಡಿದ್ದಾರೆ.

Intro:Body:

cinema

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.