ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ಖಳನಟ ಗರುಡ ಪಾತ್ರದಲ್ಲಿ ಮಿಂಚಿದ್ದ ನಟ ರಾಮ್ ಅವರಿಗೆ ಕೆಜಿಎಫ್ ಸಿನಿಮಾ ನಂತ್ರ ಸೌತ್ ಇಂಡಿಯಾದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.
ಇದೀಗ ರಾಮ್ ಕೆಜಿಎಫ್ ಸಿನಿಮಾ ನಂತ್ರ ತೆಲುಗು ಹಾಗೂ ತಮಿಳು ಚಿತ್ರಗಳತ್ತ ಮುಖ ಮಾಡಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಕಾರ್ತಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಲ್ಲಿ ರಾಮ್ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.
![Kgf Villan Garada Busy With Kollywood](https://etvbharatimages.akamaized.net/etvbharat/prod-images/kn-bng-03-kgf-villan-garada-busy-with-kollywood-video-7204735_25122019161008_2512f_1577270408_859.jpg)
ಇನ್ನು ಜಯಂ ರವಿ ಜೊತೆ ಒಂದು ಸಿನಿಮಾ ಹಾಗೂ ತೆಲುಗಿನಲ್ಲಿ ಒಂದು ಸಿನಿಮಾ ಮತ್ತು ಕನ್ನಡದಲ್ಲಿ ಎರಡು ಸಿನಿಮಾಳಲ್ಲಿ ಇವರು ನಟಿಸುತ್ತಿದ್ದಾರಂತೆ. ಹೀಗಾಂತ ಸ್ವತಃ ರಾಮ್ ಮಾಹಿತಿ ಹಂಚಿಕೊಂಡ್ರು.
ಇನ್ನು ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ ರಾಮ್, ನನ್ನ ಗುರುಗಳಾದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಾವಾಗಲೂ ಮಾರ್ಗದರ್ಶಕರಾಗಿರೋ ಯಶ್ ಅವ್ರ ನಂಬಿಕೆಯಂತೆ ಸಿನಿಮಾಗಳನ್ನ ಮಾಡ್ತಾ ಇದ್ದೇನೆ. ಪ್ರಶಾಂತ್ ನೀಲ್ ನನಗೆ ಒಂದು ವೇದಿಕೆ ಕೊಟ್ಟಿದ್ದಾರೆ. ಅದನ್ನು ಹಾಗೆಯೇ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದು ನಟ ರಾಮ್ ಹೇಳಿದ್ರು.