ಕನ್ನಡ ಚಿತ್ರರಂಗದ ಮಾರ್ಕೆಟ್ನ್ನು ವಿಶ್ವದಾದ್ಯಂತ ಇನ್ನಷ್ಟು ವಿಸ್ತರಿಸಿದ ಸಿನಿಮಾ ಕೆಜಿಎಫ್. ಈ ಸಿನಿಮಾದಿಂದ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿತು. ಇದೀಗ ಕೆಜಿಎಫ್ ಚಿತ್ರದ ಹಾಡುಗಳು ಹಾಗೂ ಬ್ರ್ಯಾಕ್‌ಗ್ರೌಂಡ್ ಸ್ಕೋರ್ನಿಂದ ಗಮನ ಸೆಳೆದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಬಾಲಿವುಡ್ನಲ್ಲಿ ಖದರ್ ತೋರಿಸಲು ಸಜ್ಜಾಗಿದ್ದಾರೆ.
![kgf-music-director-ravi-basrur-to work-with-salman-khan movie](https://etvbharatimages.akamaized.net/etvbharat/prod-images/kn-bng-04-salman-khan-cinemadhali-kgf-music-director-ravibasaur-7204735_13102021210838_1310f_1634139518_124.jpg)
ಹೌದು, ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ಸಿನಿಮಾದಲ್ಲಿ ರವಿ ಬಸ್ರೂರ್ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸಲ್ಮಾನ್ ನಟಿಸಿರುವ 'Antim: The Final Truth' ಚಿತ್ರದಲ್ಲಿ ರವಿ ಹಿನ್ನೆಲೆ ಸಂಗೀತದ ಜೊತೆಗೆ ಹಾಡುಗಳನ್ನ ಮಾಡುವ ಹೊಣೆ ಹೊತ್ತಿದ್ದಾರೆ. ಸದ್ಯ ತಮ್ಮ ಮೊದಲ ಬಾಲಿವುಡ್ ಚಿತ್ರದ ಮೋಷನ್ ಪೋಸ್ಟರ್ನ್ನು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಮೋಷನ್ ಪೋಸ್ಟರ್ನಲ್ಲಿರುವ ಬ್ಯಾಕ್‌ಗ್ರೌಂಡ್ ಸ್ಕೋರ್ ಕೂಡ ಈಗಾಗಲೇ ಜನರ ಮೆಚ್ಚುಗೆ ಗಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆೆ. 'Antim: The Final Truth' ಚಿತ್ರವು ನವೆಂಬರ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಸಲ್ಮಾನ್ ಜೊತೆಗೆ ಅವರ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಕೂಡ ನಟಿಸಿರುವುದು ವಿಶೇಷವಾಗಿದೆ. ಚಿತ್ರದಲ್ಲಿ ಆಯುಷ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
-
🥰 VERY HAPPY AND EXCITED TO HAVE ASSOCIATED WITH THE BHAIJAAN OF INDIA @beingsalmankhan ❤️FOR MY FIRST MOVIE IN BOLLYWOOD FOR BACKGROUND SCORE AND SONGS . HOPING TO PLEASE YOU ALL GOIN FORWARD IN THIS JOURNEY 🙏🏼 ❤️@SKFilmsOfficial @sachin_basrur #BharathMadhusudanan pic.twitter.com/guY8SJ86KL
— Ravi Basrur (@RaviBasrur) October 13, 2021 " class="align-text-top noRightClick twitterSection" data="
">🥰 VERY HAPPY AND EXCITED TO HAVE ASSOCIATED WITH THE BHAIJAAN OF INDIA @beingsalmankhan ❤️FOR MY FIRST MOVIE IN BOLLYWOOD FOR BACKGROUND SCORE AND SONGS . HOPING TO PLEASE YOU ALL GOIN FORWARD IN THIS JOURNEY 🙏🏼 ❤️@SKFilmsOfficial @sachin_basrur #BharathMadhusudanan pic.twitter.com/guY8SJ86KL
— Ravi Basrur (@RaviBasrur) October 13, 2021🥰 VERY HAPPY AND EXCITED TO HAVE ASSOCIATED WITH THE BHAIJAAN OF INDIA @beingsalmankhan ❤️FOR MY FIRST MOVIE IN BOLLYWOOD FOR BACKGROUND SCORE AND SONGS . HOPING TO PLEASE YOU ALL GOIN FORWARD IN THIS JOURNEY 🙏🏼 ❤️@SKFilmsOfficial @sachin_basrur #BharathMadhusudanan pic.twitter.com/guY8SJ86KL
— Ravi Basrur (@RaviBasrur) October 13, 2021
2014ರಲ್ಲಿ ತೆರೆಕಂಡ 'ಉಗ್ರಂ' ಸಿನಿಮಾ ಮೂಲಕ ರವಿ ಬಸ್ರೂರ್, ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಅಂದಿನಿಂದ ಪ್ರಶಾಂತ್ ಜೊತೆಗೆ ರವಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. 'ಉಗ್ರಂ' ಹಾಡುಗಳು ಕೂಡ ಹಿಟ್ ಆಗಿದ್ದವು. ಈ ಚಿತ್ರದ ಬಳಿಕ ಕೆಜಿಎಫ್ ಚಾಪ್ಟರ್-1 ದೊಡ್ಡ ಯಶಸ್ಸು ಗಳಿಸಿದ್ದು, ರವಿ ಬಸ್ರೂರ್ ಅದೃಷ್ಟ ಬದಲಾಯಿತು.
ಸದ್ಯ ರವಿ ಬಸ್ರೂರ್ ಕೆಜಿಎಫ್ ಚಾಪ್ಟರ್-2, ಪ್ರಭಾಸ್ ಅಭಿನಯದ ಸಲಾರ್, ಶ್ರೀಮುರಳಿ ನಟನೆಯ ಮದಗಜ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೇವಲ ಸಂಗೀತ ನಿರ್ದೇಶನ ಮಾತ್ರವಲ್ಲದೆ ಆಗಾಗ ಸಿನಿಮಾ ನಿರ್ದೇಶನದ ಮೂಲಕವೂ ರವಿ ಗಮನ ಸೆಳೆಯುತ್ತಿರುತ್ತಾರೆ.
ಇದನ್ನೂ ಓದಿ: ಗೋವಾದಲ್ಲಿ ರಜಾ -ಮಜಾ.. ಗೆಳೆಯನೊಂದಿಗೆ ಜಾಲಿ ಮೂಡ್ನಲ್ಲಿ ನಟಿ ಅಲಯಾ